For the best experience, open
https://m.kannadavani.news
on your mobile browser.
Advertisement

Karwar ಗೋ ಮಾಂಸ ತಿನ್ನುತ್ತೇವೆ ಕಳ್ಳತನ ಮಾಡಿದ ಮಾಂಸ ತಿನ್ನುವುದಿಲ್ಲ- ಭಟ್ಕಳದ ತಂಜಿಮ್ ಅಧ್ಯಕ್ಷ.

ಕಾರವಾರ :- ಗೋ ಮಾಂಸ ತಿನ್ನುತ್ತೇವೆ ಕಳ್ಳತನ ಮಾಡಿದ ಗೋ ಮಾಂಸ ತಿನ್ನುವುದಿಲ್ಲ ,ಕಳ್ಳತನ ಮಾಡಿದ ಮಾಂಸವನ್ನ ನಮ್ಮ ಧರ್ಮದಲ್ಲಿ ಸೇವಿಸುವಂತಿಲ್ಲ ಎಂದು ಭಟ್ಕಳದ (bhatkal)ತಂಜಿಮ್ ಸಂಸ್ಥೆಯ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ ಹೇಳಿದ್ದಾರೆ.
08:45 PM Jan 30, 2025 IST | ಶುಭಸಾಗರ್
karwar ಗೋ ಮಾಂಸ ತಿನ್ನುತ್ತೇವೆ ಕಳ್ಳತನ ಮಾಡಿದ ಮಾಂಸ ತಿನ್ನುವುದಿಲ್ಲ  ಭಟ್ಕಳದ ತಂಜಿಮ್ ಅಧ್ಯಕ್ಷ
ಕಾರವಾರ :- ಗೋ ಮಾಂಸ ತಿನ್ನುತ್ತೇವೆ ಕಳ್ಳತನ ಮಾಡಿದ ಗೋ ಮಾಂಸ ತಿನ್ನುವುದಿಲ್ಲ ,ಕಳ್ಳತನ ಮಾಡಿದ ಮಾಂಸವನ್ನ ನಮ್ಮ ಧರ್ಮದಲ್ಲಿ ಸೇವಿಸುವಂತಿಲ್ಲ ಎಂದು ಭಟ್ಕಳದ (bhatkal)ತಂಜಿಮ್ ಸಂಸ್ಥೆಯ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ ಹೇಳಿದ್ದಾರೆ.
ಪ್ರಕೃತಿ ಮೆಡಿಕಲ್ ,ಕಾರವಾರ.

Karwar ಗೋ ಮಾಂಸ ತಿನ್ನುತ್ತೇವೆ ಕಳ್ಳತನ ಮಾಡಿದ ಮಾಂಸ ತಿನ್ನುವುದಿಲ್ಲ- ಭಟ್ಕಳದ ತಂಜಿಮ್ ಅಧ್ಯಕ್ಷ.

Advertisement

ಕಾರವಾರ :- ಗೋ ಮಾಂಸ ತಿನ್ನುತ್ತೇವೆ ಕಳ್ಳತನ ಮಾಡಿದ ಗೋ ಮಾಂಸ (beef) ತಿನ್ನುವುದಿಲ್ಲ ,ಕಳ್ಳತನ ಮಾಡಿದ ಮಾಂಸವನ್ನ ನಮ್ಮ ಧರ್ಮದಲ್ಲಿ ಸೇವಿಸುವಂತಿಲ್ಲ ಎಂದು ಭಟ್ಕಳದ(bhatkal) ತಂಜಿಮ್ ಸಂಸ್ಥೆಯ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ ಹೇಳಿದ್ದಾರೆ.

ಅವರು ಹೊನ್ನಾವರದ(Honnavara) ಸಾಲಕೋಡು ಗ್ರಾಮದಲ್ಲಿ ಗರ್ಭ ಧರಿಸಿದ್ದ ಹಸು ತಲೆಕಡಿದು ಮಾಂಸ ಕದ್ದೊಯ್ದ ಪ್ರಕರಣ ಕುರಿತು ಕಾರವಾರದಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿದರು.

ಗೋ ಕಳ್ಳತನ ಪ್ರಕರಣ ಜಾಸ್ತಿ ಆಗುತ್ತಿದೆ ಅಂತ ಮಾಧ್ಯಮಗಳಲ್ಲಿ ನೋಡಿದ್ವಿ ಆಗ ಒಂದು ತಿಂಗಳ ಕಾಲ ಭಟ್ಕಳ ದಲ್ಲಿ ಮಾಂಸದ ಅಂಗಡಿ ಕ್ಲೋಸ್ ಮಾಡಿದ್ದೇವೆ.

ಗೋ ಹತ್ಯೆ ಆರೋಪಿಯ ಕಾಲಿಗೆ ಗುಂಡು 

ಗರ್ಭ ಧರಿಸಿದ್ದ ಹಸು ತಲೆ ಕಡಿದಿದನ್ನ ನಾವು ಖಂಡಿಸುತ್ತೇವೆ, ಹಸು ತಲೆ ಕಡಿದ ಪ್ರಕರಣದಲ್ಲಿನ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ,ಇನ್ನೂಳಿದ ಆರೋಪಿಗಾಗಿ ಪೊಲೀಸರು ಕಾರ್ಯಚಾರಣೆ ಮಾಡುತ್ತಿದ್ದಾರೆ .ಈ ಪ್ರಕರಣದಲ್ಲಿ ಆರೋಪಿಗಳ ಹೆಸರಿನ ಹಿಂದೆ ಭಟ್ಕಳ ಅಂತ ಇದೆ,ಆರೋಪಿಗಳ ಹೆಸರಿನ ಜೊತೆ ಭಟ್ಕಳದ ಹೆಸರು ಹಾಳಾಗುತ್ತಿದೆ.

ಇದನ್ನೂ ಓದಿ:-Honnavara ಗರ್ಭಿಣಿ ಆಕಳು ರುಂಡ ,ಕಾಲು ಕಡಿದು ,ಕರುಹತ್ಯೆ ಮಾಡಿದ ದುರುಳರು!

ಭಟ್ಕಳ ಮುಸ್ಲೀಮರು ದನಕಳ್ಳತನವನ್ನ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ,ದನಕಳ್ಳರು ಯಾರೆ ಆಗಿದ್ರು ಅವರನ್ನ ಬಂಧಿಸುವುದಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ.

ಈ ಪ್ರಕರಣದಲ್ಲಿ ಯಾವುದೇ ಧರ್ಮದವರು ಇದ್ರೂ ಬಂಧಿಸಬೇಕು, ನಾವು ಕಳ್ಳತನವಾದ ಗೋವುಗಳ ಮಾಂಸ ತಿನ್ನುವುದನ್ನು ಭಟ್ಕಳದಲ್ಲಿ ನಿಷೇಧಿಸಿದ್ದೇವೆ ಎಂದರು.

Bhatkal
"Police seize beef."ಭಟ್ಕಳದಲ್ಲಿ ಗೋಮಾಂಸ ವಶ.

ಇನ್ನು ಭಟ್ಕಳ ಮುಸ್ಲಿಂ ಮುಖಂಡ, ವಕೀಲ ಇಮ್ರಾನ್ ಲಂಕಾ ಮಾತನಾಡಿ
ಆರೋಪಿಗಳ ಕಾಲಿಗೆ ಪೊಲೀಸರಿಂದ ಗುಂಡಿನ ದಾಳಿ ಮಾಡಿದ್ದಾರೆ.ಇದರಲ್ಲಿ ಆರೋಪಿ ಮತ್ತು ಪೊಲೀಸರದ್ದು ಇಬ್ಬರದ್ದು ತಪ್ಪಿದೆ,ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಬಾರದಾಗಿತ್ತು,ಆರೋಪಿಗಳು ತಪ್ಪು ಮಾಡಿದಕ್ಕೆ ಅನಿವಾರ್ಯವಾಗಿ ಪೊಲೀಸರು ಗುಂಡು ಹಾರಿಸಬೇಕಾಯ್ತು ಎಂದರು.

ಇದನ್ನೂ ಓದಿ:-Honnavara ಗರ್ಭಧರಿಸಿದ್ದ ಗೋಹತ್ಯೆ ಮಾಡಿದ್ದ ಓರ್ವ ಆರೋಪಿ ಬಂಧನ ! ಕೆಂಡ ಹಿಡಿದು ನಿಂತವರ ಸುತ್ತಾ ಹಲವು ಪ್ರಶ್ನೆ? ಏನದು

ತಂಜಿಮ್ ಸಂಘಟನೆಯಿಂದ ಕಾರವಾರ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ್ದು ಭಟ್ಕಳದಲ್ಲಿ ಶಾಂತಿ ಇರಬೇಕು ,ಎಲ್ಲಾ ವಿಷಯಗಳಿಗೆ ಭಟ್ಕಳ ಹೆಸರನ್ನು ಸೇರಿಸಬಾರದು , ಹಿಂದೂ ,ಮುಸ್ಲಿಂ ಎಂದು ಪ್ರತ್ತೇಕಿಸದೇ ಗೋ ಕಳ್ಳರನ್ನು ಖಂಡಿಸಬೇಕು . ಇಲ್ಲಿ ಜಾತಿಯಾದಾರದಲ್ಲಿ ಖಂಡಿಸುವುದು ಸರಿಯಲ್ಲ.

ಈ ಗೋಕಳ್ಳರನ್ನು ಹಿಡಿದುಕೊಟ್ಟವರಿಗೆ ತಲಾ 50 ಸಾವಿರ ಬಹುಮಾನ ಘೋಷಣೆ 

ಪಕ್ಷದವರು ಕೋಮುಸೌಹಾರ್ಧತೆ ಕೆಡುವ ನಿಟ್ಟಿನಲ್ಲಿ ಹೇಳಿಕೆ ನೀಡುತಿದ್ದಾರೆ. ಇದು ಸರಿಯಲ್ಲ. ಕುಮಟಾ ಶಾಸಕ ದಿನಕ್ ಶಟ್ಟಿ ಹೇಳಿಕೆ ಖಂಡನೀಯ.

ಭಟ್ಕಳ ಮುಸ್ಲೀಮರು ಗೋಹತ್ಯೆ ವಿರೋಧಿಸುತ್ತಾರೆ ಹೊರತು ಸಹಕಾರ ನೀಡುವುದಿಲ್ಲ ಎಂದು ತಂಜಿಮ್ ಅಧ್ಯಕ್ಷರು ಹೇಳಿದರು.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ