ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttra kannda| ಫಟಾ ಫಟ್ ಸುದ್ದಿ 14 October 2024

ಶಿರಸಿ:-ಶಿರಸಿ ಶಹರ ಪೊಲೀಸ್‌ ಠಾಣಾ ವ್ಯಾಪ್ತಿಯ ಭೀಮನಗುಡ್ಡ ಅರಣ್ಯ ಪ್ರದೇಶದ ಹತ್ತಿರ ಅಕ್ರಮವಾಗಿ ಗಾಂಜಾ ಮತ್ತು ಚರಸ್‌ ಮಾರಾಟ ಮಾಡುತ್ತಿದ್ದ
10:48 PM Oct 14, 2024 IST | ಶುಭಸಾಗರ್
Uttra kannda| ಫಟಾ ಫಟ್ ಸುದ್ದಿ 14 October 2024

ಭಟ್ಕಳ:ನರಸಿಂಹಾನಂದ ಸರಸ್ವತಿ ಸ್ವಾಮಿ ನಿಂದನೆ ಪ್ರಕರಣ- ಭಟ್ಕಳದಲ್ಲಿ ಮುಸ್ಲೀಮರ ಪ್ರತಿಭಟನೆ.

Advertisement

ಭಟ್ಕಳ: ಪ್ರವಾದಿ ಮುಹಮ್ಮದ್ ಪೈಗಂಬರರನ್ನು ಅತ್ಯಂತ ಅಸಭ್ಯವಾಗಿ ನಿಂದಿಸಿದ ಮನುಷ್ಯ ವಿರೋಧಿ ಯತಿ ನರಸಿಂಹನಂದಾ ಸರಸ್ವತಿ ಸ್ವಾಮಿಯನ್ನು ದೇಶದ್ರೋಹದ ಪ್ರಕರಣದಡಿ ಕೂಡಲೇ ಬಂಧಿಸುವಂತೆ ಆಗ್ರಹಿಸಿ ಭಟ್ಕಳದ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಮಜ್ಲಿಸೆ ಇಸ್ಲಹ-ವ-ತಂಝೀಮ್ ನೇತೃತ್ವದಲ್ಲಿ ಸೋಮವಾರ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನರು ಸಹಾಯಕ ಆಯುಕ್ತರ ಮೂಲಕ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಮೂರ್ತಿಯವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಭಟ್ಕಳದ ಜಾಮಿಯಾ ಮಸೀದಿ ಖತೀಬ್ ಮತ್ತು ಇಮಾಮ್ ಮೌಲಾನ ಅಬ್ದುಲ್ ಅಲೀಮ್ ಕತೀಬ್ ನದ್ವಿ, ಪ್ರವಾದಿ ಮುಹಮ್ಮದ್ (ಸ)ರ ವಿರೋಧಿ ಕೇವಲ ಮುಸ್ಲಿಮರ ವಿರೋಧಿಯಲ್ಲ. ಆತ ಹಿಂದೂ ವಿರೋಧಿಯೂ ಆಗಿದ್ದಾನೆ. ಪ್ರವಾದಿ ಮುಹಮ್ಮದ್ ಪೈಗಂಬರರ ಕುರಿತು ಎಲ್ಲ ಧರ್ಮದ ಧಾರ್ಮಿಕ ಪುಸ್ತಕಗಳಲ್ಲಿ ಅವರನ್ನು ದೇವನ ಸಂದೇಶವಾಹಕರೆಂದು ಕರೆದಿವೆ. ಇಂತಹ ಪ್ರವಾದಿಯನ್ನು ನಿಂದಿಸುವಾತ ಕೇವಲ ಇಸ್ಲಾಮ್ ವಿರೋಧಿಯಲ್ಲ ಬದಲಾಗಿ ಎಲ್ಲ ಧರ್ಮದ ವಿರೋಧಿಯಾಗಿದ್ದಾನೆ. ಈತ ಹಿಂದೂ ಧರ್ಮದ ವಿರೋಧಿಯೂ ಆಗಿದ್ದಾನೆ. ಈತ ಈ ದೇಶದ ವಿರೋಧಿಯೋ ಆಗಿದ್ದಾನೆ. ನಮ್ಮ ದೇಶ ಎಲ್ಲ ಧರ್ಮ, ಜಾತಿ ಜನಾಂಗವನ್ನು ಸಮಾನವಾಗಿ ಕಾಣುತ್ತದೆ. ಇಂತಹ ದೇಶದಲ್ಲಿರುವ ಈ ವ್ಯಕ್ತಿ ಇಡೀ ದೇಶಕ್ಕೆ ದ್ರೋಹ ಎಸಗುತ್ತಿದ್ದಾನೆ. ಈತನ ಬಂಧನದ ಕುರಿತು ಕೇವಲ ಮುಸ್ಲಿಮರಷ್ಟೇ ಅಲ್ಲ ಹಿಂದೂಗಳು ಕೂಡ ಆಗ್ರಹಿಸಬೇಕು ಎಂದರು.

ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಮಾತನಾಡಿ, ಪ್ರವಾದಿ ಮುಹಮ್ಮದ್ ಪೈಗಂಬರರ ಕುರಿತು ಅಸಭ್ಯವಾಗಿ ಮಾತನಾಡಿದ ಮನುಷ್ಯ ಕಳೆದ ಹತ್ತಾರು ವರ್ಷಗಳಿಂದ ಈ ದೇಶದ ಕಾನೂನು ಉಲ್ಲಂಘನೆ ಮಾಡುತ್ತಿದ್ದಾನೆ. ಪ್ರವಾದಿ ಮುಹಮ್ಮದ್ ರನ್ನು ನಿಂದಿಸುವುದರಿಂದ ಒಂದು ಸಮಾಜಕ್ಕೆ ನಷ್ಟ ಆಗುವುದಿಲ್ಲ ಬದಲಾಗಿ ಈ ದೇಶದ ಭದ್ರತೆ ಮತ್ತು ಅಖಂಡತೆಗೆ ಮಾರಕವಾಗಿದ್ದಾನೆ. ಈತನ ವಿರುದ್ಧ ಮಾದರಿ ಯೋಗ್ಯವಾಗಿ ಇನ್ನೂ ಮುಂದೇ ಯಾವುದೇ ಧಾರ್ಮಿಕ ವ್ಯಕ್ತಿಗಳ ವಿರುದ್ಧ ನಿಂದನೆ ಮಾಡದ ರೀತಿಯಲ್ಲಿ ಕಠಿಣ ಶಿಕ್ಷೆ ನೀಡಬೇಕು ಎಂದು ನಮ್ಮ ಆಗ್ರಹವಾಗಿದೆ ಎಂದರು.

Advertisement

ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮನವಿ ಸಲ್ಲಿಸಿ ಮಾತನಾಡಿ, ಪ್ರವಾದಿ ಮುಹಮ್ಮದ್ ರು ಇಡಿ ಮನುಷ್ಯರ ಮಾರ್ಗದರ್ಶನಕ್ಕಾಗಿ ಬಂದಿದ್ದರು. ಅವರನ್ನು ನಿಂದಿಸುವುದು ಎಂದರೆ ಇಡಿ ಮನುಷ್ಯರನ್ನು ನಿಂದಿಸಿದಂತೆ ಇಂತಹ ವ್ಯಕ್ತಿಯನ್ನು ಬಂಧಿಸದೆ ಇದ್ದರೆ ನಾವು ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಕಾರವಾರ ಚಲೋ ನಡೆಸಬೇಕಾಗುತ್ತದೆ. ಇಂದು ಶಾಂತರೀತಿಯಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ನಾಳೆ ಇದೇ ರೀತಿಯ ಶಾಂತರೀತಿಯಲ್ಲಿ ಎಲ್ಲರೂ ಭಟ್ಕಳ ಬಂದ್ ಕಾರ್ಯಕ್ರದಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದರು.

ತಂಝೀಮ್ ರಾಜಕೀಯ ಸಮಿತಿ ಸಂಚಾಲಕ ಇಮ್ರಾನ್ ಲಂಕಾ ಮನವಿ ಪತ್ರ ಓದಿದರು. ಸಹಾಯಕ ಆಯುಕ್ತೆ ಡಾ. ನಯಾನ ಎಂ. ಮನವಿ ಪತ್ರ ಸ್ವೀಕರಿಸಿ ಮನವಿಯನ್ನು ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ, ಭಟ್ಕಳ ಮುಸ್ಲಿಮ್ ಯುತ್ ಫಡೆರೇಶನ್ ಮಾಜಿ ಅಧ್ಯಕ್ಷ ಅಝೀಝುರ್ರಹ್ಮಾನ್ ನದ್ವಿ, ಪ್ರಧಾನ ಕಾರ್ಯದರ್ಶಿ ಮುಬಶ್ಶಿರ್ ಹಲ್ಲಾರೆ ಸೇರಿದಂತೆ ವಿವಿಧ ಜಮಾಅತ್ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶಿರಸಿ: ಗಾಂಜಾ ,ಚರಸ್ ವಶಕ್ಕೆ.

ಶಿರಸಿ:-ಶಿರಸಿ ಶಹರ ಪೊಲೀಸ್‌ ಠಾಣಾ ವ್ಯಾಪ್ತಿಯ ಭೀಮನಗುಡ್ಡ ಅರಣ್ಯ ಪ್ರದೇಶದ ಹತ್ತಿರ ಅಕ್ರಮವಾಗಿ ಗಾಂಜಾ ಮತ್ತು ಚರಸ್‌ ಮಾರಾಟ ಮಾಡುತ್ತಿದ್ದ ಆರೋಪಿತನಾದ ವಿಕ್ರಮ ಅಲಿಯಾಸ್ ವಿಕ್ಕಿ ದೇವಿದಾಸ್‌ ಶೆಟ್ಟಿ ಸಾ: ಶಕ್ತಿ ನಗರ, ಮಂಗಳೂರು ನೇರವರನ್ನು ಬಂಧಿಸಿ, ಆತನಿಂದ 25 ಗ್ರಾಂ ತೂಕದ ಚರಸ್‌ ಹಾಗೂ 115 ಗ್ರಾಂ ತೂಕದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಅಲ್ಟೋ ಕಾರು,ಇತರೇ ಸಲಕರಣೆಗಳನ್ನು ವಶಪಡಿಸಿಕೊಂಡು ಶಿರಸಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Joida| ಅಕ್ರಮ ಗೋವಾ ಮದ್ಯ ಸಾಗಾಟ; ಆರೋಪಿ ಬಂಧನ.

ಜೋಯಿಡಾ ತಾಲೂಕಿನ ಅನಮೋಡ ಅಬಕಾರಿ ಚೆಕ್ ಪೋಸ್ಟ್ ಬಳಿ ಅಬಕಾರಿ ಪೋಲೀಸರು, ಅಕ್ರಮವಾಗಿ ಗೋವಾ ಸಾರಾಯಿ ಸಾಗಿಸುತ್ತಿದ್ದ ಗೂಡ್ಸ್ ಗಾಡಿ ಮತ್ತು ವ್ಯಕ್ತಿಯನ್ನು ಸೆರೆ ಹಿಡಿದ್ದಾರೆ.

ಹಾವೇರಿ ಜಿಲ್ಲೆಯ ಹಾವನೂರಿನ ಜಮೀರ್ ಬಂಧಿತ ಆರೋಪಿ. ಮಾರುತಿ ಸೂಪರ್ ಕ್ಯಾರಿ ಮಾಡೆಲ್‌ನ ಗೂಡ್ ಕ್ಯಾರಿಯ‌ನ್ನು ತಪಾಸಣೆ ಮಾಡಿದಾಗ
19, 000 ರೂ. ಮೌಲ್ಯದ ಮದ್ಯ ಕಂಡುಬಂದಿದೆ. 3 ಲಕ್ಷ ರೂ. ಮೌಲ್ಯದ ವಾಹನದ ಜತೆ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಕಾರವಾರ :ಕುಶಾಲನಗರ ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಜಗದೀಶ್‌ಗೆ ಪಿಎಚ್ಡಿ.

ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಜಗದೀಶ್ ಅವರಿಗೆ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್‌ನಿಂದ ಡಾಕ್ಟರೇಟ್‌ ಪದವಿ ನೀಡಲಾಗಿದೆ.

ಜಗದೀಶ್ ಅವರು ಎಮ್‌ಐಟಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಡಾ.ಕೆ.ಬಾಲಕೃಷ್ಣ ರಾವ್ ಅವರ ಮಾರ್ಗದರ್ಶನದಲ್ಲಿ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್‌ನಿಂದ ಡಾಕ್ಟರೇಟ್‌ ಪದವಿಗೆ ಸಂಶೋಧನಾ ಪ್ರಬಂಧ ಮಂಡಿಸಿದ್ದರು.

'ಎಫೆಕ್ಟ್ ಆಫ್ ಮ್ಯಾನುಫ್ಯಾಕ್ಚರ್ಡ್ ಸ್ಯಾಂಡ್ ಆ್ಯಂಡ್ ಸ್ಟೀಲ್ ಸ್ಲ್ಯಾಗ್ ಅಗ್ರಿಗೇಟ್ ಆನ್ ಸ್ಟ್ರೆಂಥ್ ಆ್ಯಂಡ್ ಡ್ಯುರೇಬಲಿಟಿ ಪ್ರಾಪರ್ಟೀಸ್ ಆಫ್ ಹೈ ಪರ್ಫಾರ್ಮೆನ್ಸ್ ಕಾಂಕ್ರೀಟ್: ಆ್ಯನ್ ಎಕ್ಸ್ಪಿರಿಮೆಂಟಲ್ ಅಪ್ರೋಚ್' ಸಂಶೋಧನಾ ಪ್ರಬಂಧವನ್ನು ಅವರು ಸೋಮವಾರ ಎಮ್‌ಐಟಿಯ ಹಂಪಿ ಸೆಮಿನಾರ್ ಹಾಲ್‌ನಲ್ಲಿ ಅವರು ಪ್ರಸ್ತುತಪಡಿಸಿದರು.

ಕಾರವಾರದ ಮಾಜಾಳಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ 2011ರಿಂದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಜಗದೀಶ್, ಕಳೆದ ತಿಂಗಳಷ್ಟೇ ಕುಶಾಲನಗರ ಎಂಜಿನಿಯರಿಂಗ್ ಕಾಲೇಜಿಗೆ ವರ್ಗಾವಣೆಗೊಂಡಿದ್ದರು. ಕಾರವಾರದಲ್ಲಿದ್ದಾಗಲೇ ಅವರು ಪಿಎಚ್ಡಿ ಅಧ್ಯಯನ ನಡೆಸುತ್ತಿದ್ದರು.

 

Advertisement
Tags :
fatafat newsKarwarSirsiUttra kanndaಕಾರವಾರಫಟಾಫಟ್ ನ್ಯೂಸ್ಶಿರಸಿ
Advertisement
Next Article
Advertisement