Karwar| ರಬ್ಬರ್ ಮೋಲ್ಡ್ ಕಾಟ ಬಂದಾಯ್ತು ನೀರಿನ ಘಟಕ! ಏನಿದು ಕಥೆ ?
ಕಾರವಾರ :- ಕಾರವಾರದ ನಗರಸಭೆ ವ್ಯಾಪ್ತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಕಾಯನ್ ಹಾಕುವ ಬದಲು ಕಿಡಿಗೇಡಿಗಳು ಕಾಯನ್ ರೂಪದ ರಬ್ಬರ್ ವಸ್ತುವನ್ನು ಹಾಕಿ ಯಂತ್ರವೇ ಕೆಡುವಂತೆ ಮಾಡಿದ್ದಾರೆ.
ಇದನ್ನೂ ಓದಿ:-Karwar | ಮೀನು ತುಂಬಿದ ವಾಹನ ಹರಿದು ಕಾರ್ಮಿಕ ಸಾವು
ಇದರಿಂದ ಹಲವು ಯಂತ್ರಗಳು ಕೆಟ್ಟು, ನೀರಿನ (water) ಸರಬರಾಜೇ ಆಗದಂತಾಗಿದೆ.
ಕಾರವಾರ ನಗರ ವ್ಯಾಪ್ತಿಯಲ್ಲಿ ಒಟ್ಟೂ ಹತ್ತು ಶುದ್ಧ ಕುಡಿಯುವ ನೀರಿನ ಘಟಗಳನ್ನು ಸ್ಥಾಪನೆ ಮಾಡಲಾಗಿದೆ.
ಒಂದು ಅಥವಾ ಎರೆಡು ರೂ. ನಾಣ್ಯ ಬಳಸಿ ನೀರು ತುಂಬಿಕೊಳ್ಳುವ ಈ ಘಟಕಗಳಿಗೆ ನಾಣ್ಯದಂತೆ ಇರುವ ರಬ್ಬರ್ ಮೋಲ್ಡ್ ಗಳು ಪತ್ತೆಯಾಗಿದ್ದು ಇದುವೇ ಶುದ್ಧ ಕುಡಿಯುವ ನೀರಿಗೆ ಮುಳುವಾಗಿವೆ.
ಇದನ್ನೂ ಓದಿ:-Karwar ನಗರಸಭೆಯಲ್ಲೊಂದು NIGHT SHELTER ಏನಿದು ಗೊತ್ತಾ? Video ನೋಡಿ
ಇಲ್ಲಿನ ನಗರಸಭೆ, ಟ್ಯಾಗೋರ್ ಕಡಲತೀರ, ಬಸ್ ನಿಲ್ದಾಣ, ಪೊಲೀಸ್ ಹೆಡ್ ಕ್ವಾಟರ್ಸ್, ಎಸ್ಪಿ ಕಚೇರಿ ಬಳಿ, ಹಬ್ಬುವಾಡ, ಕೆಎಚ್ ಬಿ ಕಾಲೋನಿ, ವಿವೇಕಾನಂದ ನಗರ, ಪಂಚರಿಶಿವಾಡ ಹಾಗೂ ಸುಂಕೇರಿ ಸೇರಿದಂತೆ ಒಟ್ಟೂ ಹತ್ತು ಶುದ್ಧ ಕುಡಿಯುವ ನೀರಿನ ಘಟಗಳನ್ನು ಸ್ಥಾಪಿಸಲಾಗಿದೆ.
ಇವುಗಳ ಪೈಕಿ ನಗರ ಭಾಗದಲ್ಲಿರುವ ನಾಲ್ಕು ಘಟಕಗಳು ಕಾರ್ಯ ನಿಲ್ಲಿಸಿವೆ.
ಒಂದು ಅಥವಾ ಎರಡು ರೂ. ನಾಣ್ಯದಷ್ಟೇ ಗಾತ್ರ ಇರುವ ರಬ್ಬರ್ ತುಂಡುಗಳನ್ನು ಕತ್ತರಿಸಿ ಯಂತ್ರಕ್ಕೆ ಹಾಕಲಾಗುತ್ತಿದೆ. ಇದರಿಂದ ಒಮ್ಮೆ ನೀರು ಬಂದರೂ ಬರಬಹುದು. ಆದರೆ ಯಂತ್ರ ಕೆಡುತ್ತವೆ. ಇಂತಹ ಕೃತ್ಯಗಳಿಂದಲೇ, ಎಸ್ಪಿ ಕಚೇರಿಯ ಬಳಿ, ವಿವೇಕಾನಂದ ನಗರ, ಪೊಲೀಸ್ ಹೆಡ್ ಕ್ವಾಟರ್ಸ್ ಹಾಗೂ ಕೆ ಎಚ್‌ಬಿ ಕಾಲೇನಿಯ ನೀರಿನ ಘಟಕಗಳು ಕೆಟ್ಟಿವೆ.
ಹೀಗಾಗಿ ರಾತ್ರಿಯ ವೇಳೆ ಅನಿವಾರ್ಯವಾಗಿ ಅಂಗಡಿಗಳು ಅಥವಾ ಇತರೆ ಡೀಲರ್ ಗಳಿಂದ ಹಣ ನೀಡಿ ನೀರು ಖರೀದಿ ಮಾಡುವ ಪರಿಸ್ಥಿತಿ ಜನರಿಗೆ ಎದುರಾಗಿದೆ.
ಶುದ್ಧ ಕುಡಿಯುವ ನೀರಿನ ಘಟಕಗಳು ಈ ರೀತಿ ಕೆಡುತ್ತಿರುವುದು ನಗರಸಭೆ ಗಮನಕ್ಕೆ ಬಂದಿದೆ. ಕೆಲವೆಡೆ ಪದೇ ಪದೇ ಈ ರೀತಿಯ ಆಗುತ್ತಿದೆ. ಹೀಗಾಗಿಯೇ ಕಳೆದ ಕೆಲವು ದಿನಗಳಿಂದ ಯಂತ್ರಗಳು ಕೆಟ್ಟಿರುವ ಬಗ್ಗೆ ಫಲಕಗಳನ್ನು ಹಾಕಿದ್ದು, ಯಂತ್ರಗಳನ್ನು ರಿಪೇರಿ ಮಾಡಲು ಯಲ್ಲಾಪುರದಿಂದ ಎಂಜಿನಿಯರ್ ಬರುತ್ತಿದ್ದು ಈ ಬಗ್ಗೆ ಗಮನ ಹರಿಸುವಂತೆ ತಿಳಿಸಲಾಗಿದೆ. ಅಲ್ಲದೇ ಇರುವ ಹತ್ತು ಘಟಕಗಳನ್ನು ಕೂಡ ಪರಿಶೀಲಿಸಲು ತಿಳಿಸಲಾಗಿದೆ ಎಂದು ನಗರಸಭೆಯ ಆಯುಕ್ತ ಜಗದೀಶ ಹುಲಗೆಜ್ಜಿ ತಿಳಿಸಿದ್ದಾರೆ.
ಶುದ್ಧ ಕುಡಿಯುವ ನೀರಿನ ಘಟಕಕ್ಕೆ ರಬ್ಬರ್ ನನ್ನು
ಹಾಕುತ್ತಿದ್ದಾರೆ. ಹೀಗಾಗಿ ನಗರ ವ್ಯಾಪ್ತಿಯ ಘಟಕಗಳ ಪೈಕಿ ಬಹುತೇಕ ಘಟಕಗಳು ಬಂದ್ ಆಗಿದೆ. ಶೀಘ್ರದಲ್ಲಿಯೇ ಯಂತ್ರವನ್ನು ಸರಿಪಡಿಸಲಾಗುತ್ತದೆ. ಎಂದು ನಗರಸಭಾ ಆಯುಕ್ತಜಗದೀಶ ಹುಲಿಗೆಜ್ಜಿ ಮಾಹಿತಿ ನೀಡಿದ್ದಾರೆ.