Karwar : ಗಬ್ಬೆದ್ದ ಸೇತುವೆಯಡಿ ಅರಳಲಿದೆ ಬಣ್ಣದ ಚಿತ್ತಾರ!
Karwar : ಗಬ್ಬೆದ್ದ ಸೇತುವೆಯಡಿ ಅರಳಲಿದೆ ಬಣ್ಣದ ಚಿತ್ತಾರ!

ಕಾರವಾರ :- ಕಾರವಾರ (karwar)ನಗರದ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66 ರ ಪ್ಲೇಓವರ್ ಕೆಳಭಾಗದ ಕಂಬಗಳಲ್ಲಿ ಇನ್ನುಮುಂದೆ ಜಿಲ್ಲೆಯ ಸೊಬಗು ವಿವರಿಸುವ ಬಣ್ಣದ ಚಿತ್ತಾರಗಳು ಅರಳಲಿದೆ.
ಹೌದು ಕಾರವಾರದ ಪ್ಲೇಓವರ್ ಕೆಳಗೆ ಕಸ ಕಡ್ಡಿಗಳು ರಾರಾಜಿಸುತಿದ್ರೆ, ವಾಹನಗಳ ನಿಲ್ದಾಣವಾಗಿ ಮಾರ್ಪಟ್ಟಿದ್ದು ಸಂಚಾರ ಮಾಡುವ ಜನರಿಗೆ ಕಾರವಾರ ಪ್ರವೇಶಿಸುತಿದ್ದಂತೆ ಇದೇನಪ್ಪ ಇಷ್ಟು ಕೆಟ್ಟದಾಗಿದೆ ಎಂದು ಮೂತಿ ಮುರಿಯುವಂತಿತ್ತು.
ಅಂದ ಆಕಾರ ಇಲ್ಲದೇ ನಿರ್ವಹಣೆ ಇಲ್ಲದೇ ಗತಿಗೆಟ್ಟ ಸ್ಥಳದಂತೆ ಗೋಚರಿಸುತಿದ್ದ ಈ ಸ್ಥಳವೀಗ ಬಣ್ಣದ ಚಿತ್ತಾರಗಳು ಅಂದ ಹೆಚ್ಚಿಸಲಿದೆ.
ಹೆದ್ದಾರಿ ಪ್ರಾಧಿಕಾರಕ್ಕೆ ಬರುವ ಈ ಸ್ಥಳ ಇದೀಗ ಸಾರ್ವಜನಿಕರ ಸಹಕಾರಣದಲ್ಲಿ ಟನಲ್ ಭಾಗದಿಂದ ರಾಕ್ ಗಾರ್ಡನ್ ವರೆಗೆ ಮೇಲುಸೇತುವೆ ಕೆಳಭಾಗದಲ್ಲಿ ಕರಾವಳಿಯ ಸಾಂಸ್ಕೃತಿಕತೆ ಬಿಂಬಿಸುವ ಚಿತ್ತಾರಗಳು ತಲೆಎತ್ತಲಿವೆ.

ಕಾರವಾರದ ಅಸಿಸ್ಟೆಂಟ್ ಕಮಿಷಿನರ್ ರವರ ಅನುಮತಿ ಪಡೆದು ಸ್ಥಳೀಯ ಮೀನುಗಾರರಾಗಿರುವ ನಿತಿನ್ ರವರು ತಮ್ಮ ಹಣ ಕರ್ಚುಮಾಡಿ ಕಂಬಗಳಿಗೆ ಬಣ್ಣ ಹೊಡೆಸಿ ಮೀನುಗಾರಿಕೆ,ಕಲೆ,ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳನ್ನು ಬಿಡಿಸಲು ವ್ಯವಸ್ಥೆ ಮಾಡಿದ್ದಾರೆ.
ಇದನ್ನೂ ಓದಿ:- Karwar ಇನ್ನುಮುಂದೆ ಗೋ ಹತ್ಯೆ ಏನಾದ್ರೂ ನಡೆದ್ರೆ ಸರ್ಕಲ್ ನಲ್ಲಿ ನಿಲ್ಲಿಸಿ ಗುಂಡ ಹಾಕ್ತೆವಿ-ಸಚಿವ ಮಂಕಾಳು ವೈದ್ಯ
ಇಲ್ಲಿರುವ ಕಂಬಗಳಲ್ಲಿ ಕಾರವಾರದ ಸಂಸ್ಕೃತಿ ಬಿಂಬಿಸುವ ಚಿತ್ರಗಳು ಮೂಡಿಬರಲಿದ್ದು ಇದಕ್ಕಾಗಿ ಗೋವಾ ಹಾಗೂ ಮುಂಬೈ ಭಾಗದ ಕಲಾವಿದರನ್ನು ಕರೆಸಿದ್ದು ಇದೀಗ ಪ್ಲೇಓವರ್ ನ ಕಂಬಗಳಲ್ಲಿ ವರ್ಣ ರಂಜಿತ ಚಿತ್ರಗಳು ಮೂಡಿಬರಲಿದ್ದು ನಗರದ ಸೌಂದರ್ಯ ಇಮ್ಮುಡಿಗೊಳ್ಳಲಿದೆ.