Karwar :ಅರಣ್ಯ ಇಲಾಖೆಯಿಂದ 111 ಆಲಿವ್ ರಿಡ್ಲೆ ಕಡಲಾಮೆ ಸಮುದ್ರಕ್ಕೆ.
Karwar :ಅರಣ್ಯ ಇಲಾಖೆಯಿಂದ 111 ಆಲಿವ್ ರಿಡ್ಲೆ ಕಡಲಾಮೆ ಸಮುದ್ರಕ್ಕೆ.

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗ ಇದೀಗ ಅವನತಿ ಅಂಚಿನಲ್ಲಿರುವ ಆಲಿವ್ ರಿಡ್ಲೆ ಕಡಲಾಮೆಗಳ ಸಂರಕ್ಷಿತ ಪ್ರದೇಶವಾಗಿ ಮಾರ್ಪಡುತಿದ್ದು ಕಾರವಾರ,(karwar)ಹೊನ್ನಾವರ,ಅಂಕೋಲ ಕಡಲ ತೀರಗಳಲ್ಲಿ ಆಲಿವ್ ರಿಡ್ಲೆ ಕಡಲಾವೆಗಳ ಮೊಟ್ಟೆ ಇಡುವ ಸ್ಥಳಗಳಾಗಿ ಬದಲಾಗಿದೆ.
ಕಾರವಾರದ ದೇವಬಾಗ್ ಕಡಲ ತೀರಭಾಗದಲ್ಲಿ ಕಡಲಾಮೆಗಳು( sea turtle) ಮೊಟ್ಟೆಯಿಟ್ಟು ಮರಿ ಮಾಡುತಿದ್ದು ಅರಣ್ಯ ಇಲಾಖೆ ಈ ಮೊಟ್ಟೆಗಳ ರಕ್ಷಣೆ ಮಾಡುತ್ತಿದೆ.
ಇದನ್ನೂ ಓದಿ:-Karwar ಅರಬ್ಬಿ ಸಮುದ್ರದಲ್ಲಿ ಮುಳುಗಿದ ಬೋಟ್ ಎಂಟು ಜನ ಮೀನುಗಾರರ ರಕ್ಷಣೆ.
ಈ ವರ್ಷದ ಮಾರ್ಚ ನಲ್ಲಿ ಕಾರವಾರದ(karwar) ಕಡಲ ತೀರದಲ್ಲಿ ನೂರಕ್ಕೂ ಹೆಚ್ಚು ಕಡಲಾಮೆ ಮೊಟ್ಟೆಗಳಿರುವ ಪ್ರದೇಶವನ್ನು ಅರಣ್ಯ ಇಲಾಖೆ ಗುರುತಿಸಿ ರಕ್ಷಣೆ ಮಾಡಿದೆ.
ಕಳೆದ ವರ್ಷಕ್ಕಿಂತ ಈ ವರ್ಷ ಆಮೆಗಳು ಕಾರವಾರ ಭಾಗದಲ್ಲಿ ಮೊಟ್ಟೆ ಇಡುವ ಪ್ರಮಾಣ ಹೆಚ್ಚಳವಾಗಿದೆ.ಕಳೆದ 49 ದಿನದ ಹಿಂದೆ ಬಾವಳ ಕಡಲ ತೀರದಲ್ಲಿ 111 ಆಮೆಯ ಮೊಟ್ಟೆಯನ್ನು ಅರಣ್ಯ ಇಲಾಖೆಯವರು ರಕ್ಷಿಸಿ ಇಂದು Ex-situ conservation ಮಾಡಿದ ಆಮೆ ಮರಿಗಳನ್ನು ದೇವಬಾಗ್ ಕಡಲ ತೀರದಲ್ಲಿ ಹಾಗೂ ಬಾವಳ ಕಡತೀರದ ಮೂಲಕ ಅರಬ್ಬಿ ಸಮುದ್ರಕ್ಕೆ ಬಿಡಲಾಯಿತು.
ಇದನ್ನೂ ಓದಿ:-Ankola| 3.1 ಮೀಟರ್ ಡಾಲ್ಫಿನ್ ಕಳೆಬರ ಪತ್ತೆ
ಈ ಸಂದರ್ಭದಲ್ಲಿ ಆಮೆ ಮೊಟ್ಟೆಗಳನ್ನು ರಕ್ಷಣೆ ಮಾಡಿದ ಡಿ.ಸಿ.ಎಫ್ ರವಿಶಂಕರ್.ಸಿ. ಕಾರವಾರದ ಎಸಿಎಫ್ ಕೆ ಡಿ ನಾಯ್ಕ ,ಆರ್.ಎಫ್ .ಓ ಕಿರಣ್ ಮನವಚಾರಿ ಉಪ ವಲಯ ಅರಣ್ಯಧಿಕಾರಿಗಳಾದ ಪ್ರಕಾಶ್ ಯರಗಟ್ಟಿ ಮಲ್ಲಿಕಾರ್ಜುನ ಭಂಡಾರಿ ಮತ್ತು ಮಲ್ಲೇಶ್, ಗೋವರ್ಧನ್ ಬೀಟ್ ಫಾರೆಸ್ಟರ್ ಮತ್ತು ಸ್ಥಳೀಯ ಮೀನುಗಾರರು ಆಮೆ ಮರಿಗಳನ್ನು ಕಡಲಿಗೆ ಬಿಟ್ಟರು.