Karwar :ಕಾಳಿ ಸೇತುವೆಯ ಮೇಲೆ ಬಿದ್ದ ಹಳೆಸೇತುವೆ ತುಂಡು- ಅಲ್ಪದರಲ್ಲೇ ತಪ್ಪಿದ ಭಾರಿ ಅನಾಹುತ
Karwar :ಕಾಳಿ ಸೇತುವೆಯ ಮೇಲೆ ಬಿದ್ದ ಹಳೆಸೇತುವೆ ತುಂಡು- ಅಲ್ಪದರಲ್ಲೇ ತಪ್ಪಿದ ಭಾರಿ ಅನಾಹುತ
ಕಾರವಾರ:- ಹಳೆ ಸೇತುವೆ ತೆರವು ವೇಳೆ ಹೊಸ ಸೇತುವೆಯ ಮೇಲೆ ಹಳೆ ಸೇತುವೆಯ ತುಂಡು ಬಿದ್ದು ಹೊಸದಾಗಿ ನಿರ್ಮಿಸಿದ ಸೇತುವ ಒಂದು ಭಾಗ ಚಿಕ್ಕದಾಗಿ ಬಿರುಕು ಬಿಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರವಾರ(karwar) -ಗೋವಾ(Goa) ನಡುವಿನ ಕಾಳಿ ಸೇತುವೆ ಇದಾಗಿದ್ದು ಕಳೆದ ವರ್ಷ ಆಗಷ್ಟ್ 7 ರಂದು ಹಳೆ ಸೇತುವೆ ಕುಸಿದು ಬಿದ್ದಿತ್ತು.
ನಂತರ ಈ ಹಳೇ ಸೇತುವೆಯನ್ನು ತೆರವು ಮಾಡುವ ಕಾರ್ಯಕ್ಕೆ ಐ.ಆರ್.ಬಿ ಕಂಪನಿ ಕೈ ಹಾಕಿದ್ದು ತೆರವು ಕಾರ್ಯ ನಡೆಸುತಿತ್ತು.
ಇದನ್ನೂ ಓದಿ:-Karwar:ಸೀ ಬರ್ಡ ನಿರಾಶ್ರಿತರಿಗೆ 10.47 ಕೋಟಿ ಪರಿಹಾರ ಮಂಜೂರು-ವಿಶ್ವೇಶ್ವರ ಹೆಗಡೆ ಕಾಗೇರಿ
ಆದರೇ ಇಂದು ತೆರವಿನ ವೇಳೆ ಏಕಾ ಏಕಿ ಹಳೆ ಸೇತುವೆಯ ತುಂಡು ಹೊಸ ಸೇತುವೆ ಗೆ ತಾಗಿ ಬಿದ್ದಿದ್ದು ಹೊಸ ಸೇತುವೆಯ ಪಿಲ್ಲರ್ ಭಾಗದಲ್ಲಿ ಅಲ್ಪ ಬಿರುಕು ಕಾಣಿಸಿಕೊಂಡಿದೆ. ಆದರೇ ಯಾವುದೇ ದೊಡ್ಡ ಹಾನಿ ಸಂಭವಿಸಿಲ್ಲ. ಇನ್ನು ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಐ.ಆರ್.ಬಿ ಕಂಪನಿ ಅಧಿಕಾರಿಗಳು ಮಾಹಿತಿ ನೀಡಿದ್ದು ಸದ್ಯ ಈ ಭಾಗದ ಸಂಚಾರ ಎತಾ ಸ್ಥಿತಿಯಲ್ಲಿ ಸಾಗಿದೆ.