For the best experience, open
https://m.kannadavani.news
on your mobile browser.
Advertisement

Bhatkal :ಭಟ್ಕಳ ಪೊಲೀಸರ ಭರ್ಜರಿ ಕಾರ್ಯಾಚರಣೆ 9 kg ಗಾಂಜಾ ವಶಕ್ಕೆ

Bhatkal news :- ಖಚಿತ ಮಾಹಿತಿ ಮೆರೆಗೆ ಅಕ್ರಮವಾಗಿ ಕಾರಿನಲ್ಲಿ 9 ಕೆಜಿ 170 ಗ್ರಾಂ ಗಾಂಜ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ತೆಂಗಿನಗುಂಡಿ ಕ್ರಾಸ್ ಸಮೀಪ ಭಟ್ಕಳ (bhatkal) ನಗರ ಠಾಣೆಯ ಪೊಲೀಸರು ಭರ್ಜರಿ ಭೇಟೆಯಾಡುವಲ್ಲಿ ಯಶಸ್ವಿಯಾಗಿದ್ದು. ಓರ್ವ ಅರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
09:48 PM Nov 10, 2024 IST | ಶುಭಸಾಗರ್
bhatkal  ಭಟ್ಕಳ ಪೊಲೀಸರ ಭರ್ಜರಿ ಕಾರ್ಯಾಚರಣೆ 9 kg ಗಾಂಜಾ ವಶಕ್ಕೆ

Bhatkal news :- ಖಚಿತ ಮಾಹಿತಿ ಮೆರೆಗೆ ಅಕ್ರಮವಾಗಿ ಕಾರಿನಲ್ಲಿ 9 ಕೆಜಿ 170 ಗ್ರಾಂ ಗಾಂಜ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ತೆಂಗಿನಗುಂಡಿ ಕ್ರಾಸ್ ಸಮೀಪ ಭಟ್ಕಳ (bhatkal) ನಗರ ಠಾಣೆಯ ಪೊಲೀಸರು ಭರ್ಜರಿ ಭೇಟೆಯಾಡುವಲ್ಲಿ ಯಶಸ್ವಿಯಾಗಿದ್ದು. ಓರ್ವ ಅರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

Advertisement

ಇದನ್ನೂ ಓದಿ:- Bhatkal: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಕನ್ನಡಾಂಬೆಗೆ ಪುಷ್ಟ ನಮನ ಸಲ್ಲಿಸಲು ಒಲ್ಲೇ ಎಂದ ಜನಪ್ರತಿನಿಧಿ!

ಬಂಧಿತ ಆರೋಪಿಗಳನ್ನು ಸಯ್ಯದ ಅಕ್ರಮ ತಂದೆ ಮಹ್ಮಮದ ಹುಸೇನ್ (24) ಸೆಂಟ್ರಲ್ ಲಾಡ್ಜ್ ಹಿಂಭಾಗ, ಅಬ್ದುಲ್ ರೆಹಮಾನ್ ತಂದೆ ಸಲಿಂ ಶಾಬ್ ಶೇಖ್(27) ಗುಳ್ಮಿ, ಕಾರು ಚಾಲಕ ಅಜರುದ್ದೀನ್ ತಂದೆ ಮೆಹಬೂಬ್ ಶಾಬ್ (41 ) ಕಸ್ತೂರಬಾ ನಗರ ಶಿರಸಿ, ನಾಪತ್ತೆಯಾದ ಆರೋಪಿ ಖಾಸಿಂ ತಂದೆ ಅಬುಮಹ್ಮಮದ್ ಉಸ್ಮನ ನಗರ 2 ಕ್ರಾಸ್ ಎಂದು ಗುರುತಿಸಲಾಗಿದೆ.

Bhatkal ganja vasha
ಗಾಂಜಾ ವಶಪಡಿಸಿಕೊಂಡ PSI ನವೀನ್ .

ಇವರು ಒರಿಸ್ಸಾ ಮೂಲದಿಂದ ಹೊನ್ನಾವರ ಕಡೆಯಿಂದ ಭಟ್ಕಳಕ್ಕೆ ಹುಂಡೈ ಕಂಪನಿಯ ಕಾರಿನ ಮೂಲಕ ಗಾಂಜಾ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಭಟ್ಕಳ ನಗರ ಠಾಣೆಯ .ಎಸ್.ಐ. ನವೀನ ಎಸ್ ನಾಯ್ಕ ತಂಡದೊಂದಿಗೆ ತೆಂಗಿನಗುಂಡಿ ಕ್ರಾಸ್ ಸಮೀಪ ಕಾರು ತಡೆದು 4 ಲಕ್ಷ 50 ಸಾವಿರ ಮೌಲ್ಯದ 9 ಕೆಜಿ 170 ಗ್ರಾಂ ಹಾಗೂ ಗಾಂಜಾ ಸಾಗಾಟ ಮಾಡುತ್ತಿದ್ದ ಹುಂಡೈ ಕಂಪನಿಯ ಕಾರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ:-Bhatkal: ಗಾಂಜಾ ಜೊತೆ ನಿಷೇಧಿತ ಮಾಧಕ ವಸ್ತು ವಶ ನಾಲ್ಕು ಜನರ ಬಂಧನ

ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಎಂ.ನಾರಾಯಣ ಹಾಗೂ ಜಿಲ್ಲಾ ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿಗಳಾದ ಸಿ.ಟಿ. ಜಯಕುಮಾರ ಮತ್ತು ಜಗದೀಶ.ಎಂ ,ಮಾರ್ಗದರ್ಶನದಲ್ಲಿ ಭಟ್ಕಳ ಡಿವೈಎಸ್ಪಿ ಮಹೇಶ ಎಂ.ಕೆ. ಮತ್ತು ಶಹರ ಠಾಣೆಯ ಪೊಲೀಸ್ ನಿರೀಕ್ಷಕರಾದ ಗೋಪಿಕೃಷ್ಣ ಕೆ.ಆ‌ರ್.
ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಭಟ್ಕಳ ಶಹರ ಪೊಲೀಸ್ ಠಾಣೆಯ ಎ ಎಸ್.ಐ ಗೋಪಾಲ ನಾಯ್ಕ, ಸಿಬ್ಬಂದಿಗಳಾದ ಉದಯ ನಾಯ್ಕ, ಗಿರೀಶ ಅಂಕೋಲೆಕರ್, ಮಹಾಂತೇಶ ಹಿರೇಮಠ, ಕಾಶಿನಾಥ ಗೊಟಗುಣಸಿ, ಮಹಾಂತೇಶ ಪೆಮಾರ್,, ದೀಪಕ ನಾಯ್ಕ ,ಮದಾರಸಾಬ ಚಿಕ್ಕೇರಿ, ಕಿರಣ ಪಾಟೀಲ ಹಾಗೂ ಚಾಲಕ ಜಗದೀಶ ನಾಯ್ಕ ಕಾರ್ಯಾಚರಣೆಯಲ್ಲಿ ಇದ್ದರು

ಈ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ಪಿ.ಎಸ್.ಐ ನವೀನ ನಾಯ್ಕ ಪ್ರಕರಣ ದಾಖಲಿಸಿದ್ದು. ಪ್ರಕರಣ ದಾಖಲಿಸಿಕೊಂಡ ಪಿ.ಎಸ್.ಐ ಶಿವಾನಂದ ನಾವಂದಗಿ ತನಿಖೆ ಕೈಗೊಂಡಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ