Karwar :ಆಧಿತ್ಯ ಬಿರ್ಲಾ ಕಾರ್ಖಾನೆಯಲ್ಲಿ ಕ್ಲೋರಿನ್ ಲೀಕ್ ಹತ್ತಕ್ಕೂ ಹೆಚ್ಚು ಜನ ಅಸ್ವಸ್ಥ.
ಕಾರವಾರ :- ಕ್ಲೋರಿನ್ ಸೋರಿಕೆಯಾಗಿ ಕಾರ್ಖಾನೆಯ ಹತ್ತಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾ ದಲ್ಲಿನ ಆದಿತ್ಯ ಬಿರ್ಲ ಕಂಪನಿಯ ಗ್ರಾಸಿಂ ಇಂಡಸ್ಟ್ರೀಸ್ ನಲ್ಲಿ ಮಧ್ಯಾಹ್ನ ನಡೆದಿದೆ.
03:14 PM Jan 11, 2025 IST | ಶುಭಸಾಗರ್
ಕಾರವಾರ :- ಕ್ಲೋರಿನ್ ಸೋರಿಕೆಯಾಗಿ ಕಾರ್ಖಾನೆಯ ಹತ್ತಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥರಾದ ಘಟನೆ
Advertisement
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾ ದಲ್ಲಿನ ಆದಿತ್ಯ ಬಿರ್ಲ ಕಂಪನಿಯ ಗ್ರಾಸಿಂ ಇಂಡಸ್ಟ್ರೀಸ್ ನಲ್ಲಿ ಮಧ್ಯಾಹ್ನ ನಡೆದಿದೆ.

ಮಧ್ಯಾಹ್ನದ ವೇಳೆ ಇಂಡಸ್ಟ್ರೀಸ್ ನಲ್ಲಿ ಕ್ಲೋರಿನ್ (chlorine)ಸ್ಟೋರ್ ನಲ್ಲಿ ಲೀಕ್ ಆಗಿದ್ದು ಅಲ್ಲಿ ಕಾರ್ಯನಿರ್ವಹಿಸುತಿದ್ದ ಹಲವು ಕಾರ್ಮಿಕರು ಉಸಿರಾಡಲಾಗದೇ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದು ಕೆಲವರ ಸ್ಥಿತಿ ಚಿಂತಾಜನಕವಿದೆ.
ಇದನ್ನೂ ಓದಿ:-Karwar ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಔಷಧ ಕಳ್ಳತನ! ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ವೈದ್ಯನ ಔಷಧ ರಹಸ್ಯ
ಸಧ್ಯ ಕ್ಲೋರಿನ್ ಸೋರಿಕೆಯಿಂದ ಅಸ್ವಸ್ಥರಾದ ಕಾರ್ಮಿಕರನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗುದ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವು ದಿನದ ಹಿಂದೆ ಕ್ಲೋರಿನ್ ಲೀಕ್ ಆಗಿ ಓರ್ವ ಕಾರ್ಮಿಕ ಸಹ ಮೃತಪಟ್ಟಿದ್ದನು.
Advertisement