Heart attack :ಕೋವಿಡ್ ವ್ಯಾಕ್ಸಿನ್ ಕಾರಣವೇ? ಅಧ್ಯಯನ ವರದಿ ಹೇಳಿದ್ದೇನು?
Heart attack :ಕೋವಿಡ್ ವ್ಯಾಕ್ಸಿನ್ ಕಾರಣವೇ? ಅಧ್ಯಯನ ವರದಿ ಹೇಳಿದ್ದೇನು?
ನವದೆಹಲಿ : ಕೋವಿಡ್ (covid) ನಂತರ ವಯಸ್ಕರಲ್ಲಿ ಸಂಭವಿಸುತ್ತಿರುವ ದೀಢೀರ್ ಹೃದಯಘಾತಕ್ಕೆ ಕೋವಿಡ್ ವ್ಯಾಕ್ಸಿನ್ ಕಾರಣವಲ್ಲ ಎಂದು ಐಸಿಎಂಆರ್(ICMR) ಮತ್ತು ಏಮ್ಸ್ ನಡೆಸಿದ ಜಂಟಿ ಅಧ್ಯಯನ ವರದಿ ಸ್ಪಷ್ಟಪಡಿಸಿದೆ.
ಹೃದಯಘಾತಕ್ಕೆ ( heart attack) ಬದಲಾದ ಜೀವನ ಶೈಲಿ, ಅನುವಂಶಿಯ ಹಿನ್ನಲೆಗಳು ಕಾರಣ ಎಂದು ಅದು ವಿವರಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಯುವಜನರಲ್ಲಿ ಕೋವಿಡ್ -19 ಲಸಿಕೆಗಳು ಮತ್ತು ಹೃದಯಾಘಾತದ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.
ಐ.ಸಿ.ಎಂ.ಆರ್‌ನ ರಾಷ್ಟ್ರೀಯ ಸಾಂಕ್ರಾಮಿಕ ರೋಗ ವಿಜ್ಞಾನ ಸಂಸ್ಥೆ (NIE) ಮೇ-ಆಗಸ್ಟ್ 2023ರ ನಡುವೆ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 47 ಆಸ್ಪತ್ರೆಗಳಲ್ಲಿ "Factors associated with unexplained sudden deaths among adults aged 18–45 years in India" ಎಂಬ ಶೀರ್ಷಿಕೆಯಡಿಯಲ್ಲಿ ಮೊದಲ ಅಧ್ಯಯನ ನಡೆಸಿತು.
ಈ ಅಧ್ಯಯನವು ಅಕ್ಟೋಬರ್ 2021 ರಿಂದ ಮಾರ್ಚ್ 2023 ರ ನಡುವೆ ಸಂಭವಿಸಿದ ಹಠಾತ್ ಮರಣಗಳನ್ನು ಅಧ್ಯಯನ ಮಾಡಿ ವಿಶ್ಲೇಷಿಸಿದೆ.
ಕೋವಿಡ್-19 ಲಸಿಕೆಯಿಂದ ಹಠಾತ್ ಮರಣದ ಅಪಾಯ ಹೆಚ್ಚುವುದಿಲ್ಲ ಎಂದು ಈ ಅಧ್ಯಯನ ತೋರಿಸಿದೆ.
ಎರಡನೇ ಅಧ್ಯಯನದಲ್ಲಿ ಏಮ್ಸ್ ದೆಹಲಿಯಲ್ಲಿ ಐಸಿಎಂಆರ್‌ನ ಸಹಯೋಗದೊಂದಿಗೆ "Establishing the cause in sudden unexplained deaths in young" ಎಂಬ ಶೀರ್ಷಿಕೆಯಡಿಯಲ್ಲಿ ನಡೆಯುತ್ತಿರುವ ಸಂಶೋಧನೆಯು ಯುವಕರಲ್ಲಿ ಹಠಾತ್ ಮರಣದ ಕಾರಣಗಳನ್ನು ಗುರುತಿಸುತ್ತಿದೆ. ಪ್ರಾಥಮಿಕ ಫಲಿತಾಂಶಗಳು ಹೃದಯಾಘಾತ (myocardial infarction), ಆನುವಂಶಿಕ ಕಾರಣಗಳು ಮತ್ತು ಅನಾರೋಗ್ಯಕರ ಜೀವನಶೈಲಿಯನ್ನು ಪ್ರಮುಖ ಕಾರಣಗಳಾಗಿ ಗುರುತಿಸಿವೆ.
ಇದನ್ನೂ ಓದಿ:-ನಿಮ್ಮ ಆರೋಗ್ಯಕ್ಕೆ ಮನೆಮದ್ದು! ಗ್ಯಾಸ್ ಸಮಸ್ಯೆಗೆ ಇಲ್ಲಿದೆ ಪರಿಹಾರ.
ಈ ವರದಿಗಳ ಬೆನ್ನಲೆ ಕೊವಿಡ್-19 ಲಸಿಕೆಯನ್ನು ಹೃದಯಾಘಾತಕ್ಕೆ ಸಂಬಂಧಿಸುವ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ದೃಢಪಡಿಸಿದೆ. ಲಸಿಕೆಯ ಬಗ್ಗೆ ಆಧಾರರಹಿತ ಆರೋಪಗಳು ಸಾರ್ವಜನಿಕರಲ್ಲಿ ಭಯವನ್ನುಂಟುಮಾಡಿ, ಲಸಿಕೆಯ ವಿರುದ್ಧ ಗೊಂದಲ ಸೃಷ್ಟಿಸಬಹುದು, ಇದು ಸಾರ್ವಜನಿಕ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂದು ಅದು ಹೇಳಿದೆ.

ವರದಿಗಳ ಪ್ರಕಾರ ಹೃದಯಘಾತಕ್ಕೆ ಕಾರಣಗಳಿವು:-
ಆನುವಂಶಿಕ ಕಾರಣಗಳು: ಆನುವಂಶಿಕ ರೋಗಗಳು ಮತ್ತು ಹೃದಯ ಸಂಬಂಧಿತ ಕಾಯಿಲೆಗಳ ಕುಟುಂಬ ಇತಿಹಾಸ.
ಜೀವನಶೈಲಿ: ಧೂಮಪಾನ, ಮದ್ಯಪಾನ, ಔಷಧಿಗಳ ಬಳಕೆ ಮತ್ತು ತೀವ್ರವಾದ ದೈಹಿಕ ಒತ್ತಡ.
ಪೂರ್ವ-ಅಸ್ತಿತ್ವದಲ್ಲಿರುವ ಆರೋಗ್ಯ ಸಮಸ್ಯೆಗಳು: ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು.
ಕೊವಿಡ್-ನಂತರದ ತೊಡಕುಗಳು: ಕೊವಿಡ್-19 ಸೋಂಕಿನಿಂದ ಉಂಟಾಗುವ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಂದ ಹೃದಯಘಾತ ಸಂಭವಿಸಿರಬಹುದು ಎಂದು ವರದಿಯಲ್ಲಿ ಉಲ್ಲೇಖಿಸಿದೆ.