For the best experience, open
https://m.kannadavani.news
on your mobile browser.
Advertisement

Uttara kannda : ಇಂದು ಏನು ಸುದ್ದಿ ? ವಿವರ ನೋಡಿ

ದಾಂಡೇಲಿ : ಬೆಂಗಳೂರು ಕಡೆಯಿಂದ ದಾಂಡೇಲಿಗೆ ಬರುತ್ತಿದ್ದ ಪ್ರವಾಸಿಗರ ಕಾರೊಂದು ದಾಂಡೇಲಿ - ಅಂಬಿಕಾನಗರ ರಸ್ತೆಯ ಬಡಕಾನಶಿರಡಾದ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಕಾರಿನ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾದ ಘಟನೆ ಇಂದು ಶನಿವಾರ ಬೆಳಗ್ಗೆ 7.15 ಗಂಟೆ ಸುಮಾರಿಗೆ ನಡೆದಿದೆ.
12:01 PM Apr 05, 2025 IST | ಶುಭಸಾಗರ್
uttara kannda   ಇಂದು ಏನು ಸುದ್ದಿ   ವಿವರ ನೋಡಿ

Uttara kannda : ಇಂದು ಏನು ಸುದ್ದಿ ? ವಿವರ ನೋಡಿ

Advertisement

ದಾಂಡೇಲಿ -ಅಂಬಿಕಾ ನಗರ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದ ಕಾರು

ದಾಂಡೇಲಿ : ಬೆಂಗಳೂರು ಕಡೆಯಿಂದ ದಾಂಡೇಲಿಗೆ ಬರುತ್ತಿದ್ದ ಪ್ರವಾಸಿಗರ ಕಾರೊಂದು ದಾಂಡೇಲಿ - ಅಂಬಿಕಾನಗರ ರಸ್ತೆಯ ಬಡಕಾನಶಿರಡಾದ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಕಾರಿನ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾದ ಘಟನೆ ಇಂದು ಶನಿವಾರ ಬೆಳಗ್ಗೆ 7.15 ಗಂಟೆ ಸುಮಾರಿಗೆ ನಡೆದಿದೆ.

ಕೆಎ :04 ಎಡಿ: 9275 ಸಂಖ್ಯೆಯ ಕಾರೊಂದು ಬೆಂಗಳೂರು ಕಡೆಯಿಂದ ದಾಂಡೇಲಿಗೆ ಬರುತ್ತಿದ್ದಂತಹ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಡಕಾನಶಿರಡಾದ ಹತ್ತಿರ ರಸ್ತೆಯ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಪರಿಣಾಮವಾಗಿ ಕಾರಿನ ಮುಂಭಾಗ ಸಂಪೂರ್ಣ‌ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ:-Kumta :ಕರ್ತವ್ಯದಲ್ಲಿ ಮದ್ಯ ಸೇವಿಸಿ  ಹಿರಿಯ ಅಧಿಕಾರಿ ಜೊತೆ ಅನುಚಿತ ವರ್ತನೆ -ಸೇವೆಯಿಂದ ಅಮಾನತು.

Ankola: ಶ್ರೀದೇವಿ ಕೆರೆಮನೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಭಾನುವಾರ.

ಅಂಕೋಲಾದ ಕರ್ನಾಟಕ ಸಂಘ ದಿಂದ ಲೇಖಕಿ ಶ್ರೀದೇವಿ ಕೆರೆಮನೆಯವರು ಬರೆದ ಎಲ್ಲೆಗಳ ಮೀರಿ ಹಾಗೂ ಕಡಲು ಕಾನನದ ನಡುವೆ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಭಾನುವಾರ ಸಂಜೆ 4 ಘಂಟೆಗೆ  ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದು, ಪುಸ್ತಕ ಬಿಡುಗಡೆಯನ್ನು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಡಾ.ಎಂ.ಮಂಜುನಾಥ್ ಬಮ್ಮನಕಟ್ಟಿ ರವರು ನೆರವೇರಿಸಲಿದ್ದಾರೆ.

Bhatkal : ಮದ್ಯ ಮಾರಾಟ ಸಾಗಾಟ ನಿಷೇಧ

ಭಟ್ಕಳ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀ ಚನ್ನಪಟ್ಟಣ ಮಾರುತಿ ದೇವರ ಜಾತ್ರಾ ಮಹೋತ್ಸವ ಏ. 6 ರಂದು ನಡೆಯಲಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡಲು ಮದ್ಯ ಮಾರಾಟಕ್ಕೆ ನಿಷೇಧ ವಿಧಿಸಲಾಗಿದೆ.

ಇದನ್ನೂ ಓದಿ:-Karnataka :ಪಕ್ಕದ ಊರಿಗೆ ಪಾತ್ರೆ ಕೊಟ್ಟವನಿಗೆ ಊರಿನವರ ಬಹಿಷ್ಕಾರ, 6000 ದಂಡ!

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಏ. 5 ರಂದು ಬೆಳಗ್ಗೆ 6 ಗಂಟೆಯಿಂದ ಏ. 6 ರ ಮಧ್ಯರಾತ್ರಿ 12 ಗಂಟೆಯವರೆಗೆ ಎಲ್ಲಾ ರೀತಿಯ ಬಾರ್, ವೈನ್ ಶಾಪ್ ಹಾಗೂ ಮದ್ಯದ ಅಂಗಡಿಗಳಲ್ಲಿ ಎಲ್ಲಾ ರೀತಿಯ ಮದ್ಯ ಮಾರಾಟ ಹಾಗೂ ಸಾಗಾಟವನ್ನು ನಿಷೇಧಿಸಿ ಡಿಸಿ ಲಕ್ಷ್ಮೀಪ್ರಿಯಾ ಆದೇಶಿಸಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ