Karwar :ಸಚಿವ ವೈದ್ಯರಿಂದ ಬಾಗಿಲು ಮುಚ್ಚಿದ ಸರಣಿ ಅಧಿಕಾರಿಗಳ ಸಭೆ ಗುಟ್ಟೇನು
Karwar :ಸಚಿವ ವೈದ್ಯರಿಂದ ಬಾಗಿಲು ಮುಚ್ಚಿದ ಸರಣಿ ಅಧಿಕಾರಿಗಳ ಸಭೆ ಗುಟ್ಟೇನು?
ಕಾರವಾರ : ಮೀನುಗಾರಿಕೆ ಮತ್ತು ಬಂದರು, ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಅವರು ದಿಢೀರ್ ಆಗಿ ಸತತ ಎರಡು ದಿನ ಬಾಗಿಲು ಹಾಕಿಕೊಂಡು ವಿವಿಧ ಇಲಾಖೆಗಳ ಎಂಜಿನಿಯರ್ ವಿಭಾಗಗಳ ಸರಣಿ ಸಭೆ ನಡೆಸಿದ್ದು, ಹಲವು ರೀತಿಯ ಚರ್ಚೆಗೆ ಕಾರಣವಾಗಿದೆ.
ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ, ಕಾಮಗಾರಿಗಳು ಅರ್ಧಕ್ಕೆ ನಿಂತಿವೆ, ಪ್ರವಾಸೋದ್ಯಮ ಆಡಳಿತದಲ್ಲಿ ಹಸ್ತಕ್ಷೇಪ ನಡೆಯುತ್ತಿದೆ, ಹೆಚ್ಚುವರಿ ಜಿಲ್ಲಾಧಿಕಾರಿ ಕರ್ತವ್ಯಕ್ಕೆ ಹಾಜರಾಗದಂತೆ ತಡೆದಿದ್ದಾರೆ ಎನ್ನುವ ವಿಪಕ್ಷಗಳ ಆರೋಪದ ನಡುವೆ ಈ ರೀತಿಯ ಸಭೆ ನಡೆದಿದೆ.
ಇದನ್ನೂ ಓದಿ:-Uttra kannda:ಮಂಕಾಳು ವೈದ್ಯ ಪ್ರತಿಷ್ಟೆ ಖಾಲಿ ಉಳಿದ ಅಪರ ಜಿಲ್ಲಾಧಿಕಾರಿ ಕುರ್ಚಿ!
ಹಾಗಾಗಿ ಸಭೆಯ ಬಗ್ಗೆ ಹಲವು ಊಹಾಪೋಹಗಳು ಹುಟ್ಟಿಕೊಂಡಿವೆ. ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದ ಸಭೆಯಲ್ಲಿ ಶಾಸಕರು ಗೈರು ಹಾಜರಾಗಿರುವುದಂತೂ ರಾಜಕೀಯವಾಗಿ ತೀವ್ರ ಕುತೂಹಲ ಮೂಡಿಸಿದೆ.
ಎರಡು ದಿನ ನಡೆದ ಸಭೆಯಲ್ಲಿ ಒಂದು ಇಲಾಖೆ ವಿಷಯ ಇನ್ನೊಂದು ಇಲಾಖೆಗೆ ಗೊತ್ತಾಗದ ಹಾಗೆ, ಸಭೆಯ ಯಾವುದೇ ವಿಷಯಗಳು ಮಾಧ್ಯಮದವರನ್ನು ತಲುಪದ ರೀತಿಯಲ್ಲಿ ಆಯೋಜಿಸಲಾಗಿದ್ದವು.
ಸಚಿವರು ಕೂಡ ಪ್ರವಾಸ ವೇಳಾಪಟ್ಟಿ ಬಿಡುಗಡೆ ಮಾಡದೆ ಸದ್ದಿಲ್ಲದೆ ಕಾರವಾರಕ್ಕೆ ಬಂದು ಸಭೆ ನಡೆಸಿದ್ದಾರೆ.
ಇದನ್ನೂ ಓದಿ:-Bjp ನಾಯಕರ ಮಾತಿನಿಂದ CM ಪತ್ನಿಗೆ ಕಿರಿಕಿರಿ ಕೈಮುಗಿದು ಕೇಳ್ತೀನಿ ಎಂದ ಮಂಕಾಳು!
ಶುಕ್ರವಾರ ಒಂದೇ ದಿನ 10 ಪ್ರಮುಖ ಇಲಾಖೆಗಳ ಎಂಜಿನಿಯರ್‌ಗಳೊಂದಿಗೆ ಪ್ರತ್ಯೇಕವಾಗಿ ಸಭೆ ಮಾಡಿದ್ದಾರೆ.
ಶನಿವಾರ ಇಡೀ ದಿನ ಪ್ರವಾಸೋದ್ಯಮ ( tourism) ಮತ್ತು ಗಣಿ ಇಲಾಖೆಗಳ ಸಭೆ ನಡೆದಿದೆ. ಈ ಸಭೆಗೆ ಮಾತ್ರ ಶಾಸಕ ಸತೀಶ ಸೈಲ್ ಭಾಗಿಯಾಗಿದ್ದರು.
ವಾಸ್ತವದಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಸಚಿವ ವೈದ್ಯ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆ ನಡೆದಿತ್ತು.
ನಂತರ ಉಸ್ತುವಾರಿ ಕಾರ್ಯದರ್ಶಿ ರಿತೇಶ ಸಿಂಗ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ನಡೆದಿದೆ. ಈ ಎರಡೂ ಸಭೆಗಳಲ್ಲಿ ಕಂದಾಯ ಇಲಾಖೆ ಬಿಟ್ಟು ಎಲ್ಲ ಇಲಾಖೆಗಳ ಕಾಮಗಾರಿಗಳ ಬಗ್ಗೆ, ಪ್ರಗತಿ ಚರ್ಚೆ ನಡೆದಿದೆ.
ನಂತರ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಸಭೆಯಾಗಿದೆ. ಎಲ್ಲವೂ ಇದೇ ತಿಂಗಳಲ್ಲಿ ನಡೆದಿದ್ದು, ಎಲ್ಲ ಮುಖ್ಯ ವಿಷಯಗಳ ಬಗ್ಗೆಯೂ ಚರ್ಚೆಯಾಗಿವೆ.
ಇದನ್ನೂ ಓದಿ:-MUDA ಪ್ರಕರಣವನ್ನು ಪರೇಶ್ ಮೇಸ್ತಾ ಹತ್ಯೆ ಪ್ರಕರಣಕ್ಕೆ ಹೋಲಿಸಿದ ಸಚಿವ ವೈದ್ಯ! ಏನಂದ್ರು ನೋಡಿ.
ಅಂಥದ್ದರಲ್ಲಿ ಬೆಂಗಳೂರಿಂದ ಬರುತ್ತಿದ್ದಂತೆಯೇ ಮತ್ತೆ ಇಲಾಖೆಗಳ ಎಂಜಿನಿಯರ್‌ಗಳನ್ನು ಪ್ರತ್ಯೇಕವಾಗಿ ಕರೆದು ಒಂದೊಂದು ತಾಸು ಸಭೆ ಮಾಡಿದ್ದಾರೆ.
ಅಧಿಕಾರಿಗಳಿಗೆ ಸಭೆಗೆ ಆಹ್ವಾನಿಸಿ ನೋಟಿಸ್ ಕೊಟ್ಟಿದ್ದು ಕೂಡ ಎರಡು ದಿನಗಳ ಹಿಂದೆ. ಸಭೆಗೆ ಮಾಧ್ಯಮದವರಿಗೂ ಅವಕಾಶ ಕೊಟ್ಟಿಲ್ಲ. ಜಿಲ್ಲೆ ಇತಿಹಾಸದಲ್ಲಿ ಸಚಿವರೊಬ್ಬರು ಮೊದಲ ಬಾರಿಗೆ ಈ ರೀತಿ ಸಭೆ ನಡೆದಿದ್ದಕ್ಕೆ ಆಡಳಿತದಲ್ಲಿ ಎಲ್ಲವೂ ಸರಿಯಾಗಿಲ್ಲ, ಕಾಂಗ್ರೆಸ್ ಪಕ್ಷದೊಳಗೂ ಸಂಬಂಧ ಸರಿಯಾಗಿಲ್ಲ ಎಂಬ ಅನುಮಾನದ ಸಂದೇಶ ಹೊರಬಿದ್ದಿದೆ.
ವಿವಾದದಗಳು
ಸಚಿವರ ಕ್ಷೇತ್ರದ ಮುರುಡೇಶ್ವರ (murudeshwara)ಸ್ಕೂಬಾ ಡೈವಿಂಗ್ ಎರಡು ವರ್ಷಗಳಿಂದ ವಿವಾದದಲ್ಲಿ ಸಿಲುಕಿದೆ. ಪ್ರಕರಣ ಹೈ ಕೋರ್ಟ್ ವರೆಗೂ ಹೋಗಿದೆ. ಕೆಲ ದಿನಗಳ ಹಿಂದೆ ಮುರುಡೇಶ್ವರ ಕಡಲ ತೀರಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಭಟ್ಕಳ ಉಪವಿಭಾಗಾಧಿಕಾರಿ ಆದೇಶ ಮಾಡಿದ್ದರು.
ಅದಕ್ಕೆ ಜಿಲ್ಲಾಧಿಕಾರಿ ಅವರ ಮೌಖಿಕ ಸೂಚನೆ ಎಂದು ಉಲ್ಲೇಖಿಸಿದ್ದರು. ಅದು ಅಧಿಕಾರಿಗಳ ಮಟ್ಟದಲ್ಲೇ ತೀವ್ರ ಚರ್ಚೆಯಾಗಿದೆ.
ಹೆಚ್ಚುವರಿ ಜಿಲ್ಲಾಧಿಕಾರಿ ವರ್ಗವಾಗಿ ಎರಡು ವಾರ ಆಗಿದೆ. ಕರ್ತವ್ಯಕ್ಕೆ ಹಾಜರಾಗಲು ಬಂದಿದ್ದ ಅಧಿಕಾರಿ ಇದ್ದಕ್ಕಿದ್ದಂತೆಯೇ ವಾಪಸ್ ಹೋಗಿದ್ದಾರೆ.
ಆ ಸ್ಥಾನ ಇನ್ನೂ ಖಾಲಿ ಇದೆ. ಗಂಗಾವಳಿ ಸೇರಿ ಅನೇಕ ಸೇತುವೆ ಕಾಮಗಾರಿಗಳು ಎರಡು ವರ್ಷಗಳಿಂದ ಅರ್ಧಕ್ಕೆ ನಿಂತಿವೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಕಂಪನಿ ವಿಚಾರದಲ್ಲಿ ಇದ್ದ ಕೋಪ ಕಡಿಮೆಯಾಗಿದೆ.
ಅಕ್ರಮ ಮರಳು ಲಾರಿ, ಮಣ್ಣು ಲಾರಿ ಹಿಡಿದಿದ್ದಕ್ಕೆ ಅಧಿಕಾರಿಯನ್ನೇ ತರಾಟೆಗೆ ತೆಗೆದುಕೊಂಡ ಘಟನೆಯೂ ಹಿಂದಿನ ಸಭೆಗಳಲ್ಲಿ ನಡೆದಿದ್ದವು.
ಯಾವ ಇಲಾಖೆ ಎಂಜಿನಿಯರ್‌ಗಳ ಸಭೆ?
ಶನಿವಾರ ನಡೆದ ಸಭೆಯಲ್ಲಿ ಪಿಡಬ್ಲುಡಿ, ರಾಜ್ಯ, ರಾಷ್ಟ್ರೀಯ ಹೆದ್ದಾರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಎಲ್ಲ ಎಂಜಿನಿಯರಿಂಗ್ ವಿಭಾಗ, ಹೆಸ್ಕಾಂ, ಕೆಪಿಟಿಸಿಎಲ್, ಕೆಪಿಸಿಎಲ್, ಕೈಗಾ, ನಗರಾಭಿವೃದ್ಧಿ, ವಸತಿ, ಸಣ್ಣ ನೀರಾವರಿ, ಶಿಕ್ಷಣ, ಕೆಎಸ್‌ಆರ್‌ಟಿಸಿ, ಬಂದರು, ಪ್ರವಾಸೋದ್ಯಮ, ಗಣಿ ಇಲಾಖೆ ಇಂಜಿನಿಯರ್ ಸಭೆ ನಡೆದಿದೆ.