Karnataka : ಹಾಲಿನ ದರದ ಜೊತೆ ಮೊಸರಿನ ದರ ಹೆಚ್ಚಳ - ಈಗೆಷ್ಟು ದರ ವಿವರ ನೋಡಿ

Karnataka : ಹಾಲಿನ ದರದ ಜೊತೆ ಮೊಸರಿನ ದರ ಹೆಚ್ಚಳ - ಈಗೆಷ್ಟು ದರ ವಿವರ ನೋಡಿ
ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲಿನ(Nandini milke) ದರವನ್ನು ಪ್ರತಿ ಲೀಟರ್ ಗೆ ರೂ.4 ಹೆಚ್ಚಳ ಮಾಡಿರುವುದು ಅಧಿಕೃತಗೊಂಡಿತ್ತು. ಆ ಬೆನ್ನಲ್ಲೇ ನಂದಿನಿ ಮೊಸರಿನ ದರವನ್ನು ಪರಿಷ್ಕರಿಸಲಾಗಿದೆ. ಪ್ರತಿ ಲೀಟರ್ ಮೊಸರಿನ ದರವನ್ನು 4 ರೂ ಹೆಚ್ಚಳ ಮಾಡಲಾಗಿದೆ.
ಈ ಬಗ್ಗೆ ಕರ್ನಾಟಕ ಹಾಲು ಮಹಾಮಂಡಲ(KMF) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು ಕರ್ನಾಟಕ ಹಾಲು ಮಹಾಮಂಡಳ (ಕೆ.ಎಂ.ಎಫ್) ಕಳೆದ ಐದು ದಶಕಗಳಿಂದ ರಾಜ್ಯದ ಹಾಲು ಉತ್ಪಾದಕರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದು, ರೈತರ ಆರ್ಥಿಕ ಸದೃಡತೆಗಾಗಿ ಕೆಲಸ ಮಾಡುತ್ತಿದೆ.
ಕೆ.ಎಂ.ಎಫ್‌ನ ಸದಸ್ಯ ಒಕ್ಕೂಟಗಳು ಹಾಲು ಉತ್ಪಾದಕರಿಂದ ಹಾಲು ಖರೀದಿಸಿ, ಸಂಸ್ಕರಿಸಿ, ನಂದಿನಿ ಬ್ರಾಂಡ್ ಅಡಿಯಲ್ಲಿ ವಿವಿಧ ಬಗೆಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ಒದಗಿಸುತ್ತಿದೆ ಎಂದಿದೆ.
ಇದನ್ನೂ ಓದಿ:-Karnataka :ಗುಲಾಮನೊಬ್ಬ ದೈವವಾದ ಕತೆ: ಈತನಿಗೆ ಮದ್ಯ,ಸಿಗರೇಟೇ ನೈವೇದ್ಯ!
ಪ್ರಸ್ತುತ, ರಾಜ್ಯದ 26.84 ಲಕ್ಷ ಹೈನುಗಾರ ರೈತರ ಪೈಕಿ ಸರಾಸರಿ 8.90 ಲಕ್ಷ ರೈತರು - ಪ್ರತಿ ದಿನ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಪೂರೈಸುತ್ತಿದ್ದಾರೆ. ದೇಶದ ಎರಡನೇ ಅತಿದೊಡ್ಡ ಸಹಕಾರ ಹೈನೋದ್ಯಮವಾಗಿರುವ ಕೆ.ಎಂ.ಎಫ್, ಗ್ರಾಹಕರಿಂದ ಬರುವ ಪ್ರತಿಯೊಂದು ರೂಪಾಯಿಯಲ್ಲಿ 80 ಪೈಸೆಗಿಂತ ಹೆಚ್ಚು ಹಣ ರೈತರಿಗೆ ನೇರವಾಗಿ ನೀಡುತ್ತಿದೆ. ಪ್ರತಿದಿನ, ರಾಜ್ಯದ ಹಾಲು ರೂ.28.60 ಕೋಟಿ ಹಣ ನೇರವಾಗಿ ಪಾವತಿ ಉತ್ಪಾದಕರಿಗೆ ಸರಾಸರಿ ಮಾಡಲಾಗುತ್ತಿದೆ ಎಂಬುದಾಗಿ ತಿಳಿಸಿದೆ.
ಕೆ.ಎಂ.ಎಫ್ ಹೈನುಗಾರಿಕೆಗೆ ಪೂರಕವಾಗಿ ಪಶುವೈದ್ಯಕೀಯ ಸೇವೆ, ಕೃತಕ ಗರ್ಭಧಾರಣೆ,ಪಶು ಆಹಾರ ಪೂರೈಕೆ, ಮೇವು ಅಭಿವೃದ್ಧಿ ತರಬೇತಿ ಮುಂತಾದ ಸೌಲಭ್ಯಗಳನ್ನು ನಿರಂತರವಾಗಿ ಒದಗಿಸುತ್ತಿದೆ. ರೈತರ ಸುಧಾರಿತ ಅನುಕೂಲಕ್ಕಾಗಿ ಮೇವು ಕತ್ತರಿಸುವ ಯಂತ್ರ, ಹಾಲು ಕರೆಯುವ ಯಂತ್ರ, ರಬ್ಬರ್ ಮ್ಯಾಟ್ ಮುಂತಾದ ಉಪಕರಣಗಳನ್ನೂ ವಿತರಿಸುತ್ತಿದೆ. ವರ್ಷದ ಎಲ್ಲಾ ಸಮಯದಲ್ಲೂ ರೈತರಿಂದ ನಿರಂತರವಾಗಿ ಹಾಲು ಖರೀದಿಸಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಪಶು ಆಹಾರ ಉತ್ಪಾದನೆಗೆ ಬಳಸುವ ಮೆಕ್ಕೆಜೋಳ, ಅಕ್ಕಿತೌಡು, ಹತ್ತಿಕಾಳು ಹಿಂಡಿ, ಖನಿಜ ಪದಾರ್ಥಗಳ ಬೆಲೆ ಶೇ.35-40ರಷ್ಟು ಹೆಚ್ಚಳವಾಗಿದೆ ಹಾಗೂ ಹೈನುರಾಸುಗಳ ನಿರ್ವಹಣಾ ವೆಚ್ಚವೂ ಸಹ ಗಣನೀಯವಾಗಿ ಅಧಿಕವಾಗಿದೆ ಎಂದಿದೆ.
ದಿನಾಂಕ: 27.03.2025ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಹಾಲು ಉತ್ಪಾದನೆ ಮತ್ತು ಸಂಸ್ಕರಣಾ ವೆಚ್ಚಗಳನ್ನು ಪರಿಗಣಿಸಿ ರಾಜ್ಯದಲ್ಲಿ ಹೈನೋದ್ಯಮಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಪ್ರತಿ ಲೀಟರ್/ಕೆಜಿಗೆ ರೂ.4/- ರಂತೆ ಹೆಚ್ಚಿಸಲು ಸಮ್ಮತಿಸಲಾಯಿತು.
ದರ ಪರಿಷ್ಕರಣೆಯ ಮೊತ್ತವು ರಾಜ್ಯದ ಹಾಲು ಉತ್ಪಾದಕರಿಗೆ ನೇರವಾಗಿ ತಲುಪುವಂತೆ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಈ ಹಿಂದೆ ದಿನಾಂಕ 26.06.2024 ರಿಂದ ಪ್ರತಿ 1 ಲೀಟರ್ ನಂದಿನಿ ಹಾಲಿಗೆ 50 ಮಿಲಿ ಹೆಚ್ಚುವರಿ ನೀಡಿ ಸದರಿ ಪ್ರಮಾಣಕ್ಕೆ ರೂ.2/-ರಂತೆ ಹೆಚ್ಚಿಸಲಾಗಿದ್ದ ದರವನ್ನು ಹಿಂಪಡೆದು ಮೊದಲಿನಂತೆ ಯಥಾಸ್ಥಿತಿ 500 ಮಿಲಿ ಮತ್ತು 1 ಲೀಟರ್ ಪೊಟ್ಟಣದಲ್ಲಿ ಪ್ರಸ್ತುತ ರೂ.4/- ದರ ಪರಿಷ್ಕರಣೆಯನ್ನು ಅಳವಡಿಸಿಕೊಂಡು ಮಾರಾಟಕ್ಕೆ ಕ್ರಮವಿಡಲು ತಿಳಿಸಲಾಗಿದೆ ಎಂದು ಹೇಳಿದೆ.
ದರ ಪಟ್ಟಿ ಈ ಕೆಳಗಿನಂತಿದೆ.
ಟೋನ್ಸ್ ಹಾಲು - ನೀಲಿ ಪೊಟ್ಟಣ : 42 ರಿಂದ 46 ರೂಗೆ ಎರಿಕೆ
ಹೋಮೋಜೀನೈಡ್ ಟೋನ್ಸ್ ಹಾಲು : 43 ರಿಂದ ರೂ.47ಕ್ಕೆ ಏರಿಕೆ.
ಹಸುವಿನ ಹಾಲು (ಹಸಿರು ಪೊಟ್ಟಣ) : 46 ರಿಂದ 50 ರೂಗೆ ಏರಿಕೆ
ಶುಭಂ (ಕೇಸರಿ ಪೊಟ್ಟಣ), ಸ್ಪೆಷಲ್ ಹಾಲು : 48 ರಿಂದ 52 ರೂಪಾಯಿಗೆ ಏರಿಕೆ
ಮೊಸರು, ಪ್ರತಿ ಕೆಜಿಗೆ: 50ರಿಂದ 54 ರೂಪಾಯಿಗೆ ಏರಿಕೆ