Kantara -1 | ಉತ್ತರ ಕನ್ನಡ ಸಿದ್ದಿ ಯುವಕರ ನಟನೆಯ ಮೋಡಿಗೆ ಮನಸೋತ ಪ್ರೇಕ್ಷಕರು.
Kantara -1 | ಉತ್ತರ ಕನ್ನಡ ಸಿದ್ದಿ ಯುವಕರ ನಟನೆಯ ಮೋಡಿಗೆ ಮನಸೋತ ಪ್ರೇಕ್ಷಕರು.
ಕಾರವಾರ:- ಕಾಂತಾರ ಸಿನಿಮ ರಾಜ್ಯದಲ್ಲಿ ಅಷ್ಟೇ ಅಲ್ಲದೇ ದೇಶಾಧ್ಯಾಂತ ಸದ್ದು ಮಾಡುತ್ತಿದೆ. ಸಿನಿಮಾ ಯಶಸ್ವಿಯಾಗಿ ಪ್ರದರ್ಶನಗೊಳ್ಳುತಿದ್ದು ಕೋಟಿ ಕೋಟಿ ಬಾಚುವ ಜೊತೆ ಸಿನಿಮ ಪ್ರಿಯರ ಮನ ಗೆಲ್ಲುವಲ್ಲಿ ಯಶಸ್ಸು ಕಂಡಿದೆ.
Kantara | ಕಾಂತಾರ ಸಿನಿಮಾ ನೋಡಿದವರು ಟಿಕೇಟ್ ಜೋಪಾನವಾಗಿಡಿ| ಮರಳಿ ಬರಲಿದೆ ಹೆಚ್ಚುವರಿ ಹಣ
ಈ ಸಿನಿಮಾ ನಿರ್ಮಾಣಕ್ಕಾಗಿ ಮೂರು ವರ್ಷಗಳು ರಿಷಬ್ ಶಟ್ಟಿ ಅವಿರತ ಶ್ರಮ ಹಾಕಿದ್ದಾರೆ. ಇವರ ನಟನೆಗೆ ತಲೆಭಾಗದವರೇ ಇಲ್ಲ. ಆದರೇ ಇವರಂತೆ ಇವರ ಜೊತೆ ನಟಿಸಿದ ಹಲವು ಕಲಾವಿದರು ಸಹ ಮೊದಲಬಾರಿ ನಟನೆಗೆ ಇಳಿದರೂ ಪ್ರಬುದ್ಧ ಕಲಾವಿದರಂತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಅಧ್ಬುತ ವೇಶಭೂಷಣ, ಹಾವಾಭಾವ ನಾಯಕ ನಟನ ಜೊತೆ ಸಹ ಕಲಾವುದರೂ ಪ್ರಶಂಸೆಗೆ ಒಳಗಾಗುತಿದ್ದಾರೆ.
ಹೌದು ನೋಡಲು ಆಫ್ರಿಕ ದೇಶದಂತೆ ಕಾಣುವ ಕಟು ಮಸ್ತಾಗಿ ಇರುವ ಹಲವು ಕಲಾವಿದರು ಈ ಸಿನಿಮಾದ ಪಾತ್ರದಾರಿಗಳಾಗಿದ್ದು ಇವರು ಎಲ್ಲಿಯವರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಹೌದು ಆರು ಅಡಿ ಎತ್ತರ,ಕಟ್ಟು ನಿಟ್ಟಿನ ದೇಹ ,ನೀಡಿದರೇ ಭಯ ಹುಟ್ಟುವಂತೆ ಕಾಣುವ ಇವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಜನಾಂಗದ ಯುವಕರು.

ಯಲ್ಲಾಪುರ,ಮುಂಡಗೋಡು,ಹಳಿಯಾಳ ಅರಣ್ಯ ಭಾಗದಲ್ಲಿ ಅತೀ ಹೆಚ್ಚು ವಾಸವಾಗಿರುವ ಈ ಸಿದ್ದಿ ಜನಾಂಗದವರು ಇತ್ತೀಚಿನ ವರ್ಷದಲ್ಲಿ ತಮ್ಮ ಪ್ರತಿಭೆ ಮೂಲಕ ಗಮನ ಸೆಳೆಯುತಿದ್ದಾರೆ. ಈ ಹಿಂದೆ ರಿಯಾಲಿಟಿ ಷೋಗಳು,ಸಿನಿಮಾ ,ಹಾಡುಗಾರಿಕೆ ಮೂಲಕ ಸುದ್ದಿಯಾಗುತ್ತಿರುವ ಸಿದ್ದಿ ಜನಾಂಗದ ಯುವಕರು ಇದೀಗ ಕಾಂತಾರ ಸಿಮಾದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.

ಹೌದು ಕಾಂತಾರ ಸಿನಿಮಾದ ಕೆಲವು ದೃಶ್ಯಗಳು ಜಿಲ್ಲೆಯ ಕುಮಟಾ,ಕಾರವಾರ ಭಾಗದಲ್ಲೂ ಚಿತ್ರಣ ಮಾಡಲಾಗಿದೆ. ಇನ್ನು ಇಲ್ಲಿನ ಸಿದ್ದಿ ಜನಾಂಗದ ಯುವ ಕಲಾವಿದರನ್ನು ಸಹ ರುಷಬ್ ಶಟ್ಟಿ ಬಳಸಿಕೊಂಡಿದ್ದಾರೆ.

ಚಿತ್ರದಲ್ಲಿ ಮುಂಡಗೋಡು ತಾಲೂಕಿನ ಮೈನಳ್ಳಿ ಗ್ರಾಮದ ಇಪ್ಪತ್ತಕ್ಕೂ ಹೆಚ್ಚು ಸಿದ್ದಿ ಸಮುದಾಯದ ಕಲಾವಿದರು ನಟಿಸಿ, ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ಚಿತ್ರದಲ್ಲಿ ಸುನೀಲಾ ಸಿದ್ದಿ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಅವರ ಪುತ್ರ ಸಿಯೋನ್ ಹಾಗೂ ಸಹೋದರರೂ ಸೇರಿದಂತೆ 20ಕ್ಕೂ ಹೆಚ್ಚು ಕಲಾವಿದರು ಗಮನ ಸೆಳೆದಿದ್ದಾರೆ. ಸುನೀಲಾ ಅವರ ತಂದೆ ಆ್ಯಂಟೋನಿ ಸಿದ್ದಿ ಅವರು ಈ ಹಿಂದೆ ವಿಷ್ಣುವರ್ಧನ್ ಅವರ ಚಿತ್ರಗಳಲ್ಲಿ ನಟಿಸಿ ಹಿರಿಮೆ ಹೆಚ್ಚಿಸಿದ್ದರು. ಇದೀಗ ಅವರ ಮಕ್ಕಳು ಕಲೆಯನ್ನು ಮುಂದುವರಿಸಿದ್ದಾರೆ.
ಇದಲ್ಲದೇ ಕಾರವಾರದ ಕೆಲವು ಯುವಕರು ಸಹ ಈ ಸಿನಿಮಾದಲ್ಲಿ ಪಾತ್ರ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
