For the best experience, open
https://m.kannadavani.news
on your mobile browser.
Advertisement

Karnataka| ತಿಮ್ಮನಿಗೆ ಜೈಲು|ಜಮೀರ್ ಗೆ ರಿಲೀಫ್ ಏನಾಯ್ತು ಇಡೀ ದಿನ ,ವಿವರ ನೋಡಿ

ಉಡುಪಿ/ಮಂಗಳೂರು:- ಸಾಮಾಜಿಕ ಕಾರ್ಯಕರ್ತ ಮಹೇಶ್‌ ಶೆಟ್ಟಿ ತಿಮರೋಡಿಗೆ (Mahesh Shetty Thimarodi)ಉಡುಪಿಯ ಬ್ರಹ್ಮಾವರ ಕೋರ್ಟ್‌ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
09:36 PM Aug 21, 2025 IST | ಶುಭಸಾಗರ್
ಉಡುಪಿ/ಮಂಗಳೂರು:- ಸಾಮಾಜಿಕ ಕಾರ್ಯಕರ್ತ ಮಹೇಶ್‌ ಶೆಟ್ಟಿ ತಿಮರೋಡಿಗೆ (Mahesh Shetty Thimarodi)ಉಡುಪಿಯ ಬ್ರಹ್ಮಾವರ ಕೋರ್ಟ್‌ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
karnataka  ತಿಮ್ಮನಿಗೆ ಜೈಲು ಜಮೀರ್ ಗೆ ರಿಲೀಫ್ ಏನಾಯ್ತು ಇಡೀ ದಿನ  ವಿವರ ನೋಡಿ

Karnataka| ತಿಮ್ಮನಿಗೆ ಜೈಲು|ಜಮೀರ್ ಗೆ ರಿಲೀಫ್ ಏನಾಯ್ತು ಇಡೀ ದಿನ ,ವಿವರ ನೋಡಿ

ಕಾರವಾರದ ಗಿಲಾನಿ ಸೂಪರ್ ಮಾರ್ಕೆಟ್ ನಲ್ಲಿ ಭರ್ಜರಿ ಆಫರ್ ,ಗ್ರೂಸರಿ ಕರೀದಿ ದಾರರಿಗೆ ಸಿಗಲಿದೆ ಬಂಪರ್ ಬಹುಮಾನ

ಉಡುಪಿ/ಮಂಗಳೂರು:-  ಸಾಮಾಜಿಕ ಕಾರ್ಯಕರ್ತ ಮಹೇಶ್‌ ಶೆಟ್ಟಿ ತಿಮರೋಡಿಗೆ (Mahesh Shetty Thimarodi)ಉಡುಪಿಯ  ಬ್ರಹ್ಮಾವರ ಕೋರ್ಟ್‌ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

Advertisement

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ (BL Santosh) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಇಂದು ಉಡುಪಿಯ ಬ್ರಹ್ಮಾವರ ಪೊಲೀಸರು ಉಜಿರೆಗೆ ತೆರಳಿ ನಿವಾಸದಿಂದ ತಿಮರೋಡಿಯನ್ನು ಬಂದಿಸಿದ್ದರು.

ನಂತರ ಬ್ರಹ್ಮಾವರ ತಾಲೂಕು ಕೋರ್ಟ್‌ಗೆ ಹಾಜರು ಪಡಿಸಿದರು. ಈ ಸಂದರ್ಭದಲ್ಲಿ ತಿಮರೋಡಿ ಪರ ವಕೀಲರು ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ಜಾಮೀನು ನೀಡಲು ನಿರಾಕರಿಸಿದ ಕೋರ್ಟ್‌ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಮಹೇಶ್‌ ಶೆಟ್ಟಿಯ ಜಾಮೀನು ಅರ್ಜಿಯ ವಿಚಾರಣೆ ಅಗಸ್ಟ್ 23ಕ್ಕೆ ಮುಂದೂಡಲಾಗಿದೆ.

ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಯೂಟ್ಯೂಬರ್‌ ಸಮೀರ್‌ಗೆ ಜಾಮೀನು ಮಂಜೂರು.

ಧರ್ಮಸ್ಥಳ ದೇವಸ್ಥಾನದ (Dharmasthala Temple) ವಿರುದ್ಧ ಅಪಪ್ರಚಾರ ನಡೆಸಿದ್ದ ಯೂಟ್ಯೂಬರ್‌ ಸಮೀರ್‌ಗೆ (Sameer MD) ಮಂಗಳೂರಿನಲ್ಲಿರುವ (Mangaluru) ಜಿಲ್ಲಾ ಕೋರ್ಟ್‌ ಜಾಮೀನು (Bail) ಮಂಜೂರು ಮಾಡಿದೆ.

ಗುರುವಾರ ಬೆಳಗ್ಗೆ ಧರ್ಮಸ್ಥಳ ಪೊಲೀಸರು ಸಮೀರ್‌ ಬಂಧನಕ್ಕೆ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ನಿವಾಸಕ್ಕೆ ತೆರಳಿದ್ದರು. ಆದರೆ ಪೊಲೀಸರು ತೆರಳಿದಾಗ ಸಮೀರ್‌ ಮನೆಯಲ್ಲಿ ಇರಲಿಲ್ಲ.

ಇದನ್ನೂ ಓದಿ:-Karnataka :ಖಾಸಗಿ ಅಂಬುಲೆನ್ಸ್ ಗಳಿಗೆ ಶಾಕ್ ಕೊಟ್ಟ ಸರ್ಕಾರ- KPME ನಡಿ ಲೈಸೆನ್ಸ್ ಕಡ್ಡಾಯದ ಜೊತೆ ದರ ನಿಗದಿ

ಸಮೀರ್‌ ಬಂಧನಕ್ಕೆ ಪೊಲೀಸರು ಮುಂದಾಗುತ್ತಿದ್ದಂತೆ ಇತ್ತ ಸಮೀರ್‌ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌ 75 ಸಾವಿರ ರೂ. ಬಾಂಡ್‌, ಒಬ್ಬರು ಶ್ಯೂರಿಟಿ ನೀಡಬೇಕೆಂದು ಸೇರಿ ಕೆಲ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ.

ಜೀವಕ್ಕೆ ಬೆದರಿಕೆ ಇದೆ -ಜಮೀರ್ ಪೊಲೀಸರಿಗೆ ಮನವಿ.

ಭದ್ರತೆ ದೃಷ್ಟಿಯಿಂದ ಧರ್ಮಸ್ಥಳಕ್ಕೆ (Dharmasthala) ಹೋಗಲು ಭಯ ಇದೆ. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ಧರ್ಮಸ್ಥಳ ಠಾಣೆಗೆ ನಾನು ಬರಲಾರೆ ಎಂದು ಯೂಟ್ಯೂಬರ್‌ ಸಮೀರ್‌ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಈ ಹಿಂದೆ ಪೊಲೀಸರು ಕೊಟ್ಟಿದ್ದ ನೊಟೀಸ್‌ಗೆ ಉತ್ತರಿಸಿದ್ದ ಸಮೀರ್, ಭದ್ರತೆ ದೃಷ್ಟಿಯಿಂದ ವಿಚಾರಣೆಗೆ ಹಾಜರಾಗಲು ಇದೇ 13 ರಂದು ಪತ್ರದ ಮೂಲಕ ಪೊಲೀಸರ ಬಳಿ ಕಾಲಾವಕಾಶ ಕೇಳಿದ್ದರು.

ಧರ್ಮಸ್ಥಳದಲ್ಲಿ ಯೂಟ್ಯೂಬರ್ಸ್ ಮೇಲೆ ಹಲ್ಲೆಯಾಗಿದೆ. ನನಗೆ ಈಗಾಗಲೇ ಬೆದರಿಕೆ ಇರುವ ಕಾರಣ ಧರ್ಮಸ್ಥಳಕ್ಕೆ ವಿಚಾರಣೆಗೆ ಬರಬೇಕಾದರೆ ಹೆಚ್ಚಿನ ಭದ್ರತೆ ನೀಡಿ. ಇಲ್ಲವೇ ಪರ್ಯಾಯ ಜಾಗದ ವ್ಯವಸ್ಥೆ ಮಾಡಿ.

ನನ್ನ ಯೂಟ್ಯೂಬ್ ಕಂಟೆಂಟ್ ಮೇಲೆ ದೂರು ಕೊಟ್ಟಿದ್ದಾರೆ. ಹಾಗಾಗಿ ನಾನು ನೇರವಾಗಿ ಠಾಣೆಗೆ ಬರಲು ಸಾಧ್ಯವಿಲ್ಲ. ವಿಡಿಯೋ ಕಾನ್ಫೆರೆನ್ಸ್ ಮೂಲಕ ಭಾಗಿಯಾಗಲು ಅವಕಾಶ ಕೊಡಿ ಎಂದು ಕೇಳಿದ್ದರು. ಆದರೆ ಸಮೀರ್‌ ಪತ್ರಕ್ಕೆ ಪ್ರತಿಕ್ರಿಯೆ ನೀಡದ ಧರ್ಮಸ್ಥಳ ಪೊಲೀಸರು ಗುರುವಾರ ಬಂಧನ ಮಾಡಲು ಬೆಂಗಳೂರಿಗೆ ತೆರಳಿ 48 ಗಂಟೆಯಲ್ಲಿ ಠಾಣೆಗೆ ಹಾಜುರಾಗುವಂತೆ ನೋಟಿಸ್ ನೀಡಿ ಮರಳಿದೆ.

ಪ್ರಕೃತಿ ಮೆಡಿಕಲ್ ,ಕಾರವಾರ.
Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ