MockDrills :ಉತ್ತರ ಕನ್ನಡ ಜಿಲ್ಲೆಯ ಕೈಗಾ , ಕಾರವಾರ ದಲ್ಲಿ ಮಾಕ್ ಡ್ರಿಲ್
MockDrills :ಉತ್ತರ ಕನ್ನಡ ಜಿಲ್ಲೆಯ ಕೈಗಾ , ಕಾರವಾರ ದಲ್ಲಿ ಮಾಕ್ ಡ್ರಿಲ್

ಕಾರವಾರ:-ಭಾರತ-ಪಾಕಿಸ್ತಾನದ ಮಧ್ಯೆ ಹೆಚ್ಚಾಗುತ್ತಿರುವ ಉದ್ವಿಗ್ನತೆ ನಡುವೆ ಕೇಂದ್ರ ಗೃಹ ಸಚಿವಾಲಯದ ಸೂಚನೆ ಅನ್ವಯ ದೇಶದ 244 ಸಿವಿಲ್ ಡಿಫೆನ್ಸ್ ಜಿಲ್ಲೆಗಳಲ್ಲಿ ನಾಳೆ ಮಾಕ್ ಡ್ರಿಲ್ ನಡೆಯಲಿದ್ದು ದೇಶದ ಅತೀ ಸೂಕ್ಷ್ಮ ಪ್ರದೇಶವಾದ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆ ಹಾಗೂ ಮಲ್ಲಾಪುರದ ಕೈಗಾದಲ್ಲಿ ಮಾಕ್ ಡ್ರಿಲ್ ನಡೆಯಲಿದೆ.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ .ನಾರಾಯಣ್ ಕಾರವಾರ ಮತ್ತು ಕೈಗಾದಲ್ಲಿ ನಾಳೆ ನಾಲ್ಕು ಗಂಟೆಗೆ ಮಾಕ್ ಡ್ರಿಲ್ ಮಾಡಲಾಗುತ್ತದೆ. ಈ ಕಾರ್ಯಾಚರಣೆಗೆ ಆಪರೇಷನ್ ಅಭ್ಯಾಸ್ ಎಂದು ಹೆಸರು ಕೊಡಲಾಗಿದೆ.
ಇದನ್ನೂ ಓದಿ:-Uttara kannda:ಕರಾವಳಿಯಲ್ಲಿ ಅಲರ್ಟ – ಪ್ರವಾಸಿಗರ ಮಾಹಿತಿ ಕಲೆಹಾಕುತ್ತಿರುವ ಪೊಲೀಸರು
ಈ ಮಾಕ್ ಡ್ರಿಲ್ ನಲ್ಲಿ ಪೊಲೀಸರು, ನೇವಿ,ನೇವಿ ಸಿವಿಲಿಯನ್,ಗೃಹರಕ್ಷಕ ದಳ, ಸಿ.ಆರ್.ಪಿ.ಎಫ್, ಅಗ್ನಿಶಾಮಕ ದಳ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಇದರ ಉದ್ದೇಶ ಯುದ್ದ ಸನ್ನಿವೇಶ ಎದುರಿಸಲು ತೆಗೆದುಕೊಳ್ಳಬೇಕಾದ ಜಾಗೃತಿ ಅರಿವಾಗಿದೆ ಎಂದಿದ್ದಾರೆ. ಇನ್ನು ಮಾಕ್ ಡ್ರಿಲ್ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ತುರ್ತು ಸಭೆ ಕರೆದಿದ್ದು ನಾಳೆ ನಡೆಯುವ ಮಾಕ್ ಡ್ರಿಲ್ ಪೂರ್ವಭಾವಿ ಸಭೆ ಇದಾಗಿದೆ.