Karnataka: ಮನೆಗೆ ನುಗ್ಗಿ ಮಕ್ಕಳ ಅಪಹರಣ ಫೈರಿಂಗ್ ಮಾಡಿ ಮಕ್ಕಳ ರಕ್ಷಣೆ.
Karnataka: ಮನೆಗೆ ನುಗ್ಗಿ ಮಕ್ಕಳ ಅಪಹರಣ ಫೈರಿಂಗ್ ಮಾಡಿ ಮಕ್ಕಳ ರಕ್ಷಣೆ ಸುದ್ದಿ ಓದಲು ಕೆಳಗೆ ಸ್ಕಾರ್ಲ ಮಾಡಿ
ಬೆಳಗಾವಿ: ಮನೆಗೆ ನುಗ್ಗಿ ಮಕ್ಕಳನ್ನು ಅಪಹರಿಸಿ ತೆರಳಿದ್ದ ಕಳ್ಳರ ಮೇಲೆ ಅಥಣಿ ಪೋಲಿಸರಿಂದ ಫೈರಿಂಗ್ ಮಾಡಿ ಇಬ್ಬರೂ ಬಾಲಕರನ್ನು ಸುರಕ್ಷಿತವಾಗಿ ರಕ್ಷಿಸಿದ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಹೊರವಲಯದ ಮಹಾರಾಷ್ಟ್ರ ಗಡಿಯಲ್ಲಿ ಮಕ್ಕಳ ಕಳ್ಳರನ್ನು ತಡೆಗಟ್ಟಲು ಹೋದಾಗ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಆರಕ್ಷಕರು ತಮ್ಮ ಆತ್ಮರಕ್ಷಣೆಗಾಗಿ ಓರ್ವ ಆರೋಪಿನ ಎಡಗಾಲಿಗೆ ಗುಂಡೆಟು ಹೊಡೆದು ಮೂರು ಜನ ಆರೋಪಿಗಳನ್ನು ವಶಪಡಿಸಿಕೊಂಡು ಗಾಯಾಳುವನ್ನು ಅಥಣಿ ಸಮುದಾಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ನಿನ್ನೆ ಗುರುವಾರ ದಿನದಂದು ಅಥಣಿ ಪಟ್ಟಣದ ಹುಲಗಬಾಳ ರಸ್ತೆಯ ಸ್ವಾಮಿ ಪ್ಲಾಟದ ಬಡಾವಣೆಯ ವಿಜಯ್ ದೇಸಾಯಿ ಎಂಬುವರ ಮನೆಗೆ ಹೊಕ್ಕು ಅವರ ಇಬ್ಬರು ಮಕ್ಕಳಾದ
ಸ್ವಸ್ತಿ ವಿಜಯ್ ದೇಸಾಯಿ (೪) ಮತ್ತು ವಿಯೋಮ್ ವಿಜಯ ದೇಸಾಯಿ (೩) ಮಕ್ಕಳನ್ನು ಅಪಹರಿಸಿದ ದುಷ್ಕರ್ಮಿಗಳು ಪರಾರಿಯಾಗಿದ್ದರು.
ಕೂಡಲೇ ಕಾರ್ಯಪ್ರವೃತ್ತರಾದ ಅಥಣಿ ಪೊಲೀಸರು ಮೂರು ತಂಡಗಳನ್ನು ಮಾಡಿಕೊಂಡು ಹುಡುಕಾಟ ನಡೆಸಿದರು.
ಇದನ್ನೂ ಓದಿ:-Karnataka| ಮೊಬೈಲ್ ನಲ್ಲಿ ಪೊಲೀಸರಿಗೆ ದೂರು ನೀಡುವುದು ಹೇಗೆ? ವಿವರ ಇಲ್ಲಿದೆ.
ಮಹಾರಾಷ್ಟ್ರ ಗಡಿಯಾದ ಕೋಹಳ್ಳಿ ಸಿಂಧೂರ್ ಮಾರ್ಗ ಮಧ್ಯದಲ್ಲಿ ಮಕ್ಕಳ ಕಳ್ಳರನ್ನು ಪೊಲೀಸರು ತಡೆಹಿಡಿದಾಗ ದುಷ್ಕರ್ಮಿಗಳು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗುತ್ತಿದ್ದಂತೆ ಪೊಲೀಸರು ಕೊಲ್ಲಾಪುರ ಜಿಲ್ಲೆ ಹಾತ್ ಕನಗಲಾ ಗ್ರಾಮದ ಆರೋಪಿಯಾದ ಸಂಬಾಜಿ ರಾವಸಾಬ ಕಾಂಬಳೆ ಎಂಬುವರ ಎಡಗಾಲಿಗೆ ಗುಂಡೆಟ್ಟು ಹೊಡೆದು ಬಂಧಿಸಿದ್ದಾರೆ.
ಗಾಯಾಳು ಕಳ್ಳನನ್ನು ಸ್ಥಳೀಯ ಅಥಣಿ ಸಮುದಾಯ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬೆಳಗಾವಿ ಎಸ್ ಪಿ ಭೀಮಶಂಕರ್ ಗುಳೆದ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಅಪಹರಣಕ್ಕೆ ಕಾರಣ ಏನು?
ತಂದೆಯ ಹಣಕಾಸಿನ ವ್ಯವಹಾರದ ಕಾರಣ ಮಕ್ಕಳನ್ನ ಕಿಡ್ನ್ಯಾಪ್ ಮಾಡಲಾಗಿತ್ತು.
ಹಣ ವಾಪಸ್ಸ ನೀಡದೇ ಇರುವದಕ್ಕೆ ಕಿಡ್ನ್ಯಾಪ್ ಮಾಡಿಸಲಾಗಿದೆ. ಈ ಮೂವರು ಸುಪಾರಿ ಪಡೆದು ಕಿಡ್ನ್ಯಾಪ್ ಮಾಡಿದ್ದು ಇನ್ನೂ ಮೂಲ ಆರೋಪಿಗಳ ಹೆಸರು ತನಿಖೆಯಿಂದ ಹೊರಬರಬೇಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಕಾರ್ಯಾಚರಣೆಯಲ್ಲಿ ಜಮೀರ್ ಡಾಂಗೆ ಹಾಗೂ ರಮೇಶ್ ಹಾದಿಮನಿ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಾಳುಗಳನ್ನು ಅಥಣಿ ಸಮುದಾಯ ಆಸ್ಪತ್ರೆಗೆ ದಾಖಲ ಮಾಡಿ ಅವರಿಗೂ ಕೂಡ ಚಿಕಿತ್ಸೆ ಮುಂದುವರೆದಿದೆ.
ಇದನ್ನೂ ಓದಿ:-Karwar | ಸತೀಶ್ ಶೈಲ್ ಪರಪ್ಪನ ಅಹ್ರಹಾರ ಜೈಲಿಗೆ ? ಏನಾಗಿತ್ತು ಏನು ಪ್ರಕರಣ ವಿವರ ಇಲ್ಲಿದೆ.
ಇಬ್ಬರು ಮಕ್ಕಳು ಸುರಕ್ಷಿತವಾಗಿ ತಾಯಿ ಮಡಿಲಿಗೆ ಅಥಣಿ ಪೊಲೀಸರು ಸೇರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
- Karwar | ಸತೀಶ್ ಶೈಲ್ ಪರಪ್ಪನ ಅಹ್ರಹಾರ ಜೈಲಿಗೆ ? ಏನಾಗಿತ್ತು ಏನು ಪ್ರಕರಣ ವಿವರ ಇಲ್ಲಿದೆ. appeared first on ಕನ್ನಡವಾಣಿ.ನ್ಯೂಸ್.">Karwar | ಸತೀಶ್ ಶೈಲ್ ಪರಪ್ಪನ ಅಹ್ರಹಾರ ಜೈಲಿಗೆ ? ಏನಾಗಿತ್ತು ಏನು ಪ್ರಕರಣ ವಿವರ ಇಲ್ಲಿದೆ.
- Karwar |ಅದಿರು ನಾಪತ್ತೆ ಪ್ರಕರಣ ಶಾಸಕ ಸತೀಶ್ ಸೈಲ್ ದೋಷಿ appeared first on ಕನ್ನಡವಾಣಿ.ನ್ಯೂಸ್.">Karwar |ಅದಿರು ನಾಪತ್ತೆ ಪ್ರಕರಣ ಶಾಸಕ ಸತೀಶ್ ಸೈಲ್ ದೋಷಿ
- Arecanut price: ಅಡಿಕೆ ಧಾರಣೆ 23 october 2024 appeared first on ಕನ್ನಡವಾಣಿ.ನ್ಯೂಸ್.">Arecanut price: ಅಡಿಕೆ ಧಾರಣೆ 23 october 2024
- Karwar | ಅಕ್ಟೋಬರ್ 26 ಉದ್ಯೋಗ ಮೇಳ ಕೆಲಸ ಹುಡುಕುವವರು ವಿವರ ನೋಡಿ. appeared first on ಕನ್ನಡವಾಣಿ.ನ್ಯೂಸ್.">Karwar | ಅಕ್ಟೋಬರ್ 26 ಉದ್ಯೋಗ ಮೇಳ ಕೆಲಸ ಹುಡುಕುವವರು ವಿವರ ನೋಡಿ.
- RAIN NEWS :ಬೇಡ್ತಿ ಹಳ್ಳದಲ್ಲಿ ಕೊಚ್ಚಿಹೋದ ಕಾರು ಚಾಲಕ ! ಅಗ್ನಿ ಶಾಮಕ ದಳದಿಂದ ರಕ್ಷಣೆ appeared first on ಕನ್ನಡವಾಣಿ.ನ್ಯೂಸ್.">RAIN NEWS :ಬೇಡ್ತಿ ಹಳ್ಳದಲ್ಲಿ ಕೊಚ್ಚಿಹೋದ ಕಾರು ಚಾಲಕ ! ಅಗ್ನಿ ಶಾಮಕ ದಳದಿಂದ ರಕ್ಷಣೆ