Ksrtc:ಆಗಸ್ಟ್ 05 KSRTC ನೌಕರರ ಮುಷ್ಕರ! ಬಂದ್ ಆಗಲಿದೆ ಸರ್ಕಾರಿ ಬಸ್ ಗಳು?
ಆಗಸ್ಟ್ 05 KSRTC ನೌಕರರ ಮುಷ್ಕರ! ಬಂದ್ ಆಗಲಿದೆ ಸರ್ಕಾರಿ ಬಸ್ ಗಳು?
ಬೆಂಗಳೂರು: ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಆಗಸ್ಟ್ 5ರಂದು ರಾಜ್ಯಾದ್ಯಾಂತ ಸಾರಿಗೆ ನೌಕರರು (Transport employees) ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಇದ್ದರಿಂದ ಎಚ್ಚೆತ್ತುಕೊಂಡಿರುವ ಎಲ್ಲಾ ಜಿಲ್ಲೆಗಳ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಸರ್ಕಾರಿ ಬಸ್‌ಗಳ ಬದಲು ಖಾಸಗಿ ಬಸ್‌ಗಳನ್ನ (Private Bus) ರಸ್ತೆಗಿಳಿಸೋಕೆ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದೆ.
ಈ ಹಿಂದೆಯೂ ಸಹ ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನ ಮುಂದಿಟ್ಟುಕೊಂಡು ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದ ಸಾರಿಗೆ ನೌಕರರು ಈಗ ಮತ್ತೆ ಆಗಸ್ಟ್ 5 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ
ಇದನ್ನೂ ಓದಿ:-Karwar:ಶಿರಸಿಯ ಸರ್ಕಾರಿ ಆಸ್ಪತ್ರೆ ಜಿಲ್ಲಾಸ್ಪತ್ರೆಯಾಗಿ ಪರಿವರ್ತನೆ -ಆರೋಗ್ಯ ಸಚಿವರು ಸಭೆಯಲ್ಲಿ ಹೇಳಿದ್ದೇನು?
ಹೀಗಾಗಿ ಮುಷ್ಕರ ಬೇಡ ಅಂತ ಸಾರಿಗೆ ನೌಕರರ ಸಂಘಟನೆಗಳ ಜೊತೆ ಸ್ವತಃ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಆದ್ರೆ ಸಭೆಯಲ್ಲಿ ಸಿಎಂ ನಿರ್ಧಾರ ಏನು ಎಂಬ ಕೂತೂಹಲ ಮನೆ ಮಾಡಿದೆ. ಇನ್ನೂ ಸಂಘಟನೆಯ ಮುಖಂಡರು ಸಹ ಈ ಬಾರಿ ಜೋರಾಗಿಯೇ ಪ್ರತಿಭಟಿಸಿ ಹೋರಾಟ ಮಾಡೋಕೆ ಸಕಲ ತಯಾರಿಗಳನ್ನ ಮಾಡಿಕೊಂಡಿದ್ದಾರೆ
ಸಿಎಂ ಸಭೆಯ ನಂತರವಷ್ಟೇ ಮುಷ್ಕರ ರದ್ದಾಗುತ್ತಾ, ಇಲ್ಲ ಆರಂಭವಾಗುತ್ತಾ ಅನ್ನೋ ನಿರ್ಧಾರ ಹೊರಬರಬೇಕಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಏನು ವೆವಸ್ತೆ.
ಕೆ.ಎಸ್.ಆರ್.ಟಿ.ಸಿ ಡಿಸಿ ರವರು ಹೇಳುವಂತೆ ನಮ್ಮ ಜಿಲ್ಲೆಯಲ್ಲಿ ಯಾರೂ ಕೂಡ ಮುಷ್ಕರ ಮಾಡುವುದಿಲ್ಲ,ಹೀಗಾಗಿ ಬಸ್ ವ್ಯವಸ್ಥೆಯಲ್ಲಿ ಯಾವುದೇ ತೊಂದರೆ ಆಗದು ಎಂದು ಹೇಳಿದ್ದಾರೆ. ಒಂದುವೇಳೆ ಮುಷ್ಕರ ಪ್ರಾರಂಭಿಸಿದರೇ ಯಾವುದೇ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿಕೊಂಡಿಲ್ಲ.
ಇನ್ನು ಜಿಲ್ಲೆಯಲ್ಲಿ ಖಾಸಗಿ ಬಸ್ ಗಳು ಕಡಿಮೆ ಇದ್ದು ,ಟೆಂಪೋಗಳ ಸಂಖ್ಯೆಯೂ ಸಹ ಹೆಚ್ಚಿಲ್ಲ. ಒಂದುವೇಳೆ ಸಿ.ಎಂ ಸಭೆ ವಿಫಲವಾಗಿ ಮುಷ್ಕರ ಪ್ರಾರಂಭವಾದರೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಸ್ ಗಳ ವ್ಯವಸ್ಥೆಯಲ್ಲಿ ಏರುಪೇರಾಗುವ ಸಾಧ್ಯತೆಗಳಿವೆ.
ಶಿವಮೊಗ್ಗ ,ಉಡುಪಿ,ಮಂಗಳೂರು ಭಾಗದಲ್ಲಿ ಏನು ವ್ಯವಸ್ಥೆ?
ಶಿವಮೊಗ್ಗ ,ಉಡುಪಿ,ಮಂಗಳೂರು ಭಾಗದಲ್ಲಿ ಖಾಸಗಿ ಬಸ್ ವ್ಯವಸ್ಥೆ ಸಾಕಷ್ಟು ಇರುವುದರಿಂದ ಈ ಭಾಗದಲ್ಲಿ ಸಂಚಾರಕ್ಕೆ ಹೆಚ್ಚು ತೊಂದರೆಯಾಗದು. ಇನ್ನು ಬದಲಿ ವ್ಯವಸ್ಥೆಗೂ ಸಹ ಮಾಡಿರುವುದರಿಂದ ಹೆಚ್ಚಿನ ತೊಂದರೆಯಾಗದು.