Uttara kannda -ಫಟಾ ಫಟ್ ಸುದ್ದಿ 24 November 2024
Uttarakannda 24 November 2024: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದ ಯಾವೆಲ್ಲಾ ಸುದ್ದಿಗಳಿವೆ. ಒಂದೇ ಲಿಂಕ್ ನಲ್ಲಿ ಜಿಲ್ಲೆಯ ಪ್ರಮುಖ ಸುದ್ದಿಗಳು ಈ ಕೆಳಗಿನಂತಿವೆ.
Ankola|ನಿಯಂತ್ರಣ ತಪ್ಪಿದ ಕಾರು -ಸಾವಾರ ಸಾವು ಓರ್ವ ಗಂಭೀರ.
ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವು ಕಂಡು ಇನ್ನೋರ್ವ ವ್ಯಕ್ತಿ ಗಂಭೀರ ಗಾಯಗೊಂಡ ಘಟನೆ ಉತ್ತರಕನ್ನಡ (Uttara kannda) ಜಿಲ್ಲೆಯ ಅಂಕೋಲಾ (ankola)ತಾಲೂಕಿನ ಕೊಡಸಣಿ ಕ್ರಾಸ್ ಎನ್‌ಎಚ್-66ರಲ್ಲಿ ನಡೆದಿದೆ.
ಕಾರು ಚಲಾಯಿಸುತ್ತಿದ್ದ ಹೊನ್ನಾವರದ ಹರೀಶ್ ನಾಯ್ಕ್ (30) ಸ್ಥಳದಲ್ಲೇ ಸಾವು ಕಂಡವನಾಗಿದ್ದು ಚಾಲಕನೊಂದಿಗೆ ಪಯಣಿಸುತಿದ್ದ ಹೊನ್ನಾವರದ ದಿನೇಶ್ ಆಚಾರ್ಯ (45) ಗಂಭೀರ ಗಾಯಗೊಂಡವನಾಗಿದ್ದಾನೆ.
ಟಾಟಾ ನ್ಯಾನೋ ಕಾರಿನಲ್ಲಿ ಹೊನ್ನಾವರದಿಂದ (Honnavara) ಅಂಕೋಲಾದತ್ತ ಚಲಿಸುತ್ತಿದ್ದ ಹರೀಶ್ ಹಾಗೂ ದಿನೇಶ್ ಅತೀ ವೇಗದಲ್ಲಿದ್ದ ಕಾರಣ ಕೊಡಸಣಿ ಕ್ರಾಸ್‌ನಲ್ಲಿ ನಿಯಂತ್ರಣ ತಪ್ಪಿ ಏಕಾಏಕಿ ಪಲ್ಟಿಯಾಗಿ ಘಟನೆ ನಡೆದಿದೆ.
ಗಂಭೀರ ಗಾಯಗೊಂಡ ದಿನೇಶ್ ಆಚಾರ್ಯ ಎಂಬವರನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ,ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Actor ಶಿವರಾಜ್ ಕುಮಾರ್ ಶಿರಸಿಯಲ್ಲಿ ಸಿನಿಮಾ ವೀಕ್ಷಣೆ.
ಶಿರಸಿಯ ನಟರಾಜ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆಗೆ ಭೈರತಿ ರಣಗಲ್ ಚಿತ್ರವನ್ನು ಕರುನಾಡ ಚಕ್ರವರ್ತಿ, ನಟ ಡಾ.ಶಿವರಾಜಕುಮಾರ (Actor shivarajkumara) ವೀಕ್ಷಿಸಿದರು.
ಚಿತ್ರ ಮಂದಿರದ ಎದುರು ನೆರೆದಿದ್ದ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಹೂವಿಸುರಿಮಳೆ ಗೈದು ಶಿವರಾಜಕುಮಾರ ಅವರನ್ನು ಸ್ವಾಗತಿಸಿದರು.
ಬಳಿಕ ತಮ್ಮದೇ ಸೂಪರ್ ಹಿಟ್ ಚಿತ್ರವನ್ನು ಶಿವರಾಜಕುಮಾರ್, ಸಚಿವ ಮಧು ಬಂಗಾರಪ್ಪ, ಶಾಸಕ ಭೀಮಣ್ಣ ನಾಯ್ಕ, ಗೀತಾ ಶಿವರಾಜಕುಮಾರ್, ಅಶ್ವಿನ್ ಭೀಮಣ್ಣ ಇತರರೊಂದಿಗೆ ಸೇರಿ ವೀಕ್ಷಣೆ ಮಾಡಿದರು.
ನೆಚ್ಚಿನ ನಟನನ್ನು ನೋಡಲು ಸಾಕಷ್ಟು ನೂಕುನುಗ್ಗಲು ಉಂಟಾಗಿತ್ತು. ಬಾಲ್ಕನಿಯಲ್ಲಿ ಕುಳಿತು ಶಿವಣ್ಣ ಚಿತ್ರ ವೀಕ್ಷಿಸಿದರು.
ಧಾರವಾಡದಲ್ಲಿ ನಡೆದ 41ನೇ ರಾಜ್ಯಮಟ್ಟದ ಟೇಕ್ವಾಂಡೋ ಸಬ್ ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ ಅಂಕೋಲಾ ವಿದ್ಯಾರ್ಥಿಗಳ ಸಾಧನೆ:
ಕರ್ನಾಟಕ ಟೇಕ್ವಾಂಡೋ ಸಂಸ್ಥೆ, ಕ್ರೀಡಾ ಭಾರತಿ ಧಾರವಾಡ, ಧಾರವಾಡ ಜಿಲ್ಲಾ ಒಲಿಂಪಿಕ್ಸ್ ಸಂಸ್ಥೆ ಹಾಗೂ ಧಾರವಾಡ ಜಿಲ್ಲಾ ಟೇಕ್ವಾಂಡೋ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಉತ್ತರ ಕನ್ನಡದ ಜಿಲ್ಲೆಯನ್ನು ಪ್ರತಿನಿಧಿಸಿದ ಅಂಕೋಲಾದ ವಿದ್ಯಾರ್ಥಿಗಳು 5 ಕಂಚಿನ ಪದಕವನ್ನು ಗೆಲ್ಲುವುದರ ಮೂಲಕ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ.
27 ಕೆ.ಜಿಗಿಂತ ಕಡಿಮೆ ತೂಕದ ವಿಭಾಗದಲ್ಲಿ ಕುಮಾರ. ಉದಿತ್ ಜನಾರ್ಧನ್ ರೆಡ್ಡಿ ಕಂಚಿನ ಪದಕ.
35 ಕೆ.ಜಿಗಿಂತ ಕಡಿಮೆ ತೂಕದ ವಿಭಾಗದಲ್ಲಿ ಕುಮಾರ. ಚಿರಂತ್ ಸುರೇಂದ್ರ ಅಲಗೇರಿಕರ್ ಕಂಚಿನ ಪದಕ,
41 ಕೆ.ಜಿಗಿಂತ ಕಡಿಮೆ ತೂಕದ ವಿಭಾಗದಲ್ಲಿ ಕುಮಾರ. ಅವನೇಶ್ ಮನೋಜ್ ಗುರವ್ ಕಂಚಿನ ಪದಕ,
44 ಕೆ.ಜಿಗಿಂತ ಕಡಿಮೆ ತೂಕದ ವಿಭಾಗದಲ್ಲಿ ಕುಮಾರ. ಗ್ರೀತಿಕ್ ಕಂಚಿನ ಪದಕ.
ಸಬ್ ಜೂನಿಯರ್ ಬಾಲಕೀಯರ ವಿಭಾಗ 47 ಕೆಜಿಗಿಂತ ಹೆಚ್ಚಿನ ವಿಭಾಗದಲ್ಲಿ ಕುಮಾರಿ. ಸೃಷ್ಟಿ ಮಧುಕರ್ ಗೌಡ ಕಂಚಿನ ಪದಕ ಪಡೆಯುವುದರ ಮೂಲಕ ಉತ್ತರ ಕನ್ನಡ ಜಿಲ್ಲೆಗೆ ಕೀರ್ತಿಯನ್ನ ಹೆಚ್ಚಿಸಿರುತ್ತಾರೆ.
ಇವರಿಗೆ ಉತ್ತರ ಕನ್ನಡ ಜಿಲ್ಲಾ ಟೇಕ್ವಾಂಡೋ ಸಂಸ್ಥೆ (ರಿ.) ಕಾರ್ಯದರ್ಶಿಯಾದ ಇಂಬರಾಜ್ ನಾಡರ್ ಹಾಗೂ ಸಹ ತರಬೇತುದಾರರಾದ ಸುಹಾಸ್ ಗೌಡ ತರಬೇತಿಯನ್ನು ನೀಡುತ್ತಾರೆ.
Honnavara: ಸಮುದ್ರದಲ್ಲಿ ಮುಳುಗುತಿದ್ದ ಮೂವರ ರಕ್ಷಣೆ.
ಮೋಜು ಮಸ್ತಿಗೆಂದು ಹೊನ್ನಾವರದ ಇಕೋ ಬೀಚ್ ಗೆ ಬಂದು, ಸಮುದ್ರ ಪಾಲಾಗುತ್ತಿದ್ದ, ಹುಬ್ಬಳ್ಳಿ ಮೂಲದ ಮೂವರು ಯುವತಿಯರನ್ನು ಲೈಫ್ ಗಾರ್ಡ್ ಸಿಬ್ಬಂದಿ ಬಚಾವ್ ಮಾಡಿದ ಘಟನೆ ನಡೆದಿದೆ.
ಹುಬ್ಬಳ್ಳಿಯಿಂದ ಐವರು ಸ್ನೇಹಿತರೊಡನೆ, ಹುಬ್ಬಳ್ಳಿಯ ಸ್ವಾತಿ, ಚೇತಾಲಿ, ಸೃಷ್ಟಿ, ಸಮುದ್ರದಲ್ಲಿ ಇಳಿದಿದ್ದರು. ಈ ಸಂದರ್ಭದಲ್ಲಿ ದಡಕ್ಕೆ ಬಂದು ಸೇರಲು ಕಷ್ಟಪಡುತ್ತಿದ್ದರು .
ಅಲ್ಲಿಯೇ ಇದ್ದ ಲೈಫ್ ಗಾರ್ಡ್ ಸಿಬ್ಬಂದಿ, ಮೂವರು ಯುವತಿಯರನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ.
Feed: invalid feed URL