Mango :ಬಂಗಾರದ ಬೆಲೆಯತ್ತ ಮಾವಿನ ಮಿಟಿ ! ಮಲೆನಾಡು ಜೀರಿಗೆ ಮಾವಿನ ಮಿಡಿ ಗೆ ಹೆಚ್ಚಿದ ಬೇಡಿಕೆ
Mango :ಬಂಗಾರದ ಬೆಲೆಯತ್ತ ಮಾವಿನ ಮಿಟಿ ! ಮಲೆನಾಡು ಜೀರಿಗೆ ಮಾವಿನ ಮಿಡಿ ಗೆ ಹೆಚ್ಚಿದ ಬೇಡಿಕೆ
ಕಾರವಾರ :- ಉಪ್ಪಿಗಿಂತ ರುಚಿ ಇಲ್ಲ ಎನ್ನುವಂತೆ ಊಟಕ್ಕೆ ಉಪ್ಪಿನಕಾಯಿ ಇಲ್ಲದಿದ್ರೆ ಊಟ ಸವಿದ ಸಂತೃಪ್ತಿ ಆಗಲಾರದು. ಮಲೆನಾಡು (malnadu) ಭಾಗದಲ್ಲಿ ಊಟದ ಜೊತೆ ಉಪ್ಪಿನಕಾಯಿ ಇರಲೇ ಬೇಕು. ಈ ಉಪ್ಪಿನಕಾಯಿಗಳು ಮಾವಿನ ಮಿಡಿಗಳಿಂದ ತಯಾರಿಸಲಾಗುತ್ತದೆ. ಅದ್ರಲ್ಲೂ ಉತ್ತರ ಕನ್ನಡ ಜಿಲ್ಲೆಯ ಶಿರಸಿ,(sirsi) ಸಿದ್ದಾಪುರ ,ಯಲ್ಲಾಪುರ(yallapura) ಶಿವಮೊಗ್ಗ ಜಿಲ್ಲೆಯ ಸಾಗರ,ತೀರ್ಥಹಳ್ಳಿ ,ಹೊಸನಗರ ತಾಲೂಕುಗಳಲ್ಲಿ ಮಾವಿನ ಮಿಡಿ ಉಪ್ಪಿನಕಾಯಿ ಬಲು ಫೇಮಸ್. ಜೊತೆಗೆ ಆರೋಗ್ಯಕರ ಊಟದಲ್ಲಿ ಇದರ ಮಹತ್ವ ದೊಡ್ಡದಿದೆ.
ಹೌದು ಇದೀಗ ಮಾವಿನ ಹಣ್ಣಿನ ವಸಂತ ಪ್ರಾರಂಭವಾಗಿದೆ.ಅದರ ಜೊತೆಗೆ ಮಾವಿನ ಮಿಡಿಗಳನ್ನು ಉಪ್ಪಿನಕಾಯಿ ತಯಾರಿಕೆಗಾಗಿ ಮಲೆನಾಡಿಗರು ಮಾವಿನ ಮಿಡಿ ಕರೀದಿಗೆ ಮುಂದಾಗಿದ್ದಾರೆ.
ಇದನ್ನೂ ಓದಿ:-Karnataka:ಗೋವಾ-ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ಬಿಗ್ ಅಪ್ಡೇಟ್
ಸದ್ಯ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಜೀರಿಗೆ ಅಪ್ಪೆ ಮಿಡಿಗಳಿಗೆ ಹೆಚ್ಚಿನ ಡಿಮ್ಯಾಂಡ್ ಬಂದಿದ್ದು ಒಂದು ಜೀರಿಗೆ ಅಪ್ಪೆ ಮಿಡಿಯ ಬೆಲೆ 9 ರಿಂದ 10 ರೂ ಆಗಿದ್ದು ಸಾವಿರ ಜಿರಿಗೆ ಅಪ್ಪೆ ಮಿಡಿಗೆ 9 ಸಾವಿರದಿಂದ 10 ಸಾವಿರ ದರ ವಿದ್ದು ಇದೀಗ ಹೆಚ್ಚಿನ ಬೇಡಿಕೆ ಬರುತ್ತಿರುವ ಕಾರಣ ಗುಣಮಟ್ಟಸ ಒಂದು ಜಿರಿಗೆ ಮಿಡಿಗೆ 12 ರೂವರೆಗೂ ಏರಿಕೆ ಕಾಣುತ್ತಿದೆ.
ಯಾವ ಮಾವಿನ ಮಿಡಿ ಎಷ್ಟು ದರ!
ಮಾವಿನ ಮಿಡಿಗಳನ್ನು ಆಯ್ಕೆ ಮಾಡುವಾಗ ಅದರ ಗುಣಮಟ್ಟ,ಗಾತ್ರ,ಪರಿಮಳವನ್ನು ಗಮನದಲ್ಲಿ ಇಟ್ಟು ಆಯ್ಕೆ ಹಾಗೂ ದರ ನಿಗದಿ ಮಾಡಲಾಗುತ್ತದೆ.
ಜಿರಿಗೆ ಅಥವಾ ಅಪ್ಪೆ ಜೀರಿಗೆ ಮಿಡಿ ಪರಿಮಳ ಹೆಚ್ಚಿದ್ದು ,ದೀರ್ಘಾವಧಿ ಬಾಳಿಕೆ ಬರುತ್ತದೆ. ಗುಣಮಟ್ಟದ ಮಿಡಿಗಳಿಗೆ ಹೆಚ್ಚು ದರ ನೀಡಲಾಗುತ್ತದೆ. ಮಾವಿನ ಮಿಡಿಯ ತೊಟ್ಟು ತುಂಡರಿಸಿ ಅದಕ್ಕೆ ಬೆಂಕಿ ಹಚ್ಚುವ ಮೂಲಕವೂ ಅದರ ಗುಣಮಟ್ಟದ ಆಯ್ಕೆ ಮಾಡುತ್ತಾರೆ.
ಇದನ್ನೂ ಓದಿ'-panchagavya:-ಪಂಚಗವ್ಯ ತಯಾರಿಸೋದು ಹೇಗೆ ? ಏನಿದರ ಉಪಯೋಗ ವಿವರ ನೋಡಿ.
ಯಾವುದಕ್ಕೆ ಎಷ್ಟು ದರ.
1)ಸಾದಾ ಜೀರಿಗೆ ಮಿಡಿ- 8 ರೂ. (ಒಂದು ಮಿಡಿ ಮಾವಿನಕಾಯಿಗೆ.
2) ಸಾದಾ ಮಾವಿನ ಮಿಡಿ (ಅಪ್ಪೆ ಮಿಡಿ)- 3 ರಿಂದ 4 ರೂ .
3)ಕರ್ಣ ಕುಂಡಲ ಜೀರಿಗೆ ಮಿಡಿ- 9 ರಿಂದ 10 ರೂ.
4)ಮಾಳಂಜಿ, ನಂದಗಾರು ಜೀರಿಗೆ ಮಿಡಿ- 7 ರಿಂದ 10 ರೂ
5)ರಿಪ್ಪನ ಪೇಟೆ ಅಪ್ಪೆ ಮಿಡಿ- 5 ರಿಂದ 7 ರೂ.
6) ಅಡ್ಡೇರಿ ಜೀರಿಗೆ ಮಿಡಿ- 10 ರಿಂದ 14 ರೂ
Pikal mango;ಮಾವಿನ ಮಿಡಿಗೆ ಹೆಚ್ಚಿನ ದರ ಏಕೆ?ಏನು ವಿಶೇಷ?
ಮಲೆನಾಡು ಭಾಗದಲ್ಲಿ ಮಾವಿನ ಮಿಡಿಗಳನ್ನು ಹೆಚ್ಚು ಉಪಯೋಗಿಸುತ್ತಾರೆ. ಮಾವಿನ ಮಿಡಿಯನ್ನು ಉಪ್ಪಿನಲ್ಲಿ ಹಾಕಿ ಚಟ್ಟಿದ ನಂತರ ಮೆಣಸಿನ ಪುಡಿಯ ಮಸಾಲೆಜೊತೆ ಮಿಶ್ರಣ ಮಾಡಿ ಬಳಸಲಾಗುತ್ತದೆ.
ಈ ಮಾವಿನ ಮಿಡಿಗಳಲ್ಲಿ ಜೀರಿಗೆ ಪರಿಮಳದ ಮಾವಿನ ಮಿಡಿ ಹೆಚ್ಚು ರುಚಿ ಜೊತೆಗೆ ಆರೋಗ್ಯಕ್ಕೂ ಹಿತ.ಇವುಗಳ ಸೊನೆಗಳನ್ನು ಸಹ ಬಳಸಲಾಗುತ್ತದೆ.ಹೆಚ್ಚಾಗಿ ಮಲೆನಾಡು ಭಾಗದಲ್ಲಿ ಮಾತ್ರ ಪರಿಮಳ ಯುಕ್ತ ಮಾವಿನ ಮಿಡಿಗಳು ದೊರೆಯುತ್ತವೆ.
ಕಳೆದ ಬಾರಿ ಹೊಲಿಸಿದರೆ ಈ ಬಾರಿ ಫಸಲು ಹವಾಮಾನ ವೈಪರಿತ್ಯದಿಂದ ಕಡಿಮೆ ಯಾಗಿದೆ. ಶಿರಸಿಯಲ್ಲಿ ಮಾವಿನ ಮಿಡಿಯನ್ನು ಬೆಳೆಯುವ ಭಾರ್ಗವ ಹೆಗಡೆ ಹೇಳುವಂತೆ ಈ ಬಾರಿ ಹವಾಮಾನ ವೈಪರಿತ್ಯದಿಂದ ಮಾವಿನ ಮಿಡಿ ಹೆಚ್ಚು ದೊರೆತಿಲ್ಲ. ಬೇಡಿಕೆ ಹೆಚ್ಚಿದೆ.ಪೂರೈಕೆ ಕಡಿಮೆ ಇದೆ.
ಹೆಚ್ಚಾಗಿ ಜನರು ಕರ್ಣ ಕುಂಡಲ ಜೀರಿಗೆ,ಮಾಳಂಜಿ, ನಂದಗಾರು ಜೀರಿಗೆಯನ್ನು ಕೇಳುತ್ತಾರೆ. ತುಂಬಾ ಬೇಡಿಕೆ ಇರುವ ಮಿಡಿ ಇದಾಗಿದೆ. ಹೀಗಾಗಿ ಈ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚಿನ ದರವಾಗಿದ್ದು 9 ರಿಂದ 10 ರೂ ವರೆಗೂ ಗ್ರಾಹಕರು ಕರೀದಿಸುತಿದ್ದಾರೆ .ಇನ್ನೂ ಬೇಡಿಕೆ ಹೆಚ್ಚಿನದ್ದು ಬರುತ್ತಿದೆ ಎನ್ನುತ್ತಾರೆ.
ಜೀರಿಗೆ ಮಿಡಿ ವಿಶೇಷ ಏನು?
ಮಾವಿನ ಮಿಡಿಗಳ ರಾಜನಾಗಿರುವ ಜೀರಿಗೆ ಮಿಡಿ ಗಮ -ಗಮ ಪರಿಮಳಕ್ಕೆ ಖ್ಯಾತಿ ಗಳಿಸಿದೆ. ಇದರ ಒಂದು ತುಂಡು ತಿಂದರೇ ಇಡೀ ದಿನ ಇದರ ಪರಿಮಳ ಬಾಯಿಯಲ್ಲಿ ಇರುತ್ತದೆ.
ಇನ್ನು ಇವುಗಳು ಆರೋಗ್ಯಕರ ಗುಣವನ್ನು ಹೊಂದಿದ್ದು ಇವುಗಳು ಮಿತ ಸೇವನೆ ಹೊಟ್ಟೆಯ ಅಜೀರ್ಣ , ದುರ್ವಾಸನೆಯನ್ನು ತಡೆಯುತ್ತದೆ. ದೀರ್ಘಾವದಿಯ ದೇಹದ ಕಜ್ಜಿಗಳು ದೂರವಾಗುತ್ತದೆ ಎನ್ನುತ್ತಾರೆ ಹಿರಿಯರು.
ಒಟ್ಟಿನಲ್ಲಿ ಮಲೆನಾಡು ಭಾಗದಲ್ಲಿ ಬೆಳೆಯುವ ಈ ಜೀರಿಗೆ ಮಾವಿನ ಮಿಡಿ ಬಂಗಾರದ ಬೆಲೆ ಪಡೆದುಕೊಂಡಿದ್ದು ಈ ಬೆಳೆ ನಂಬಿದ ರೈತರಿಗೆ ಲಾಭ ತರುತ್ತಿದೆ.