ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karnika:ಆಕಾಶದತ್ತ ಚಿಗುರೀತಲೇ ಬೇರು ಮುದ್ದಾದಿತಲೇ ಪರಾಕ್ ಈ ವರ್ಷ ದೈವವಾಣಿ ಹೇಳಿದ್ದೇನು ನೋಡಿ.

ಐತಿಹಾಸಿಕ ನೆಲೆಗಟ್ಟಿನ ಮಾಲತೇಶ ಸ್ವಾಮಿ ಕಾರ್ಣೀಕೋತ್ಸವ ಪ್ರತಿ ವರ್ಷ ದಸರಾ ಹಬ್ಬದ ಸಂದರ್ಭದಲ್ಲಿ ನಡೆಯುತ್ತದೆ.ಇಂದು ಆಯುಧ ಪೂಜೆ ದಿನವೇ ಮಾಲತೇಶ ಸ್ವಾಮಿ ಕಾರ್ಣೀಕೋತ್ಸವ ಸಡಗರ ಸಂಭ್ರಮದಿಂದ ನಡೆಯಿತು.
10:18 PM Oct 11, 2024 IST | ಶುಭಸಾಗರ್

ಹಾವೇರಿ :-ರಾಜ್ಯದ ಐತಿಹಾಸಿಕ ಕ್ಷೇತ್ರವಾಗಿರುವ ಹಾವೇರಿ ಜಿಲ್ಲೆಯ ರಾಣೇಬೆನ್ನೂರು (Ranebennur) ತಾಲೂಕಿನ ದೇವರಗುಡ್ಡದಲ್ಲಿ (Devaragudda) ಶ್ರೀ ಮಾಲತೇಶ ಸ್ವಾಮಿಯ ದಸರಾ (Dasara) ಮತ್ತು ಕಾರ್ಣಿಕೋತ್ಸವವನ್ನು ಆಯೋಜಿಸಲಾಗಿತ್ತು. ಅಕ್ಟೋಬರ್ 3ರ ಗುರುವಾರ ದಸರಾ ಆಚರಣೆಗೆ ಘಟಸ್ಥಾಪನೆ ಮಾಡಲಾಗಿತ್ತು.

Advertisement

ಇದನ್ನೂ ಓದಿ:-SIRSI ಮಾರಿಕಾಂಬಾ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಇನ್ನುಮುಂದೆ ವಸ್ತ್ರ ಸಂಹಿತೆ ಜಾರಿ.

ಇಂದು (ಅಕ್ಟೋಬರ್ 11) ಮಹಾನವಮಿಯ (Mahanavami) ದಿನ ಸಂಜೆ 6 ಗಂಟೆಗೆ ಗುರುಗಳ ಆಶೀರ್ವಾದದ ನಂತರ ಕಾರ್ಣಿಕ ಅಜ್ಜನವರಿಂದ ಕಾರ್ಣಿಕೋತ್ಸವ (Devaragudda Karnikotsava) ನಡೆಯಿತು.

ಮಾಲತೇಶ ದೇವರ ಕಾರ್ಣಿಕ ಅಂದ್ರೆ ವರ್ಷದ ಭವಿಷ್ಯವಾಣಿ ಅಂತಲೆ ಫೇಮಸ್. ದಸರಾ ಹಬ್ಬದ ಸಮಯದಲ್ಲಿ ನಡೆಯೋ ಕಾರ್ಣೀಕವಾಣಿಯ ಆಧಾರದ ಮೇಲೆ ರೈತರ ಮಳೆ ಬೆಳೆ ನಿರ್ಧರಿಸುತ್ತಾರೆ.

Advertisement

ರಾಜಕೀಯವಾಗಿಯೂ ಕಾರ್ಣಿಕವನ್ನು ವಿಶ್ಲೇಷಿಸಲಾಗುತ್ತೆ. ಈ ವರ್ಷದ ಭವಿಷ್ಯವಾಣಿ ಎಂದು ಕರೆಯುತ್ತಾರೆ.

ದೇವರಗುಡ್ಡದ ಮಾಲತೇಶ ಸ್ವಾಮಿ ಕಾರ್ಣೀಕವನ್ನು ದೈವವಾಣಿ ಅಂತಾನೇ ಭಕ್ತರು ನಂಬುತ್ತಾರೆ. ಕಾರ್ಣೀಕ ನುಡಿ ಸುಳ್ಳಾಗಲ್ಲ, ಅದು ಸತ್ಯವೇ ಆಗುತ್ತದೆ ಎಂಬ ಪ್ರತೀತಿ ಮೊದಲಿನಿಂದಲೂ‌ ಇದೆ.

ಮಾಲತೇಶ ಸ್ವಾಮಿಗೆ ಹೊರ ರಾಜ್ಯ, ಹೊರ ದೇಶಗಳಲ್ಲೂ‌ ಭಕ್ತರಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡಾ ಕೆಲ ದಿನಗಳ ಹಿಂದಷ್ಟೇ ಮೂಡಾ ಸಂಕಷ್ಟ ನಿವಾರಣೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು.

ಇಂಥ ಐತಿಹಾಸಿಕ ನೆಲೆಗಟ್ಟಿನ ಮಾಲತೇಶ ಸ್ವಾಮಿ ಕಾರ್ಣೀಕೋತ್ಸವ ಪ್ರತಿ ವರ್ಷ ದಸರಾ ಹಬ್ಬದ ಸಂದರ್ಭದಲ್ಲಿ ನಡೆಯುತ್ತದೆ.ಇಂದು ಆಯುಧ ಪೂಜೆ ದಿನವೇ ಮಾಲತೇಶ ಸ್ವಾಮಿ ಕಾರ್ಣೀಕೋತ್ಸವ ಸಡಗರ ಸಂಭ್ರಮದಿಂದ ನಡೆಯಿತು.

ಇದನ್ನೂ ಓದಿ:-Kumta| ಮೆಕ್ಕೆಜೋಳ ,ಡ್ರಾಗನ್ ಪ್ರೂಟ್ ನಲ್ಲಿ ಅರಳಿದ ಗ್ರಾಮ ದೇವತೆ ಶ್ರೀ ಶಾಂತಿಕಾ ಪರಮೇಶ್ವರಿ

ಸಾವಿರಾರು ಜನ ಭಕ್ತರು ಕಾರ್ಣೀಕೋತ್ಸವಕ್ಕೆ ಸಾಕ್ಷಿಯಾದರು. ಭಕ್ತರ ಸಮ್ಮುಖದಲ್ಲಿ ಗೊರವಯ್ಯ ನಾಗಪ್ಪಜ್ಜ ಉರ್ಮಿ, 21 ಅಡಿ ಬಿಲ್ಲನ್ನೇರಿ ಕಾರ್ಣೀಕ ನುಡಿದರು.

ಈ ಕಾರ್ಣೀಕ ಅನ್ನದಾತರ ಪಾಲಿಗೆ ಹರ್ಷ ತಂದಿದೆ. ಆಕಾಶದತ್ತ ಚಿಗುರೀತಲೇ ಎಂದರೆ ಈ ವರ್ಷವೂ ರೈತರಿಗೆ ಒಳ್ಳೆ ಫಸಲು ಬರುತ್ತೆ. ಮಳೆ ಚೆನ್ನಾಗಿ ಆಗುತ್ತದೆ. ಸಮೃದ್ದ ಬೆಳೆಯಿಂದ ರೈತರು ಸಂತುಷ್ಟಗೊಳ್ಳಲಿದ್ದಾರೆ ಎಂಬರ್ಥದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ.

ರಾಜಕೀಯವಾಗಿವೂ ಕಾರ್ಣೀಕವನ್ನು ಹಲವು ದೃಷ್ಟಿಕೋನದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ.

ಆಕಾಶದತ್ತ ಚಿಗುರೀತಲೇ, ಅಂದರೆ ಈಗಿರುವ ನಾಯಕತ್ವ ಆಕಾಶದೆತ್ತರಕ್ಕೆ ಬೆಳೆದಿದೆ. ಆ ನಾಯಕತ್ವವನ್ನು ಕಾನೂನಿನ ಅಡೆತಡೆಯನ್ನೂ ಮೀರಿ ಎಲ್ರೂ ಒಪ್ಪಿಕೊಳ್ಳಬಹುದು ಎಂಬರ್ಥದಲ್ಲಿ ವಿಶ್ಲೇಷಣೆ ಮಾಡಲಾಗ್ತಿದೆ.

ಇದನ್ನೂ ಓದಿ:-Daily astrology |ದಿನಭವಿಷ್ಯ 11 october 2024

ಸದ್ಯ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಸಿಎಂ ಸಿದ್ದರಾಮಯ್ಯ ಮೂಡಾ ಸಂಕಷ್ಟ ಎದುರಿಸ್ತಿದ್ದಾರೆ. ಕಾನೂನು ಹೋರಾಟವನ್ನೂ ಮೀರಿ ಅವರ ನಾಯಕತ್ವವನ್ನು ಒಪ್ಪಿಕೊಳ್ಳೋ ಸಂದರ್ಭ ಬರಬಹುದು ಎಂಬರ್ಥದಲ್ಲಿ ಒಗಟಿನ ರೀತಿಯಲ್ಲಿ ವಿಶ್ಲೇಷಣೆ ಮಾಡಲಾಗುತ್ತದೆ ಎಂದು ಸಂತೋಷ ಭಟ್ಟ ಗುರೂಜಿ ವಿಶ್ಲೇಷಣೆ ಮಾಡಿದ್ದಾರೆ.

ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರೋ ದೇವರಗುಡ್ಡದ ಕಾರ್ಣಿಕ ವರ್ಷದ ಭವಿಷ್ಯವಾಣಿ ಅಂತಾನೆ ಫೇಮಸ್ ಆಗಿದೆ. ಸಾಕ್ಷಾತ್ ದೇವರಗುಡ್ಡದ ದೇವರೆ ಗೊರವಪ್ಪನ ಮೈಮೇಲೆ ಅವತರಿಸಿ ವರ್ಷದ ಭವಿಷ್ಯವಾಣಿ ನುಡಿಸುತ್ತಾನೆ ಅನ್ನೋದು ಕಾರ್ಣಿಕವಾಣಿಯ ವಿಶಿಷ್ಟತೆಗೆ ಸಾಕ್ಷಿಯಾಗಿದೆ.

Advertisement
Tags :
BavishyaHaveriKarnatakaKarnikayear prediction 2024ಭವಿಷ್ಯ
Advertisement
Next Article
Advertisement