For the best experience, open
https://m.kannadavani.news
on your mobile browser.
Advertisement

Sirsi|ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ:ಲೈಸೆನ್ಸ್ ರದ್ದು!

Sirsi, Uttara Kannada, police conducted a special drive against motorists using mobile phones while driving. Six cases were registered under Section 184 of the Motor Vehicles Act, with fines of ₹9,000 each. Authorities have recommended driving license cancellation for violators.
08:05 PM Oct 27, 2025 IST | ಶುಭಸಾಗರ್
Sirsi, Uttara Kannada, police conducted a special drive against motorists using mobile phones while driving. Six cases were registered under Section 184 of the Motor Vehicles Act, with fines of ₹9,000 each. Authorities have recommended driving license cancellation for violators.
sirsi ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಲೈಸೆನ್ಸ್ ರದ್ದು

Sirsi|ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ:ಲೈಸೆನ್ಸ್ ರದ್ದು!

ಕಾರವಾರ /ಶಿರಸಿ (27 october 2025):- ಇತ್ತಿಚಿನ ದಿನಗಳಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುವ ವೇಳೆ ರಸ್ತೆ ಅಪಘಾತಕ್ಕೆ ಒಳಗಾಗಿ ಸಾವು ನೋವುಗಳಿಗೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಿದೆ.

Advertisement

Sirsi| ಶಿರಸಿ ದೇವಸ್ಥಾನದ ಕಳ್ಳರ ಬಂಧನ | ಲಕ್ಷಾಂತರ ಮೌಲ್ಯದ ಸ್ವತ್ತುಗಳು ವಶ.

ಈ ಹಿನ್ನಲೆಯಲ್ಲಿ ಜನರಲ್ಲಿ ಜಾಗೃತಿ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯ ಶಿರಸಿ‌ (sirsi)ನಗರ ಠಾಣೆಯ ಪೊಲೀಸರು ಇಂದು ವಿಶೇಷ ಡ್ರೈವ್ ಹಮ್ಮಿಕೊಂಡು ಮೊಬೈಲ್ ನಲ್ಲಿ ಮಾತನಾಡುತ್ತಾ ಅಪಾಯಕಾರಿಯಾಗಿ ವಾಹನ ಚಲಾಯಿಸುವ ಸವಾರರ ಮೇಲೆ ಭಾರತೀಯ ಮೋಟಾರು ವಾಹನ ಕಾಯ್ದೆ ಕಲಂ 184 ಅಡಿ ಒಟ್ಟು ಆರು ಪ್ರಕರಣಗಳನ್ನು ದಾಖಲಿಸಿ 9000/- ರೂ ದಂಡ ವಿಧಿಸಿದ್ದಾರೆ .

traffic police guidelines: ಇನ್ನುಮುಂದೆ ಪೊಲೀಸರು ವಾಹನವನ್ನು ದಿಢೀರನೆ ಅಡ್ಡಗಟ್ಟುವಂತಿಲ್ಲ.

ಇದರ ಜೊತೆಗೆ ಸಂಚಾರ ನಿಯಮ ಉಲ್ಲಂಘಿಸಿದ ಸವಾರರ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಶಿರಸಿರವರಿಗೆ ಪತ್ರ ಬರೆದಿದ್ದು ,ಡ್ರೈವಿಂಗ್ ಲೈಸೆನ್ಸ್ ರದ್ದಾಗಲಿದೆ.

ಕಾರ್ಯಾಚರಣೆಯಲ್ಲಿ ಶಿರಸಿ ಉಪವಿಭಾಗದ ಡಿಎಸ್ಪಿ ಗೀತಾ ಪಾಟೀಲ್ ಮತ್ತು ವೃತ್ತ ನಿರೀಕ್ಷಕರಾದ  ಶಶಿಕಾಂತ ವರ್ಮಾರವರ ಮಾರ್ಗದರ್ಶನದಲ್ಲಿ ಶಿರಸಿ ನಗರ ಠಾಣೆಯ ಪಿಎಸ್ಐ ನಾಗಪ್ಪ ಬಿ ರವರ ನೇತೃತ್ವದಲ್ಲಿ  ಎಎಸ್ಐ ರವರಾದ ನೆಲ್ಸನ್ ಮೆಂಥಾರೋ,ಸುರೇಶ ಗೊಂಜಾಳಿ ಸಿಬ್ಬಂದಿಗಳು ಪಾಲ್ಗೊಂಡು ದಂಡ ವಿಧಿಸಿದರು.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ