Karwar ಕದಂಬ ನೌಕಾನೆಲೆ ವ್ಯಾಪ್ತಿಯಲ್ಲಿ ಟ್ರಾಕರ್ ಅಳವಡಿಸಿದ ರಣಹದ್ದು ಪತ್ತೆ!
Karwar news 10 November 2024:- ಉತ್ತರ ಕನ್ನಡ ಜಿಲ್ಲೆಯ ಕಾರವಾರದ (karwar) ಕದಂಬ ನೌಕಾನೆಲೆಯ( Naval base) ವ್ಯಾಪ್ತಿಯಲ್ಲಿ ಈ ಹಿಂದೆ ರಾತ್ರಿ ವೇಳೆ ದ್ರೋಣ್ ಕ್ಯಾಮರಾ ಬಳಸಿ ನೌಕಾನೆಲೆಯ ಚಿತ್ರಗಳನ್ನು ಆಗುಂತಕರು ಸೆರೆಹಿಡಿದ ಬೆನ್ನಲ್ಲೇ ಇದೀಗ ಇದೀಗ ನೌಕಾ ನೆಲೆಯ ಸರಹದ್ದು ವ್ಯಾಪ್ತಿಯಲ್ಲಿ ಟ್ರಾಕರ್ ಅಳವಡಿಸಿದ್ದ ರಣಹದ್ದು ಪ್ರತ್ಯಕ್ಷವಾಗಿದ್ದು ಕಾರವಾರದ ನದಿ ವಾಡದಲ್ಲಿ ಸ್ಥಳೀಯರು ಇದರ ಫೋಟೋ ತೆಗೆದು ನೌಕಾದಳದ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರಣಹದ್ದಿನ ದೇಹದ ಮೇಲೆ ಟ್ರಾಕರ್ ಅಳವಡಿಸಲಾಗಿದ್ದು ಕಾಲುಗಳಿಗೆ ಟೇಪ್ ಗಳ ಬಳೆಗಳನ್ನು ಅಳವಡಿಸಲಾಗಿದೆ.
ಹೀಗಾಗಿ ರಣಹದ್ದಿನ ಮೂಲಕ ಬೇಹುಗಾರಿಕೆಯನ್ನು ಶತ್ರು ರಾಷ್ಟ್ರಗಳು ನಡೆಸುತ್ತಿರಬಹುದೇ ಎಂಬ ಸಂಶಯ ವ್ಯಕ್ತವಾಗಿದ್ದು ಈ ಹದ್ದನ್ನು ಹಿಡಿಯಲು ಪ್ರಯತ್ನಿಸಿದರೂ ಸಿಗದೇ ಹಾರಿ ಹೋಗಿದೆ.
ಈ ಹಿಂದೆ ಕದಂಬ ನೌಕಾನೆಲೆಯಲ್ಲಿ ಅಧಿಕಾರಿಳು ಹಾಗೂ ಸ್ಥಳೀಯ ಕಾರ್ಮಿಕರನ್ನು ಬಳಸಿ ಶತ್ರು ರಾಷ್ಟ್ರವು ಕದಂಬ ನೌಕಾನೆಲೆಯ ಎರಡನೇ ಹಂತದ ಕಾಮಗಾರಿ ಹಾಗೂ ಯುದ್ದ ಹಡಗುಗಳ ಬಗ್ಗೆ ಮಾಹಿತಿ ಪಡೆದಿದ್ದರು.
ಈ ಪ್ರಕರಣ ಸಂಬಂಧ ಐದು ಜನರನ್ನು ಬಂಧಿಸಲಾಗಿತ್ತು. ಆದರೇ ಇದೀಗ ರಾತ್ರಿ ನಿಷೇಧಿತ ನೌಕಾನೆಲೆಯ ಪ್ರದೇಶದಲ್ಲಿ ದ್ರೋಣ ಕ್ಯಾಮರಾ ಹಾರಿಸಿದ್ದು ಇದರ ಬೆನ್ನಲ್ಲೇ ಟ್ರಾಕರ್ ಅಳವಡಿಸಿದ ಹದ್ದು ಹಾರಾಟ ಮಾಡಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.