For the best experience, open
https://m.kannadavani.news
on your mobile browser.
Advertisement

Karwar : ಮಾಕ್ ಡ್ರಿಲ್ ಪ್ರಥಮಬಾರಿಗೆ ಫೈರ್ ಬೋಟ್ ಬಳಕೆ ,ಏನಿದು ವಿಶೇಷ ಗೊತ್ತಾ?

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದ ಮಾಕ್ ಡ್ರಿಲ್ ನಲ್ಲಿ ಇದೇ ಮೊದಲಬಾರಿಗೆ ಫೈರ್ ಬೋಟ್ (ಫೈರ್ ರೋಬಟ್ )ನನ್ನು ಬಳಕೆ ಮಾಡಲಾಗಿದೆ.
09:13 PM May 12, 2025 IST | ಶುಭಸಾಗರ್
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದ ಮಾಕ್ ಡ್ರಿಲ್ ನಲ್ಲಿ ಇದೇ ಮೊದಲಬಾರಿಗೆ ಫೈರ್ ಬೋಟ್ (ಫೈರ್ ರೋಬಟ್ )ನನ್ನು ಬಳಕೆ ಮಾಡಲಾಗಿದೆ.

Karwar : ಮಾಕ್ ಡ್ರಿಲ್ ಪ್ರಥಮಬಾರಿಗೆ ಫೈರ್ ಬೋಟ್ ಬಳಕೆ ,ಏನಿದು ವಿಶೇಷ ಗೊತ್ತಾ?

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ (karwar) ನಡೆದ ಮಾಕ್ ಡ್ರಿಲ್ ನಲ್ಲಿ ಇದೇ ಮೊದಲಬಾರಿಗೆ ಫೈರ್ ಬೋಟ್  (ಫೈರ್ ರೋಬಟ್ )ನನ್ನು ಬಳಕೆ ಮಾಡಲಾಗಿದೆ.

ನೌಕಾದಳದ ಸುಪರ್ಥಿಯಲ್ಲಿ ಇರುವ ಈ ಫೈರ್ ರೋಬೋಟ್ ಇದೇ ಮೊದಲಬಾರಿಗೆ ಮುದುಗಾದ ನೇವಿ ಸಿವಿಲಿಯನ್ ಕಾಲೋನಿಯಲ್ಲಿ ನಡೆದ ಬೆಂಕಿ ಅನಾಹುತವನ್ನು ತಡೆಯಲು ಈ ಫೈರ್ ರೋಬೋಟ್ ಬಳಕೆ ಮಾಡಲಾಗಿದ್ದು ಎಲ್ಲರ ಗಮನ ಸೆಳೆದಿದೆ.

ಇದನ್ನೂ ಓದಿ:-Uttara kannda ಮೇ 12 ರಂದು ಮಾಕ್ ಡ್ರಿಲ್ ಎಲ್ಲೆಲ್ಲಿ ನಡೆಯುತ್ತೆ ಗೊತ್ತಾ?

ಇದರ ಉಸ್ತುವಾರಿ ಹೊತ್ತಿರುವ ನೌಕಾದಳದ ಫೈರ್ ಟೇಶನ್ ಆಫೀಸರ್ ಸುಭಾಷ್ ನಾಯ್ಕ ರವರು ನೇವಿ ಸಿವಿಲಿಯನ್ ಕಾಲೋನಿಯಲ್ಲಿ ಇದರ ಪ್ರಾತಕ್ಷಿಕೆ ನೀಡಿದರು.

Fire robot

ಸ್ವದೇಶಿ ನಿರ್ಮಿತ ಟಾಟಾ ಕಂಪನಿಯ ಈ ಫೈರ್ ಬೋಟ್ (ಫೈರ್ ರೋಬೋಟ್ ) ಇಂಧನ ರಹಿತವಾಗಿ ಕಾರ್ಯ ನಿರ್ವಹಿಸುತ್ತದೆ. 450 mah ಸಾಮರ್ಥ್ಯ ಹೊಂದಿದ ಬ್ಯಾಟರಿ ಚಾಲಿತ ,ಅಗ್ನಿ ನಿರೋಧಕ ಉಪಕರಣ ಇದಾಗಿದ್ದು ನಾಲ್ಕು ತಾಸುಗಳು ಕಾರ್ಯ ನಿರ್ವಹಿಸಲಿದೆ. ಈ ಯಂತ್ರದಲ್ಲಿ ಥರ್ಮಲ್ ಸ್ಕ್ಯಾನರ್ ಕ್ಯಾಮರ ಇದ್ದು ರಿಮೋಟ್ ಚಾಲಿತವಾಗಿದ್ದು , 150 ಮೀಟರ್ ವರೆಗೆ ತೆರಳುವ ಸಾಮರ್ಥ್ಯ ಹೊಂದಿದೆ.

ನಾಲ್ಕರಿಂದ ಐದು ಮೀಟರ್ ವಾಟರ್ ಸ್ಪ್ರೇ ಮಾಡುತ್ತದೆ.190 ಡಿಗ್ರಿ ತಿರುಗುವ ಸಾಮರ್ಥ್ಯ ಹೊಂದಿದ್ದು , ನೀರನ್ನು 10 ಮೀಟರ್ ವರೆಗೆ ಜಟ್ ಹಾಗೂ ಸ್ಪ್ರೇ ರೀತಿಯಲ್ಲಿ ಮೇಲಕ್ಕೆ ಚಿಮ್ಮಿಸುವ ಸಾಮರ್ಥ್ಯ ಇದಕ್ಕಿದೆ.

ಲಿಕ್ವಿಡ್  ,ನೀರು ಬಳಸಿ ಫೋಮ್ ಮಾಡಿ ನೀರು ಸ್ಪ್ರೇ ಮಾಡುತ್ತದೆ. ಈ ಫೈರ್ ಬೋಟ್ ನನ್ನು ಜನರಲ್,ಆಯಿಲ್,ಮೆಟಲ್ ಫೈರ್ ಆದಾಗ  ಬಳಕೆ ಮಾಡಬಹುದಾಗಿದೆ.

ಈ ಫೈರ್ ಬೋಟ್ ನನ್ನು ಅಗ್ನಿ ದುರಂತ ಸಂಭವಿಸಿದಾಗ ಎಲ್ಲಿ ಮನುಷ್ಯ ತೆರಳಲು ಸಾಧ್ಯವಿಲ್ಲವೋ ಅಂತ ಪ್ರದೇಶಗಳಿಗೆ ಇದನ್ನು ಕಳುಹಿಸಬಹುದು. ಇದಲ್ಲದೇ ನೌಕೆ, ಅಣು ಸ್ಥಾವರ ,ಶಸ್ತ್ರಾಗಾರದಲ್ಲಿ ಅಗ್ನಿ ದುರಂತ ನಡೆದಾಗ ಇದನ್ನು ಬಳಸಲಾಗುತ್ತದೆ. ಇದು ಚಿಕ್ಕ ಮೆಟ್ಟಲುಗಳನ್ನು ಸಹ ಹತ್ತೆ ಹೋಗಿವ ಸಾಮರ್ಥ ಹೊಂದಿದ್ದು ಕಾರವಾರದಲ್ಲಿ ಈ ಫೈರ್ ಬೋಟ್ 8 ಕ್ಕೂ ಹೆಚ್ಚು ಇದ್ದು ಶೀಘ್ರದಲ್ಲಿ ಅಗ್ನಿಶಾಮಕ ದಳಕ್ಕೂ ಈ ಫೈರ್ ಬೋಟ್ (ಫೈರ್ ರೋಬೋಟ್ )ಬಳಕೆ ಮಾಡುವ ಸಾಧ್ಯತೆಗಳಿವೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ