ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karnataka:ಇನ್ಸುರೆನ್ಸ್ ಹಣಕ್ಕಾಗಿ ಕಾರವಾರ ಸೈಬರ್ ಕ್ರೈಂ ಡಿ.ವೈ.ಎಸ್.ಪಿ ಅಧಿಕಾರ ದುರುಪಯೋಗ- ಪೊಲೀಸ್ ಮಾಹಾನಿರ್ದೇಶಕರಿಗೆ ದೂರು

Karnataka:ಇನ್ಸುರೆನ್ಸ್ ಹಣಕ್ಕಾಗಿ ಕಾರವಾರ ಸೈಬರ್ ಕ್ರೈಂ ಡಿ.ವೈ.ಎಸ್.ಪಿ ಅಧಿಕಾರ ದುರುಪಯೋಗ- ಪೊಲೀಸ್ ಮಾಹಾನಿರ್ದೇಶಕರಿಗೆ ದೂರು
10:55 AM Feb 20, 2025 IST | ಶುಭಸಾಗರ್

Karnataka:ಇನ್ಸುರೆನ್ಸ್ ಹಣಕ್ಕಾಗಿ ಕಾರವಾರ ಸೈಬರ್ ಕ್ರೈಂ ಡಿ.ವೈ.ಎಸ್.ಪಿ ಅಧಿಕಾರ ದುರುಪಯೋಗ- ಪೊಲೀಸ್ ಮಾಹಾನಿರ್ದೇಶಕರಿಗೆ ದೂರು

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

 ಕಾರವಾರ:-ಇತ್ತೀಚಿಗಷ್ಟೆ ಕೌಟುಂಬಿಕ ವಿವಾದದಲ್ಲಿ ಸದ್ದು ಮಾಡಿದ್ದ ಕಾರವಾರದ(karwar) ಸೈಬರ್ ಕ್ರೈಮ್ ವಿಭಾಗದ ಡಿ.ವೈ.ಎಸ್.ಪಿ ಅಶ್ವಿನಿ .ಬಿ ವಿರುದ್ಧ ಇದೀಗ ಅಧಿಕಾರ ದುರುಪಯೋಗ ,ಇನ್ಸುರೆನ್ಸ್ ಕಂಪನಿಗೆ ವಂಚನೆ,ಸುಳ್ಳು ಪ್ರಕರಣ ದಾಖಲಿಸಿರುವ ಕುರಿತು ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಲಾಗಿದೆ.

ಇದನ್ನೂ ಓದಿ:-Ankola police ಕಾರ್ಯಾಚರಣೆ:ಬೇಲಿಕೇರಿಯಲ್ಲಿ ಮಹಿಳೆಗೆ ಬಲವಂತವಾಗಿ ವೇಷ್ಯಾವಾಟಿಕೆ ದಂಧೆಗೆ ತೊಡಗಿಸಿದವರ ಬಂಧನ

 ಕಾರವಾರದ (karwar) ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯ್ಕ ಎಂಬುವವರು ದೂರು ನೀಡಿದವರಾಗಿದ್ದು ಸೈಬರ್ ಕ್ರೈಂ ವಿಭಾಗದ ಡಿವೈಎಸ್‌ಪಿ ಅಶ್ವಿನಿ ಬಿ ಅವರ ಕುಟುಂಬದವರು ಚಲಿಸುತ್ತಿದ್ದ ಕಾರು ಮುಂಡಗೋಡದಲ್ಲಿ ಅಪಘಾತವಾಗಿದೆ.

Advertisement

ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದರೂ ಟಾಟಾ ಎಸ್ ವಾಹನ ಕಾರಿಗೆ ಗುದ್ದಿರುವ ಬಗ್ಗೆ ಪೊಲೀಸ್ ಪ್ರಕರಣ ದಾಖಲಿಸಿರುವ ಬಗ್ಗೆ ಪೊಲೀಸ್‌ ಮಹಾನಿರ್ದೇಶಕರಿಗೆ ಇದೀಗ ದೂರು ಸಲ್ಲಿಕೆಯಾಗಿದೆ.

Astrology advertisement

ಸಾಪ್ಟವೇ‌ರ್ ಇಂಜಿನಿಯರ್ ಆಗಿರುವ ಅಶ್ವಿನಿ ಬಿ ಅವರ ಪತಿ ಪ್ರವೀಣಕುಮಾರ ಅವರು ಜನವರಿ 18ರಂದು ಮುಂಡಗೋಡು ಟಿಬೇಟಿಯನ್ ಕಾಲೋನಿಯ ಗೋಶಾಲೆಯ ಬಳಿ ಕಾರು ಚಲಾಯಿಸುತ್ತಿದ್ದಾಗ ಹಜರತ್‌ ಅಲಿ ಚೋಪಿದಾರ್ ಎಂಬಾತ ಟಾಟಾ ಎಸ್ ವಾಹನ ಗುದ್ದಿದ ಬಗ್ಗೆ  ಅಶ್ವಿನಿ ಪತಿ ಪ್ರವೀಣಕುಮಾರ ಅವರು ಮುಂಡಗೋಡು ಠಾಣೆ ಪೊಲೀಸರಿಗೆ ಘಟನೆ ನಡೆದು ಎರಡು ದಿನದ ನಂತರ ದೂರು ನೀಡಿದ್ದಾರೆ.

ದೂರು ಪ್ರತಿ ಹಾಗೂ ಇನ್ಸುರೆನ್ಸ್ ಮುಗಿದ ಪ್ರತಿ.

ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸ್‌ (police) ಸಿಬ್ಬಂದಿ ಚಂದ್ರಕಾಂತ ರಾತೋಡ್‌ ತನಿಖೆ ನಡೆಸುತ್ತಿದ್ದಾರೆ. ಆದರೆ, ಹಜರತ್‌ ಅಲಿ ಹಾಗೂ ಈ ಅಪಘಾತಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಪೊಲೀಸ್‌ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ವಿಮಾ ಪರಿಹಾರ ಪಡೆಯುವುದಕ್ಕಾಗಿ ಅಮಾಯಕನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿರುವ ಬಗ್ಗೆ ಅವರು ದೂರಿದ್ದಾರೆ.

`ಆ ದಿನ ಅಶ್ವಿನಿ ಅವರ ತಂದೆ ಕಾರು ಚಲಾಯಿಸುತ್ತಿದ್ದರು. ಅವರು ಮರಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೆ ಒಳಗಾಗಿದ್ದಾರೆ. ಆ ಕಾರಿನ ವಿಮೆ ಮಾರ್ಚ 2023ರಲ್ಲಿಯೇ ಮುಕ್ತಾಯಗೊಂಡಿದ್ದು, ಅಪಘಾತದ ವಿಮೆ ಪರಿಹಾರ ಸಿಗುವ ಹಾಗಿರಲಿಲ್ಲ.

ಹೀಗಾಗಿ ಟಾಟಾಎಸ್ ವಾಹನದ ವಿಮೆ ಪಡೆಯುವುದಕ್ಕಾಗಿ ತಪ್ಪು ಮಾಡದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಾಧವ ನಾಯಕ ದೂರಿದ್ದಾರೆ. `ಡಿವೈಎಸ್‌ಪಿ ಅಶ್ವಿನಿ ಅವರು ಅಧೀನ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಇದರಿಂದ ಇನ್ಸುರೆನ್ಸ್ ಕಂಪನಿ ಹಾಗೂ ಸರ್ಕಾರಕ್ಕೆ ಮೋಸವಾಗಲಿದ್ದು, ತಪ್ಪು ಮಾಡಿದ ಎಲ್ಲಾ ಅಧಿಕಾರಿಗಳಿಗೂ ಶಿಕ್ಷೆಯಾಗಬೇಕು ಎಂದು ಪೊಲೀಸ್ ಮಹಾನಿರ್ದೇಶಕರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

 

Advertisement
Tags :
AccidentAshwini .BCasecorruptionCyberCrimeDYSP KarwarInsuranceFraudKarwarPoliceComplaintPoliceMisuse
Advertisement
Next Article
Advertisement