For the best experience, open
https://m.kannadavani.news
on your mobile browser.
Advertisement

Karwar|ನಗರಸಭೆ ವಾರ್ಡ ಗೆ ರಸ್ತೆ ಇಲ್ಲ ಕಟ್ಟಿಗೆ ಕಂಬಕ್ಕೆ ಶವ ಕಟ್ಟಿ ಹೊತ್ತ ವಾರ್ಡ ಜನ

ಕಾರವಾರ :- ಊರಿಗೆ ತೆರಳಲು ರಸ್ತೆಯೇ ಇಲ್ಲದೇ ತಮ್ಮ ವಾರ್ಡಿನ ವ್ಯಕ್ತಿಯ ಶವವನ್ನು ಕಟ್ಟಿಗೆ ಯಲ್ಲಿ ಕಟ್ಟಿ ಅಮಾನುಷವಾಗಿ ಹೊತ್ತೊಯ್ದು ಅಂತಿಮ ಸಂಸ್ಕಾರ ಮಾಡಿದ ಘಟನೆ ಕಾರವಾರ ನಗರಸಭಾ ವ್ಯಾಪ್ತಿಯ .31 ನೇ ವಾರ್ಡಿನ ಗುಡ್ಡಳ್ಳಿಯಲ್ಲಿ ನಡೆದಿದೆ.
06:28 PM Sep 22, 2024 IST | ಶುಭಸಾಗರ್
karwar ನಗರಸಭೆ ವಾರ್ಡ ಗೆ ರಸ್ತೆ ಇಲ್ಲ ಕಟ್ಟಿಗೆ ಕಂಬಕ್ಕೆ ಶವ ಕಟ್ಟಿ ಹೊತ್ತ ವಾರ್ಡ ಜನ

ಕಾರವಾರ :- ಊರಿಗೆ ತೆರಳಲು ರಸ್ತೆಯೇ ಇಲ್ಲದೇ ತಮ್ಮ ವಾರ್ಡಿನ ವ್ಯಕ್ತಿಯ ಶವವನ್ನು ಕಟ್ಟಿಗೆ ಯಲ್ಲಿ ಕಟ್ಟಿ ಅಮಾನುಷವಾಗಿ ಹೊತ್ತೊಯ್ದು ಅಂತಿಮ ಸಂಸ್ಕಾರ ಮಾಡಿದ ಘಟನೆ ಕಾರವಾರ ನಗರಸಭಾ ವ್ಯಾಪ್ತಿಯ .31 ನೇ ವಾರ್ಡಿನ ಗುಡ್ಡಳ್ಳಿಯಲ್ಲಿ ನಡೆದಿದೆ.

Advertisement

ಗುಡ್ಡಳ್ಳಿಯ ರಾಮಾ ಮುನ್ನಗೌಡ ಅನಾರೋಗ್ಯದ ಕಾರಣ ನಿನ್ನೆ ರಾತ್ರಿ ಕಾರವಾರ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಹೃದಯಾಘಾತವಾಗಿ ಅಸುನೀಗಿದ್ದು,ಶವವನ್ನು 31ನೇ ವಾರ್ಡಿನ ಗುಡ್ಡಳ್ಳಿಗೆ ಕೊಂಡೊಯ್ಯಲು ರಸ್ತೆ ಸರಿಯಿಲ್ಲದ ಕಾರಣ ಒಂದು ಕಟ್ಟಿಗೆ ತುಂಡನ್ನು ತಂದು ಶವವನ್ನು ಹಗ್ಗದಲ್ಲಿ ಬಿಗಿದು ಮನೆಗೆ ಕೊಂಡೊಯ್ದು ಶವಸಂಸ್ಕಾರ ಮಾಡಿದ್ದಾರೆ.

ಇದನ್ನೂ ಓದಿ:-Karwar |ಮಂಗಳಮುಖಿಯಂತೆ ನಟಿಸಿ ಭಿಕ್ಷಾಟನೆ ಮಾಡುತಿದ್ದ ಯುವತಿಯ ಗ್ಯಾಂಗ್ !

ಇದು ನಗರಸಭಾ ವ್ಯಾಪ್ತಿಗೆ ಬಂದರೂ 250ಕ್ಕೂ ಹೆಚ್ಚು ಮತದಾರರಿದ್ದರೂ ಗುಡ್ಡ ಪ್ರದೇಶದಲ್ಲಿ ಇರುವ ಕಾರಣ ಇತ್ತೀಚೆಗೆ ವಿದ್ಯುತ್ ಸಂಪರ್ಕ ನೀಡಿದ್ದನ್ನು ಹೊರತು ಪಡಿಸಿದರೇ ಈವರೆಗೂ ವಾರ್ಡಗಳಿಗೆ ಸಿಗುವ ಯಾವುದೇ ಸೌಕರ್ಯಗಳು ಸಿಗದೇ ವಂಚಿತವಾಗಿದೆ.

ರಸ್ತೆ ಮಂಜೂರಾದರೂ ಡಾಂಬರ್ ಕಾಣದ ವಾರ್ಡ!

Guddalli village
ಕಾರವಾರ ನಗರಸಭೆಯ 31 ನೇ ವಾರ್ಡ ನ ಗುಡ್ಡಳ್ಳಿಯ ನಾಲ್ಕು ಕಿಲೋಮೀಟರ್ ವ್ಯಾಪ್ತಿಯಲ್ಲಿ ಎರಡು ಕಿಲೋಮೀಟರ್ ಡಾಂಬರೀಕರಣ ಮಾಡಲು ಹಿಂದಿನ ಶಾಸಕಿ ರೂಪಾಲಿ ನಾಯ್ಕ ಅವಧಿಯಲ್ಲಿ ಬಿಡುಗಡೆಯಾಗಿತ್ತು. ಆದರೇ ನಂತರ ಹಣ ಬಿಡುಗಡೆಯಾದರೂ ರಸ್ತೆ ಮಾತ್ರ ಆಗಲಿಲ್ಲ.

ಇನ್ನು ಈ ಕ್ಷೇತ್ರವನ್ನು ಕಾರವಾರದ ಶಾಸಕ ಸತೀಶ್ ಸೈಲ್ ಪ್ರತಿನಿಧಿಸಿದರೇ ಕಾರವಾರ ನಗರಸಭೆ ಬಿಜೆಪಿ ತೆಕ್ಕೆಯಲ್ಲಿದೆ. ಹೀಗಿರುವಾಗ ನಗರಸಭೆ ಆಡಳಿತ ಹಾಲಿ ಶಾಸಕರು ಮುತುವರ್ಜಿ ವಹಿಸಿಸಿದ್ದರೇ ನಾಲ್ಕು ಕಿಲೋಮೀಟರ್ ರಸ್ತೆ ಯಾಗುತಿತ್ತು.

ಕೇರಳ ಮೂಲದ ಅರ್ಜುನ್ ಶವ ಶೋಧಕ್ಕಾಗಿ ಕೋಟಿ ಕೋಟಿ ವಹಿಸಲಾಗುತ್ತಿದೆ. ಹೀಗಿರುವಾಗ ಹತ್ತರಿಂದ ಹದಿನೈದು ಲಕ್ಷದಲ್ಲಿ ಇಲ್ಲಿ ಡಾಂಬರೀಕರಣ ಮಾಡಬಹುದು. ಆದರೇ ರಾಜಕೀಯ ಹಿತಾಸಕ್ತಿಗಳ ನಿರ್ಲಕ್ಷ ಈ ವಾರ್ಡ ಗೆ ಮೂಲಭೂತ ಸೌಕರ್ಯಗಳು ಸಿಗದಂತಾಗಿದೆ.

ಮಳೆಗಾಲದಲ್ಲಿ ಗುಡ್ಡ ಭಾಗದಿಂದ ಹರಿದುಬರುವ ನೀರಿನಿಂದಾಗಿ ಈ ಭಾಗದ ಜನರಿಗೆ ನಗರಭಾಗಕ್ಕೆ ಬರದಾಗದಷ್ಟು ತೊಂದರೆಯಾಗುತ್ತದೆ.

ಇಲ್ಲಿನ ಜನರಿಗೆ ಆರೋಗ್ಯ (Health) ಹದಗೆಟ್ಟರೇ ಜೋಳಿಗೆಯಲ್ಲಿ ತರಬೇಕಿದೆ. ನಗರಸಭೆ ವ್ಯಾಪ್ತಿಯಲ್ಲಿ ಇದ್ದರೂ ಈ ಜನ ಮಾತ್ರ ಯಾವ ಸೌಲಭ್ಯ ಸಿಗದೇ ವಂಚಿತರಾಗಿರುವುದು ದುರಂತ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ