For the best experience, open
https://m.kannadavani.news
on your mobile browser.
Advertisement

KARWAR |ಗ್ರಾಹಕನಬಗ್ಗೆ ನಿರ್ಲಕ್ಷ SBI Bank ಗೆ ದಂಡ ವಿಧಿಸಿದ ಕೋರ್ಟ್.

ಕಾರವಾರ :- ನಿಗದಿ ಸಮಯದಲ್ಲಿ ಪಿಪಿಎಫ್ ಹಣವನ್ನು ( public provident fund account) ಕಟ್ಟಿದರೂ ರಿನಿವಲ್ ಮಾಡದೇ ಹಾಗೂ ಮಾಹಿತಿಯನ್ನು ಸಹ ನೀಡದೇ ಕಾರವಾರದ SBI ಬ್ಯಾಂಕ್
07:34 PM Sep 17, 2024 IST | ಶುಭಸಾಗರ್
karwar  ಗ್ರಾಹಕನಬಗ್ಗೆ ನಿರ್ಲಕ್ಷ sbi bank ಗೆ ದಂಡ ವಿಧಿಸಿದ ಕೋರ್ಟ್

ಕಾರವಾರ :- ನಿಗದಿ ಸಮಯದಲ್ಲಿ ಪಿಪಿಎಫ್ ಹಣವನ್ನು ( public provident fund account) ಕಟ್ಟಿದರೂ ರಿನಿವಲ್ ಮಾಡದೇ ಹಾಗೂ ಮಾಹಿತಿಯನ್ನು ಸಹ ನೀಡದೇ ಕಾರವಾರದ SBI ಬ್ಯಾಂಕ್ ಗ್ರಾಹಕನನ್ನು ನಿರ್ಲಕ್ಷಿಸಿಸ ಕಾರಣ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ನ್ಯಾಯಾಲಯವು ಕಾರವಾರದ SBI ಬ್ಯಾಂಕಿಗೆ 17 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

Advertisement

ಏನಿದು ಪ್ರಕರಣ.

ಕಾರವಾರದ ಸಂಜಯ್ ಎಸ್. ಶಾನಭಾಗ್ ಎಂಬುವವರು ಕಾರವಾರ ಶಾಖೆಯ SBI ಬ್ಯಾಂಕ್ ನಲ್ಲಿ 15-03-2019 ರಲ್ಲಿ PPF ಖಾತೆಯನ್ನು ತೆರೆದಿದ್ದರು.
31-3-2021 ರಂದು ರಿನೀವಲ್ ಮಾಡಲು ಕಡೆಯ ದಿನವಾಗಿದ್ದು 31-3-2021 ರಲ್ಲಿ ರಿನಿವಲ್ ಹಣವನ್ನು ಬ್ಯಾಂಕ್ ಖಾತೆಗೆ ಕಟ್ಟಿದ್ದರು. ಆದರೇ PPF ಖಾತೆಗೆ ಹಣ ಜಮಾಗದೇ ಹಾಗೆಯೇ ಉಳಿದಿತ್ತು. ಈ ಬಗ್ಗೆ ಗ್ರಾಹಕ ಸಂಜಯ್ ಎಸ್. ಶಾನಭಾಗ್ ರವರಿಗೆ ಬ್ಯಾಂಕ್ ನಿಂದ ಅವರ ನೊಂದಾಯಿತ ದೂರವಾಣಿಗೆ ಯಾವುದೇ ಮೆಸೇಜ್ ಆಗಲಿ ,ಲಿಖಿತ ಅಂಚೆಯಾಗಲಿ ನೀಡದೇ ಬ್ಯಾಂಕ್ ನಿರ್ಲಕ್ಷ ವಹಿಸಿತ್ತು.

ಹೀಗಾಗಿ ತಡವಾಗಿ ಮಾಹಿತಿ ದೊರೆತಿದ್ದರಿಂದ 4-6-2022 ರಂದು ರಿನಿವಲ್ ಮಾಡಲು ಅರ್ಜಿ ನೀಡಿದ್ದು ಈ ಸಂದರ್ಭದಲ್ಲಿ ಬ್ಯಾಂಕ್ ನಲ್ಲಿ ತಿರಸ್ಕರಿಸಿದ್ದಾರೆ.

ಇದನ್ನೂ ಓದಿ:-Karwar|ಗಣೇಶನ ದುಡ್ಡಿಗಾಗಿ ಬಡಿದಾಡಿಕೊಂಡ ಸಹೋದರರು| ಸಾವಿನಲ್ಲಿ ಅಂತ್ಯ

ನಂತರ ಇವರು ಇದನ್ನು ಪ್ರಶ್ನಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ನ್ಯಾಯಾಲಯದ ಮುಂದೆ ದಾವೆ ಹೂಡಿದ್ದು ,ತಾವೇ ಸ್ವತಹ ವ್ಯಾಜ್ಯ ದ ವಕಾಲತ್ತು ವಹಿಸಿ SBI Bank ವಿರುದ್ಧ ಗೆಲುವು ಕಂಡಿದ್ದಾರೆ.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ನ್ಯಾಯಾಧೀಶರಾದ ಡಾ.ಮಂಜುನಾಥ್ ಎಂ ಬೊಮ್ಮನಕಟ್ಟಿ ರವರು ದೂರುದಾರರಿಗೆ 10 ಸಾವಿರ ಪರಿಹಾರ 2 ಸಾವಿರ ಕರ್ಚು ಹಾಗೂ 5 ಸಾವಿರ ದಂಡ ಕಟ್ಟಲು SBI ಬ್ಯಾಂಕ್ ಗೆ ಆದೇಶ ನೀಡಿದ್ದಾರೆ.

Uttrakannda karwar Gilani festival offers

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ