Karwar :ರಾತ್ರಿ ಮನೆಗೆ ನುಗ್ಗಿ ಮಹಿಳೆ ಜೊತೆ ಅಸಭ್ಯ ವರ್ತನೆ -ಸೈಂಟ್ ಮಿಲಗ್ರಿಸ್ ಸಿಬ್ಬಂದಿ ಮೇಲೆ ಪ್ರಕರಣ ದಾಖಲು
Karwar :ರಾತ್ರಿ ಮನೆಗೆ ನುಗ್ಗಿ ಮಹಿಳೆ ಜೊತೆ ಅಸಭ್ಯ ವರ್ತನೆ -ಸೈಂಟ್ ಮಿಲಗ್ರಿಸ್ ಸಿಬ್ಬಂದಿ ಮೇಲೆ ಪ್ರಕರಣ ದಾಖಲು.
ಕಾರವಾರ:-ಸಾಲದ ಬಡ್ಡಿಯ ಕಂತು ತುಂಬಿಲ್ಲ ಎಂದು ರಾತ್ರೋ ರಾತ್ರಿ ಮಹಿಳೆಯ ಮನೆಗೆ ನುಗ್ಗಿ ಗಲಾಟೆ ಮಾಡಿ ಅನುಚಿತ ವರ್ತನೆ ತೋರಿದ ಪ್ರಕರಣ ಸಂಬಂಧ ಕಾರವಾರದ ಸೈಂಟ್ ಮಿಲಗ್ರಿಸ್ (ST Milagres bank karwar) ಕೋಆಪರೇಟಿವ್ ಬ್ಯಾಂಕ್(Bank) ಸಿಬ್ಬಂದಿ ವಿರುದ್ಧ ಕಾರವಾರ (Karwar) ತಾಲೂಕಿನ ಚಿತ್ತಾಕುಲ ಠಾಣೆಯಲ್ಲಿ ಐದು ಜನರ ಮೇಲೆ ಪ್ರಕರಣ ದಾಖಲಾಗಿದೆ.
ಕಾರವಾರ ತಾಲೂಕಿನ ಚಿತ್ತಾಕುಲ ಗ್ರಾಮದ ಸುಲಕ್ಷಮಿ ಎಂಬ ಮಹಿಳೆ ಸೆಂಟ್ ಮಿಲಾಗ್ರಿಸ್ ಬ್ಯಾಂಕ್ ನಿಂದ 2018 ರಲ್ಲಿ 4.5 ಲಕ್ಷ ಸಾಲ ಪಡೆದಿದ್ದು ಬಡ್ಡಿ ತುಂಬುತ್ತಾ ಬಂದಿದ್ದಾರೆ. ಆದರೇ ಪೂರ್ತಿಯಾಗಿರಲಿಲ್ಲ.
2018ರಲ್ಲಿ 4.5 ಲಕ್ಷ ಸಾಲ ಪಡೆದಿದ್ದ ಈಕೆ ಇದುವರೆಗೂ ಬಡ್ಡಿ ತುಂಬ್ತಾನೆ ಇದಾಳೆ ಆದ್ರೆ ಪೂರ್ತಿ ಆಗಿರಲಿಲ್ಲ. ಬಡ್ಡಿ ಕಂತು ತುಂಬಿಲ್ಲ ಎಂದು 5 ಜನ ನಿನ್ನೆ ರಾತ್ರಿ ಮನೆಗೆ ನುಗ್ಗಿ ಅನುಚಿತ ವರ್ತನೆ ಮಾಡಿದ್ದರು ಎಂದು ದೂರು ನೀಡಲಾಗಿದೆ.
ಈ ಕುರಿತು ಮಹಿಳೆ ಚಿತ್ತಾಕು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಸೆಂಟ್ ಮಿಲಾಗ್ರಸ್ ನ ಐದು ಜನ ಸಾಲ ವಸೂಲಿ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:-Karwar : ಜಪ್ತಿ ವಾಹನಗಳ ಹಾರಾಜು -ಭಾಗವಹಿಸುವವರಿಗೆ ಇಲ್ಲಿದೆ ಅವಕಾಶ.
ಜಿಲ್ಲೆಯ ಮೈಕ್ರೋ ಫೈನಾನ್ಸ್ ಹಾಗೂ ಮೀಟರ್ ಬಡ್ಡಿ ಕಿರುಕುಳ ಪ್ರಕರಣ ಸಂಬಂಧ ಐಆರ್ ಬಿ ನಿಯಮ ಉಲ್ಲಂಘಿಸಿ ಬಡ್ಡಿ ವಸೂಲಿ ಮಾಡಿದ್ದಕ್ಕೆ 4 ಪ್ರಕರಣ ದಾಖಲಾಗಿದೆ.
ಮೀಟರ್ ಬಡ್ಡಿ ವಸೂಲಿಗೆ ಕಿರುಕುಳ ವಿಚಾರವಾಗಿ 9 ಪ್ರತ್ಯೇಕ ಪ್ರಕರಣ ದಾಖಲು ಮಾಡಲಾಗಿದೆ.ಪ್ರಕರಣ ದಾಖಲಾದ ಬಳಿಕ ಇದುವರೆಗೂ ಒಟ್ಟು 39 ಜನರನ್ನ ಬಂಧಿಸಿಲಾಗಿದೆ ಎಂದು ಎಸ್.ಪಿ ಎಂ ನಾರಾಯಣ್ ಮಾಹಿತಿ ನೀಡಿದ್ದಾರೆ.