Karwar ಶಾಸಕ ಸತೀಶ್ ಸೈಲ್ ಬಿಗ್ ರಿಲೀಫ್ ವಿಧಿಸಿದ ಶಿಕ್ಷೆ ಅಮಾನತ್ತಿನಲ್ಲಿಟ್ಟ ಕೋರ್ಟ
Bangaluru News 13 November 2024 :- ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ (Belekeri Port Case) ಆರೋಪಿಯಾಗಿದ್ದ ಕಾರವಾರದ (karwar) ಕಾಂಗ್ರೆಸ್ ಶಾಸಕ ಸತೀಶ್ ಸೈಲ್ (Congress MLA Satish Sail) ಹೈಕೋರ್ಟ್‌ನಿಂದ ತಡೆಯಾಜ್ಞೆ ಸಿಕ್ಕಿದೆ.
ಸತೀಶ್ ಸೈಲ್ ಹಾಗೂ ಇತರೆ ಆರೋಪಿಗಳಿಗೆ ವಿಧಿಸಿರುವ ಶಿಕ್ಷೆಯನ್ನು ಹೈಕೋರ್ಟ್ (High Court) ಅಮಾನತ್ತಿನಲ್ಲಿಟ್ಟು ಆದೇಶ ಪ್ರಕಟಿಸಿದೆ.
ಇದನ್ನೂ ಓದಿ:-SIRSI| ತಪ್ಪು ಮಾಡಿದ್ದು ಮಗ-ಅಪ್ಪನಿಗೆ ಕೊಡ್ತು COURT ಶಿಕ್ಷೆ?
ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ದಂಡದ ಮೊತ್ತದಲ್ಲಿ 25% ರಷ್ಟು ಕೋರ್ಟ್ ನಲ್ಲಿ ಠೇವಣಿ ಇಡುವಂತೆ ಷರತ್ತು ವಿಧಿಸಿದೆ. ದಂಡದ ಮೊತ್ತವನ್ನು 6 ವಾರದಲ್ಲಿ ಠೇವಣಿ ಇಡುವಂತೆ ಅಪರಾಧಿಗಳಿಗೆ ಸೂಚಿಸಿದೆ.
ಈ ಮೂಲಕ ಶಾಸಕ ಸ್ಥಾನಕ್ಕೆ ಬಂದಿತ್ತ ಕುತ್ತು ಸಹ ನಿವಾರಣೆಯಾಗಿದ್ದು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ.
ಇದನ್ನೂ ಓದಿ:-Mining case: ಶಾಸಕ ಸೈಲ್ ಅಪರಾಧಿ ಎನ್ನುವ BJP ಗರು ಇದನ್ನು ಓದಿ! ಮುಚ್ಚಿಟ್ಟ ರಹಸ್ಯದ ಸುತ್ತ?