For the best experience, open
https://m.kannadavani.news
on your mobile browser.
Advertisement

Karnataka | ಕರ್ನಾಟಕದ ಏಳು ಕಡೆ ಏರೋಡ್ರೋಮ್ ಸ್ಥಾಪನೆ

ಕಾರವಾರ: ಪ್ರವಾಸಿಗರನ್ನು ಸೆಳೆಯಲು ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ,ಮಂಗಳೂರು ಜಿಲ್ಲೆಗಳಲ್ಲಿ ವಾಟರ್‌ ಏರೋಡ್ರೋಮ್‌ (Water Aerodrome) ಸ್ಥಾಪಿಸಲು ಕೇಂದ್ರ ವಿಮಾನಯಾನ ಸಚಿವಾಲಯ ಯೋಜಿಸಿದೆ.
10:42 PM Aug 25, 2025 IST | ಶುಭಸಾಗರ್
ಕಾರವಾರ: ಪ್ರವಾಸಿಗರನ್ನು ಸೆಳೆಯಲು ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ,ಮಂಗಳೂರು ಜಿಲ್ಲೆಗಳಲ್ಲಿ ವಾಟರ್‌ ಏರೋಡ್ರೋಮ್‌ (Water Aerodrome) ಸ್ಥಾಪಿಸಲು ಕೇಂದ್ರ ವಿಮಾನಯಾನ ಸಚಿವಾಲಯ ಯೋಜಿಸಿದೆ.
karnataka   ಕರ್ನಾಟಕದ ಏಳು ಕಡೆ ಏರೋಡ್ರೋಮ್ ಸ್ಥಾಪನೆ

Karnataka | ಕರ್ನಾಟಕದ ಏಳು ಕಡೆ ಏರೋಡ್ರೋಮ್ ಸ್ಥಾಪನೆ

ಕಾರವಾರ: ಪ್ರವಾಸಿಗರನ್ನು ಸೆಳೆಯಲು ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ,ಮಂಗಳೂರು ಜಿಲ್ಲೆಗಳಲ್ಲಿ ವಾಟರ್‌ ಏರೋಡ್ರೋಮ್‌ (Water Aerodrome) ಸ್ಥಾಪಿಸಲು ಕೇಂದ್ರ ವಿಮಾನಯಾನ ಸಚಿವಾಲಯ ಯೋಜಿಸಿದೆ.

Advertisement

ಈ ಕುರಿತು ಉಡುಪಿ – ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಲೋಕಸಭೆಯಲ್ಲಿ, ರಾಜ್ಯ ವಿಮಾನಯಾನ ಸೇವೆಗಳ ವಿಸ್ತರಣೆ ಕುರಿತು ಕೇಳಿದ ಪ್ರಶ್ನೆಗೆ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರುಳಿಧರ್‌ ಮೊಹೋಲ್‌ ಉತ್ತರ ನೀಡಿದ್ದಾರೆ

ಕಾರವಾರದ ಗಿಲಾನಿ ಸೂಪರ್ ಮಾರ್ಕೆಟ್ ನಲ್ಲಿ ಭರ್ಜರಿ ಆಫರ್ ,ಗ್ರೂಸರಿ ಕರೀದಿ ದಾರರಿಗೆ ಸಿಗಲಿದೆ ಬಂಪರ್ ಬಹುಮಾನ

ಕರ್ನಾಟಕದ 7 ಕಡೆ ಉಡಾನ್‌ ಯೋಜನೆ ಅಡಿ ವಾಟರ್‌ ಏರೋ ಡ್ರೋಮ್‌ ಸ್ಥಾಪಿಸಲು ಸ್ಥಳ ಗುರುತಿಸಲಾಗಿದೆ. ಉಡುಪಿಯ ಬೈಂದೂರು,ಉತ್ತರ ಕನ್ನಡ ಜಿಲ್ಲೆಯ ಸೂಪ ಡ್ಯಾಮ್‌ನ ಗಣೇಶಗುಡಿ, ಕಬಿನಿ ಹಿನ್ನೀರು, ಕಾರವಾರದ ಕಾಳಿ ನದಿ ಸೇತುವೆ ಸಮೀಪ, ಉಡುಪಿಯ ಮಲ್ಪೆ, ಮಂಗಳೂರು ಮತ್ತು ಸಾಗರ ತಾಲೂಕಿನ ಸಿಗಂದೂರು ಸಮೀಪ ವಾಟರ್‌ ಏರೋ ಡ್ರೋಮ್‌ ಸ್ಥಾಪನೆಗೆ ಯೋಜಿಸಲಾಗಿದೆ.

‌ನೀರಿನ ಮೇಲೆ ವಿಮಾನಗಳು ಟೇಕಾಫ್‌ ಮತ್ತು ಲ್ಯಾಂಡಿಂಗ್‌ ಮಾಡಲು ನಿರ್ದಿಷ್ಟ ಸ್ಥಳ ಗುರುತಿಸಿ ವಿಮಾನ ನಿಲ್ದಾಣ ನಿರ್ಮಿಸಲಾಗುತ್ತದೆ. ಇದನ್ನು ವಾಟರ್‌ ಏರೋ ಡ್ರೋಮ್‌ ಎನ್ನಲಾಗುತ್ತದೆ. ಸಾಮಾನ್ಯವಾಗಿ ವಿಸ್ತಾರವಾದ ನದಿಗಳು, ಜಲಾಶಯಗಳ ಹಿನ್ನೀರು ಭಾಗ, ಕರಾವಳಿ ಪ್ರದೇಶಗಳಲ್ಲಿ ವಾಟರ್‌ ಏರೋಡ್ರೋಮ್‌ ನಿರ್ಮಿಸಲಾಗುತ್ತದೆ.

ಇದನ್ನೂ ಓದಿ:-Uttarakannada| ಜಿಲ್ಲೆಗೂ ಗೃಹ ಆರೋಗ್ಯ ಯೋಜನೆ ವಿಸ್ತರಣೆ- ಹೇಗಿರಲಿದೆ ಆರೋಗ್ಯ ಸೇವೆ?

ಉಡಾನ್‌ 5.5 ಯೋಜನೆ ಅಡಿ ವಾಟರ್‌ ಏರೋಡ್ರೋಮ್‌ಗೆ ಟೆಂಡರ್‌ ಪ್ರಕ್ರಿಯೆ ಆರಂಭವಾಗಿದೆ. ಕರ್ನಾಟಕದ 7 ಸ್ಥಳಗಳ ಪೈಕಿ ಈಗಾಗಲೇ ಕಬಿನಿ ಮತ್ತು ಮಂಗಳೂರಿನಲ್ಲಿ ವಾಟರ್‌ ಏರೋ ಡ್ರೋಮ್‌ ಸ್ಥಾಪನೆಗೆ ಕಂಪನಿಗಳು ಮುಂದೆ ಬಂದಿವೆ. ಉಳಿದೆಡೆಗೆ ಟೆಂಡರ್‌ ಪ್ರಕ್ರಿಯೆ ಮುಂದುವರೆದಿದೆ.

ಕೇಂದ್ರ  ಸಚಿವರು ಹೇಳಿದ್ದೇನು?

ಉಡುಪಿ – ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಲೋಕಸಭೆಯಲ್ಲಿ, ರಾಜ್ಯ ವಿಮಾನಯಾನ ಸೇವೆಗಳ ವಿಸ್ತರಣೆ ಕುರಿತು ಕೇಳಿದ ಪ್ರಶ್ನೆಗೆ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರುಳಿಧರ್‌ ಮೊಹೋಲ್‌ ಉತ್ತರ ನೀಡಿದ್ದಾರೆ.

ಈ ವೇಳೆ ಉಡಾನ್‌ ಯೋಜನೆ ಅಡಿ ವಾಟರ್‌ ಏರೋಡ್ರೋಮ್‌ಗಳ ಸ್ಥಾಪನೆ ಕುರಿತು ಪ್ರಸ್ತಾಪಿಸಿದ್ದಾರೆ.

ಉಡಾನ್‌ ಯೋಜನೆ ಅಡಿ ಕರ್ನಾಟಕದಲ್ಲಿ ಒಟ್ಟು 9 ವಿಮಾನ ನಿಲ್ದಾಣಗಳಿವೆ. ಈ ಪೈಕಿ ಬೀದರ್‌, ಮೈಸೂರು, ವಿದ್ಯಾನಗರ, ಹುಬ್ಬಳ್ಳಿ, ಕಲಬುರಗಿ, ಬೆಳಗಾವಿ, ಶಿವಮೊಗ್ಗ ವಿಮಾನ ನಿಲ್ದಾಣಗಳು ಕಾರ್ಯಾಚರಿಸುತ್ತಿವೆ.

ಬಳ್ಳಾರಿ ಮತ್ತು ಕೋಲಾರದಲ್ಲಿ 20 ಸೀಟ್‌ಗಿಂತಲು ಕಡಿಮೆ ಸಾಮರ್ಥ್ಯದ ಸಣ್ಣ ವಿಮಾನಗಳ ಹಾರಾಟಕ್ಕೆ ಟೆಂಡರ್‌ ಪೂರ್ಣಗೊಂಡಿದೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಜಾಗ ಒದಗಿಸಬೇಕಿದೆ.

ರಾಜ್ಯದಲ್ಲಿ ವಾಟರ್‌ ಏರೋಡ್ರೋಮ್‌ಗಳಿಗೆ ಸ್ಥಾಪನೆಗೆ ಯೋಜಿಸಲಾಗಿದ್ದು, ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಕಬಿನಿ ಮತ್ತು ಮಂಗಳೂರಿನಲ್ಲಿ ವಾಟರ್‌ ಏರೋಡ್ರೋಮ್‌ಗೆ ಒಪ್ಪಂದ ಪತ್ರ ನೀಡಲಾಗಿದೆ ಎಂದು ಉತ್ತರಿಸಿದ್ದಾರೆ.

ಪ್ರಕೃತಿ ಮೆಡಿಕಲ್ ,ಕಾರವಾರ.
Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ