Karwar|ಗಣೇಶನ ದುಡ್ಡಿಗಾಗಿ ಬಡಿದಾಡಿಕೊಂಡ ಸಹೋದರರು| ಸಾವಿನಲ್ಲಿ ಅಂತ್ಯ
ಕಾರವಾರ :- ಮನೆಯಲ್ಲಿ ಗಣೇಶ ಪೂಜೆ (Ganesha puje)ಹಾಗೂ ದೇವರಿಗೆ ಇಟ್ಟ ಹಣದ (Money)ವಿಚಾರದಲ್ಲಿ ಸಹೋದರರ ನಡುವೆ ಗಲಾಟೆ ಯಾಗಿ ಹತ್ಯೆಯಲ್ಲಿ ಅಂತ್ಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ (Karwar) ಸಾಯಿಕಟ್ಟಾ ಬಳಿಯ ಬಿಂದು ಮಾಧವ ದೇವಸ್ಥಾನದ ಬಳಿ ನಡೆದಿದೆ.
ಸಂದೇಶ್ ಪ್ರಭಾಕರ್ ಬೋರ್ಕರ್ ಹತ್ಯೆಗೊಳಗಾದ ವ್ಯಕ್ತಿಯಾಗಿದ್ದು ಈತನ ಚಿಕ್ಕಪ್ಪನ ಮಗ ಮನೀಶ್ ಕಿರಣ್ ಬೋರ್ಕರ ಹತ್ಯೆ ಮಾಡಿದ ಸಹೋದರನಾಗಿದ್ದಾನೆ.
ಇಂದು ಮಧ್ಯಾಹ್ನ ಗಣಪತಿ ಪೂಜೆ ನಂತರ ಪ್ರಭಾಕರ್ , ಮನೋಹರ್ ಬೋರ್ಕರ್ ರವರ ಮಕ್ಕಳು ಪೂಜೆಗೆ ಇಟ್ಟಿದ್ದ ಹಣದ ಬಗ್ಗೆ ಗಲಾಟೆ ಮಾಡಿಕೊಂಡು ಕೈ ಕೈ ಮಿಲಾಯಿಸಿಕೊಂಡಿದ್ದಾರೆ.
ಇದನ್ನೂ ಓದಿ:- Bhatkal| ದಾನದ ಹೆಸರಲ್ಲಿ ಸುಳ್ಳು ಪ್ರತಿಷ್ಟೆತೋರಿದ ವ್ಯಕ್ತಿಗೆ ಹಣ ಮರಳಿಸಿ ಸ್ವಾಭಿಮಾನ ತೋರಿದ ಮಹಿಳೆಯರು
ಈವೇಳೆ ಪ್ರಭಾಕರ್ ಹಿರಿಯ ಮಗ ಸಂದೇಶ್ ರವರಿಗೆ ಮನೋಹರ್ ರವರ ಕಿರಿಯ ಪುತ್ರ ಚಾಕು ಇರಿದಿದ್ದಾನೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಆತ ಸಾವು ಕಂಡಿದ್ದು ,ಚಾಕು ಇರಿದ
ಮನೀಶ್ ಕಿರಣ್ ಹಾಗೂ ಆತನಿಗೆ ಸಹಕಾರ ನೀಡಿದವರನ್ನು ಕಾರವಾರ ನಗರ ಠಾಣೆ ಪೊಲೀಸರು ಬಂಧಿಸಿದ್ದು ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.