For the best experience, open
https://m.kannadavani.news
on your mobile browser.
Advertisement

Karwar:ಕನ್ನಡವಾಣಿ ವರದಿ ಫಲಶೃತಿ- ಗುಡ್ಡಳ್ಳಿಗೆ ಸಂಪರ್ಕ ,ನುಡಿದಂತೆ ನೆಡೆದ ಜಿಲ್ಲಾಧಿಕಾರಿ

ಕಾರವಾರ ನಗರಸಭಾ ವ್ಯಾಪ್ತಿಯ 31 ನೇ ವಾರ್ಡಿನ ಗುಡ್ಡಳ್ಳಿಯಲ್ಲಿ ಊರಿಗೆ ತೆರಳಲು ರಸ್ತೆಯೇ ಇಲ್ಲದೇ ತಮ್ಮ ವಾರ್ಡಿನ ವ್ಯಕ್ತಿಯ ಶವವನ್ನು ಕಟ್ಟಿಗೆ ಯಲ್ಲಿ ಕಟ್ಟಿ ಅಮಾನುಷವಾಗಿ ಹೊತ್ತೊಯ್ದು ಅಂತಿಮ ಸಂಸ್ಕಾರ ಮಾಡಿದ ಕುರಿತು ಕನ್ನಡವಾಣಿ ವರದಿ ಪ್ರಸಾರ ಮಾಡಿತ್ತು
10:23 PM Mar 09, 2025 IST | ಶುಭಸಾಗರ್
karwar ಕನ್ನಡವಾಣಿ ವರದಿ ಫಲಶೃತಿ  ಗುಡ್ಡಳ್ಳಿಗೆ ಸಂಪರ್ಕ  ನುಡಿದಂತೆ ನೆಡೆದ ಜಿಲ್ಲಾಧಿಕಾರಿ

ಕನ್ನಡವಾಣಿ ವರದಿ ಫಲಶೃತಿ- ಗುಡ್ಡಳ್ಳಿಗೆ ಸಂಪರ್ಕ ,ನುಡಿದಂತೆ ನೆಡೆದ ಜಿಲ್ಲಾಧಿಕಾರಿ

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ (karwar)ನಗರಸಭಾ ವ್ಯಾಪ್ತಿಯ 31 ನೇ ವಾರ್ಡಿನ ಗುಡ್ಡಳ್ಳಿಯಲ್ಲಿ ಊರಿಗೆ ತೆರಳಲು ರಸ್ತೆಯೇ ಇಲ್ಲದೇ ತಮ್ಮ ವಾರ್ಡಿನ ವ್ಯಕ್ತಿಯ ಶವವನ್ನು ಕಟ್ಟಿಗೆ ಯಲ್ಲಿ ಕಟ್ಟಿ ಅಮಾನುಷವಾಗಿ ಹೊತ್ತೊಯ್ದು ಅಂತಿಮ ಸಂಸ್ಕಾರ ಮಾಡಿದ ಕುರಿತು ಕನ್ನಡವಾಣಿ ವರದಿ ಪ್ರಸಾರ ಮಾಡಿತ್ತು.

ಕನ್ನಡವಾಣಿಯಲ್ಲಿ ಪ್ರಸಾರವಾಗಿದ್ದ ವರದಿ ಲಿಂಕ್ ಇಲ್ಲಿದೆ:-

https://m.kannadavani.news/article/uttra-kannda-karwar-municipal-council-ward-the-people-of-the-ward-are-carrying-dead-bodies-on-wooden-poles/23121

ನಗರಸಭಾ ವ್ಯಾಪ್ತಿಗೆ ಬಂದರೂ 250ಕ್ಕೂ ಹೆಚ್ಚು ಮತದಾರರಿದ್ದರೂ ಗುಡ್ಡ ಪ್ರದೇಶದಲ್ಲಿ ಇರುವ ಕಾರಣ ಇತ್ತೀಚೆಗೆ ವಿದ್ಯುತ್ ಸಂಪರ್ಕ ನೀಡಿದ್ದನ್ನು ಹೊರತು ಪಡಿಸಿದರೇ ಈವರೆಗೂ ವಾರ್ಡಗಳಿಗೆ ಸಿಗುವ ಯಾವುದೇ ಸೌಕರ್ಯಗಳು ಸಿಗದೇ ವಂಚಿತವಾಗಿತ್ತು.

ಶಾಲೆಗೆ ಸುಣ್ಣ ಬಣ್ಣ ಹೊಡೆದು ಚಿತ್ತಾರ ಬಿಡಿಸುತ್ತಿರುವುದು

ಕಾರವಾರ ನಗರಸಭೆಯ 31 ನೇ ವಾರ್ಡ ನ ಗುಡ್ಡಳ್ಳಿಗೆ ಡಾಂಬರೀಕರಣ ಮಾಡಲು ಹಣ ಮಂಜೂರಾದರೂ ರಸ್ತೆಮಾತ್ರ ಆಗಿರಲಿಲ್ಲ. ನಗರಕ್ಕೆ ಬರಬೇಕು ಎಂದರೆ ಕಷ್ಟ ಪಟ್ಟು ನಡೆದು ಬರಬೇಕು. ವೃದ್ಧರಿಗೆ ನರಕವೇ ಆಗಿದ್ದ ಈ ವಾರ್ಡ ನ ಸಮಸ್ಯೆ ಆಲಿಸುವವರೇ ಇರಲಿಲ್ಲ.

ಇನ್ನು ಈ ಹಿಂದ ಹೊಸದಾಗಿ ಬಂದ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ರವರಿಗೆ ತಮ್ಮೂರಿನ ಸಮಸ್ಯೆ ಕುರಿತು ಸ್ಥಳೀಯರು ಮನವಿ ಸಲ್ಲಿಸಿದ್ದರು. ಇವರ ಮನವಿ ಸ್ವೀಕರಿಸಿದ್ದ ಜಿಲ್ಲಾಧಿಕಾರಿ ಜನವರಿ 17 ರಂದು ಆ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಅರಿತರು.

ಇದನ್ನೂ ಓದಿ:-Karwar|ನಗರಸಭೆ ವಾರ್ಡ ಗೆ ರಸ್ತೆ ಇಲ್ಲ ಕಟ್ಟಿಗೆ ಕಂಬಕ್ಕೆ ಶವ ಕಟ್ಟಿ ಹೊತ್ತ ವಾರ್ಡ ಜನ

ತಕ್ಷಣ ಕ್ರಮ ಕೈಗೊಂಡ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾರವರು ಊರಿಗೆ ರಸ್ತೆ ಮಾಡಲು ಕ್ರಮ ಕೈಗೊಂಡರೂ ಅದು ಸದ್ಯ ಸಾಧ್ಯವಾಗದ ಹಿನ್ನಲೆಯಲ್ಲಿ ಜನರ ಓಡಾಟಕ್ಕೆ ಕ್ರಮ ಕೈಗೊಂಡ ಅವರು ನಗರಸಭೆ ವತಿಯಿಂದ ವಾಹನ ಓಡಾಟಕ್ಕೆ ಸೂಚನೆ ನೀಡಿದರು. ಇದಲ್ಲದೇ ಸುಣ್ಣ ಬಣ್ಣ ಕಾಣದೇ ಹಾಳು ಬಿದ್ದ ಶಾಲೆಗೆ ಹೊಸ ರೂಪ ನೀಡಿದ್ದಾರೆ. ಕುಡಿಯುವ ನೀರು ಇಲ್ಲದ ಈ ವಾರ್ಡ ಗೆ ಪಾಳು ಬಿದ್ದ ಬಾವಿಯನ್ನು ಸ್ವಚ್ಚಗೊಳಿಸಿ ಕುಡಿಯುವ ನೀರು ಸಿಗುವಂತೆ ಮಾಡಿದ್ದಾರೆ.

ಇದನ್ನೂ ಓದಿ:-Karwar :ಅರಣ್ಯ ಇಲಾಖೆಯಿಂದ  111 ಆಲಿವ್ ರಿಡ್ಲೆ ಕಡಲಾಮೆ ಸಮುದ್ರಕ್ಕೆ.

ಶಾಲಾ ಮಕ್ಕಳ ಓದಿಗೆ ಸಮಸ್ಯೆ ಆಗದಂತೆ ನಗರಸಭೆಯ ನಗರ ರಕ್ಷಕ ವಾಹನ ಪ್ರತಿ ನಿತ್ಯ ಬೆಳಗ್ಗೆ ಏಳು ಗಂಟೆಗೆ ಹಾಗೂ ಸಂಜೆ ಐದು ಗಂಟೆಗೆ ಗುಡ್ಡಳ್ಳಿಗೆ ಜನರನ್ನು ಕರೆದೊಯ್ಯುವ ವ್ಯವಸ್ಥೆ ಮಾಡಿದೆ.ಇದಲ್ಲದೇ ತುರ್ತು ಸಮಯದಲ್ಲಿ ಸಹ ಕರೆ ಬಂದರೇ ಜನರನ್ನು ಕರೆದೊಯ್ಯುವ ಕೆಲಸ ಮಾಡುವ ಭರವಸೆಯನ್ನು ನಗರಸಭೆ ಅಧಿಕಾರಿಗಳು ನೀಡಿದ್ದಾರೆ.

ಇನ್ನು ಶೀಘ್ರದಲ್ಲಿ ರಸ್ತೆ ಹಾಗೂ ಮೂಲಭೂತ ಸೌಕರ್ಯ ನೀಡುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದ್ದು ಇದೀಗ ಗುಡ್ಡಳ್ಳಿ ವಾರ್ಡನ ಜನರ ಮುಖದಲ್ಲಿ ಮಂದಹಾಸ ಮೂಡುವಂತಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ