Karwar|ಮುಳುಗುತಿದ್ದ ಬೋಟ್ ರಕ್ಷಣೆ|ವಿಡಿಯೋ ನೋಡಿ
Karwar|ಮುಳುಗುತಿದ್ದ ಬೋಟ್ ರಕ್ಷಣೆ|ವಿಡಿಯೋ ನೋಡಿ
ಕಾರವಾರ(october 10) :- ಸಮುದ್ರದಲ್ಲಿ ಮುಳುಗುತಿದ್ದ ಪ್ರವಾಸಿಗರನ್ನು ಹೊತ್ತೊಯ್ಯುವ ಬೋಟ್ ನನ್ನು ರಕ್ಷಣೆ ಮಾಡಿದ ಘಟನೆಉತ್ತರ ಕನ್ನಡ ಜಿಲ್ಲೆಯ ಕಾರವಾರದ (karwar) ಕಾಳಿ ಸಂಗಮದ ಸಮುದ್ರದಲ್ಲಿ ನಡೆದಿದೆ.
ವಿಡಿಯೋ ನೋಡಲು ಕನ್ನಡವಾಣಿ ಫೇಸ್ ಬುಕ್ ಫೇಜ್ ಲಿಂಕ್ ಗೆ ಕ್ಲಿಕ್ ಮಾಡಿ:-
https://www.facebook.com/share/r/1AE7nj4Xwo/
ಕುರ್ಮಗಡ ದ್ವೀಪದ ಸೆಂಟಕೋರ ರೆಸಾರ್ಟಗೆ ಸೇರಿದ ಬೋಟ್ ಇದಾಗಿದ್ದು ಬೋಟ್ ನ ತಳಭಾಗದಲ್ಲಿ ನೀರು ತುಂಬಿಕೊಂಡ ಹಿನ್ನಲೆಯಲ್ಲಿ ಬೋಟ್ ಮುಳುಗುವ ಹಂತ ತಲುಪಿತ್ತು.ತಕ್ಷಣ ಸ್ಥಳೀಯ ಎರಡು ಬೋಟ್ ಗಳ ಸಹಾಯದಿಂದ ಬೋಟ್ ರಕ್ಷಣೆ ಮಾಡಿಸಮುದ್ರ ಭಾಗದಿಂದ ಸದಾಶಿವ ಗಡ ಭಾಗದ ಕಾಳಿ ನದಿ ತೀರಕ್ಕೆ ಕರೆತಂದು ಬೋಟ್ ನನ್ನು ರಕ್ಷಣೆ ಮಾಡಲಾಗಿದೆ.
ಪ್ರವಾಸಿಗರು ಯಾರು ಇರದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ನಿನ್ನೆ ದಿನ ಬೇಲಿಕೇರಿ ಬಂದರಿನಲ್ಲಿ ಸಹ ಪರ್ಷಿಯನ್ ಬೋಟ್ ಒಂದು ಅಲೆಗಳ ಹೊಡೆತಕ್ಕೆ ಬೋಟ್ ನಲ್ಲಿ ನೀರು ತುಂಬಿ ಮುಳುಗಡೆಯಾಗಿ ಲಕ್ಷಾಂತರ ರುಪಾಯಿ ಹಾನಿ ಸಂಭವಿಸಿತ್ತು.
Ankola| ಅಲೆಗಳ ಅಬ್ಬರಕ್ಕೆ ದೋಣಿಗೆ ನೀರುತುಂಬಿ ಮುಳುಗಡೆ-ಲಕ್ಷಾಂತರ ಹಾನಿ
ಈ ತಿಂಗಳಲ್ಲಿ ಮೂರು ಬೋಟುಗಳು ಸಮುದ್ರದ ಅಲೆಗಳ ಹೊಡೆತಕ್ಕೆ ಹಾನಿಯಾಗಿ ದುರಂತ ಸಂಭವಿಸಿದೆ.