Actor Darshan ಕೋಪ ಬಿಡಬೇಕು,ಒಳ್ಳೆದಾರಿಯಲ್ಲಿ ಇದ್ರೆ ಅದು ಚರಿತ್ರೆ ,ಕೆಟ್ಟ ದಾರಿ ಯಲ್ಲಿ ಇದ್ರೆ ರಕ್ತ ಚರಿತ್ರೆ- ಓಂ ಸಾಯಿಪ್ರಕಾಶ್
Karwar news 04 November 2024 :- ನಟ ದರ್ಶನ್ (Actor Darshan) ಕೋಪ ಬಿಡಬೇಕು,ಒಳ್ಳೆ ದಾರಿಯಲಿ ಇದ್ರೆ ಅದು ಚರಿತ್ರೆಯಾಗುತ್ತೆ ,ಕೆಟ್ಟ ದಾರಿಯಲ್ಲಿ ಇದ್ರೆ ಅದೂ ಕೂಡ ಚರಿತ್ರೆ ಆಗುತ್ತೆ, ರಕ್ತ ಚರಿತೆ ಆಗುತ್ತದೆ ಎಂದು ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್(om sai prakash ) ನಟ ದರ್ಶನ್ ಗೆ ಕಿವಿಮಾತು ಹೇಳಿದರು.
ಇಂದು ಕಾರವಾರದ ಸಾಯಿ ಮಂದಿರದಲ್ಲಿ ವಾಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಜೀವನದಲ್ಲಿ ಕೋಪ,ಪ್ರತಿಕಾರ ಗಳು ಶತ್ರುಗಳು, ಒಳ್ಳೇ ಸ್ಥಾನದಲ್ಲಿ ಇದ್ದಾಗ ಮಾತು,ನಡತೆ ಧರ್ಮವಾಗಿರಬೇಕು.
ಈಗಿನ ಕಲಾವಿದರಲ್ಲಿ ಕೇಳುವುದೊಂದೆ ಅಣ್ಣವರ ಪರ್ಸನಲ್ ಗುಣವನ್ನು ಫಾಲೋ ಮಾಡಿ,ನಿಮ್ಮ ಹಿಂದೆ ಕೋಟಿ ಅಭಿಮಾನಿಗಳಿರುತ್ತಾರೆ
ಸಮಾಜ ಸೇವೆ ಮಾಡಿ,ಎಲ್ಲರಿಗೂ ಒಳ್ಳೆ ಬುದ್ದಿ ಕೊಡಲಿ ಒಳ್ಳೆ ಮನಸ್ಸು ಕೊಡಲಿ ಎಂದು ಕೇಳಿಕೊಳ್ಳುತ್ತೇನೆ .ಗುಬ್ಬಿಮೇಲೆ ಬ್ರಹ್ಮಾಸ್ತ್ರ ಎನ್ನುವುದನ್ನ ಸೇವೆ ಮಾಡಲು ಬಳಸಬೇಕು.
ಇದನ್ನೂ ಓದಿ:-Actor Darshan Case | 3991 ಪುಟದ ಚಾರ್ಜ್‌ಶೀಟ್- ಏನಿದೆ ವಿವರ ನೋಡಿ
ಇನ್ನೊಬ್ಬರಿಗೆ ತೊಂದರೆ ಕೊಡಲು ಉಪಯೋಗಿಸಬಾರದು.ದರ್ಶನ್ ಬೇಕು ಅಂತ ಮಾಡಲಿಲ್ಲ ,ಕೋಪ ಏನು ಮಾಡುತ್ತೆ ಅಂತ ಗೊತ್ತಾಗಲ್ಲ.ಆತನಿಗೆ ಕೋಪ, ಯಮೋಷನ್ ಜಾಸ್ತಿ. ಆತ ಗೊತ್ತಿಲ್ಲದೇ ಮಾಡಿದ ತಪ್ಪು,ಸಣ್ಣ ತಪ್ಪಿನಿಂದ ಏನು ಅನುಭವಿಸಿದನೋ ಅದನ್ನು ನೋಡಿ ನಾವು ಕಲಿಯಬೇಕು.
ದರ್ಶನ್ ಕೆಟ್ಟವನಲ್ಲ, ತಪ್ಪು ತಿದ್ದಿಕೊಳ್ಳುತಿದ್ದಾನೆ ಎಂದರು ಇನ್ನು ಕನ್ನಡ ಸಿನಿಮಾಗಳು ನಷ್ಟದ ಹಾದಿಗೆ ತಲುಪುತಿದ್ದು ,ಬೆರಳೆಣಿಕೆ ಕಲಾವಿದರು ಪಾನ್ ಇಂಡಿಯಾ ಮಾಯಯೆಲ್ಲಿ ಬಿದ್ದಿದ್ದಾರೆ ,ಯಾರಿಗೂ ಕಮಿಟ್ ಮೆಂಟ್ ಇಲ್ಲ.
ಇದನ್ನೂ ಓದಿ:-Sandalwood : ಸಿನಿಮಾ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ
ಈಗಿನವರಿಗೆ ಪೇಷನ್ಸ್ ಇಲ್ಲ
ಕಷ್ಟ ಪಡುವ ನಟರಿಲ್ಲ ,ಬೈ ಲಕ್ ಮೇಲೆ ಬರಬೇಕು
ಈಗಿನ ಸಿನಿಮಾಕ್ಕೆ ಬ್ರಾಂಡ್ ಇಲ್ಲ ಏನು ಇಟ್ಟುಕೊಂಡು ಸಿನಿಮಾ ಮಾಡುತ್ತಾರೆ ಎಂಬ ಗುರಿ ಇಲ್ಲ.ಪಾನ್ ಇಂಡಿಯಾ ಸಿನಿಮಾ ಮಾಡಬೇಕು ಎಂಬುದು ಬಿಟ್ಟರೇ ಒಳ್ಳೆ ಸಿನಿಮಾ ಮಾಡಬೇಕು ಎಂಬ ಆಸೆಇಲ್ಲ.
ಈಗ ಬರುವ ಸಿನಿಮಾಗಳಿಗೆ ಹೆಸರು ಗೊತ್ತಿಲ್ಲ, ಲಿರಿಕ್ಸ್ ಗೊತ್ತಿಲ್ಲ,ಕೀಬೋರ್ಡ ಹಿಡಿದವರೆಲ್ಲಾ ಸಂಗೀತ ನಿರ್ದೇಶಕರಾಗಿದ್ದಾರೆ.
ಟ್ಯೂನ್ ಗಿಂತ,ಲಿರಿಕ್ಸ್ ಗಿಂತ ಮುಂಚೆ ಸೌಂಡ್ ಕೇಳುತ್ತೆ .ಈಗ ಬರಿ ಸೌಂಡ್ ಕೇಳುತ್ತಿದೆ ಲಿರಿಕ್ಸ್ ಇಲ್ಲ ,ಟ್ಯಾಲೆಂಟ್ ಗಿಂತ ಆಸೆ ಜಾಸ್ತಿ ಆಗುತ್ತಿದೆ.ಎಂದರು.
ಇದನ್ನೂ ಓದಿ:-ದರ್ಶನ್ ದರ್ಶನ ಮಾಡಿಸಲು ಹೋದ ಪವರ್ ಟಿವಿ ಕ್ಯಾಮರಾ ಮನ್ JUST ಮಿಸ್ !
ಇನ್ನು ನಿರ್ದೇಶಕ ಗುರುಪ್ರಸಾದ್ ಆತ್ಮ ಹತ್ಯೆ ಕುರಿತು ಮಾತನಾಡಿದ ಅವರು ಚಟ ಅನ್ನೋದು ಇವತ್ತಲ್ಲ ನಾಳೆ ಮುಳಗಿಸುತ್ತದೆ.ಗುರು ಅವರು ಕುಡಿಯುವುದರಿಂದ ಲಾಸಾಗಿಲ್ಲ.ಸಾಲ ಮಾಡಿದರೇ ತೀರಿಸೋ ಶಕ್ತಿ ಇದ್ರೆ ಮಾಡಬೇಕು.ನಿರ್ಮಾಪಕ ರಿಗೆ ಸಿನಿಮಾ ರಿಲೀಸ್ ಆದಾಗ ಬರುವುದೇ ಪೇಮೆಂಟ್.
ಇದನ್ನೂ ಓದಿ:-Karwar| SRS ಬಸ್ ನಲ್ಲಿ ಲಕ್ಷಾಂತರ ಮೌಲ್ಯದ ಗೋವಾ ಮದ್ಯ ಸಾಗಾಟ ಚಾಲಕ ವಶಕ್ಕೆ
ಸರಸ್ವತಿ ಪುತ್ರರಿಗೆ ಗ್ರಹಣ ದೋಷನೋ ಇದೆ.ಪ್ರಡ್ಯೂಸರೇ ಎಲ್ಲಾ ತಲೆಯಮೇಲೆ ಹಾಕಿಕೊಳ್ಳುವ ಪರಿಸ್ತಿತಿ ಇದೆ ಎಂದು ಇಂದಿನ ಇಂಡಸ್ಟ್ರಿಯ ಪರಿಸ್ಥಿತಿ ಬಗ್ಗೆ ವಿಷಾದ ವ್ಯಕ್ತಪಡಿಸಿದರು.