Karwar ಅಂದು ಪೇಪರ್ ಮಾರುವ ಹುಡುಗ ಇಂದು ಯುವ ಕಾಂಗ್ರೆಸ್ ಅಧ್ಯಕ್ಷ
Karwar ಅಂದು ಪೇಪರ್ ಮಾರುವ ಹುಡುಗ ಇಂದು ಯುವ ಕಾಂಗ್ರೆಸ್ ಅಧ್ಯಕ್ಷ.

ಕಾರವಾರ :- ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಯುವ ಕಾಂಗ್ರೆಸ್ (congress) ಚುನಾವಣೆಯಲ್ಲಿ ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದ ಯುವ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನೂತನ ಜೈನ್ ಅವರು ತಮ್ಮ ಪ್ರತಿಸ್ಪರ್ಧಿ ಸುಂದರ್ ಕಾರ್ವಿ ವಿರುದ್ಧ ಭರ್ಜರಿ ಜಯ ಗಳಿಸಿದ್ದಾರೆ.
ನೂತನ ಜೈನ್ ಅವರು ಕಾರವಾರ ನಗರದ ಮಾರುತಿಗಲ್ಲಿ ಯಲ್ಲಿ ಹುಟ್ಟಿ ಚಿಕ್ಕ ವಯಸ್ಸಿನಲ್ಲಿ ದಿನಪತ್ರಿಕೆ ಸರಬರಾಜು ಮಾಡುತ್ತಾ ತಮ್ಮ ವಿದ್ಯಾಭ್ಯಾಸ ಮುಗಿಸಿಕೊಂಡುವರು , ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಇವರು ತಮ್ಮ ಕುಟುಂಬದ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಕಷ್ಟದಲ್ಲಿ ಬೆಳೆದು ಈ ಮಟ್ಟಕ್ಕೆ ಬಂದವರು ನಂತರದಲ್ಲಿ ಸಣ್ಣ ಅಂಗಡಿಯಲ್ಲಿ ದಿನ ಪತ್ರಿಕೆ ಮಾರುತ್ತ ತನ್ನ ಕುಟುಂಬವನ್ನು ಸರಿದೂಗಿಸಿಕೊಂಡು ಹೋಗುತ್ತ ಜನಪರ ಕಾಳಜಿಯತ್ತ ಮುಖಮಾಡಿದ ಇವರು ತಮ್ಮ ಬಳಿ ಬಂದ ನೊಂದವರಿಗೆ ತಮ್ಮಲ್ಲಿ ಆದ ಸಹಾಯವನ್ನು ಮಾಡುತ್ತಾ ಬಂದವರು.

ಅಪಾರ ಗೆಳೆಯರ ಬಳಗ ಹೊಂದಿದ ಇವರು ಅಗಲಿದ ತಮ್ಮ ಆಪ್ತ ಗೆಳೆಯನ ಹೆಸರಿನಲ್ಲಿ ಪ್ರದೀಪ್ ಯುತ್ ಕ್ಲಬ್ ಮತ್ತು ಪ್ರದೀಪ್ ಯೂತ್ ಬ್ಲಡ್ ಗ್ರೂಪ್ ಎಂಬ ಸಂಘ ಸ್ಥಾಪನೆ ಮಾಡಿದರು . ಈ ಸಂಘದ ಅಧ್ಯಕ್ಷರಾಗಿ ಗೆಳೆಯರು ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ನೂತನ, 2019 ಪ್ರವಾಹ ಸಂದರ್ಭ ಮತ್ತು covid ಸಂದರ್ಭಲ್ಲಿ ಕೊವಿಡ್ ವಾರಿಯರ್ಸ್ ಗೆ ಸಹಾಯ ಮಾಡಿ ತಮ್ಮ ಛಾಪು ಮೂಡಿಸಿದ್ದಾರೆ. ಹಾಗೂ ಸಾಗರ ಮಾಲಾ ಯೋಜನೆಯ ವಿರೋಧಿ ಹೋರಾಟದಲ್ಲಿ ಮಂಚುಣಿಯಲ್ಲಿ ಇದ್ದು ಹೋರಾಟದಲ್ಲಿ ಭಾಗಿಯಾದವರ ಹಾಗೆ ಜಿಲ್ಲೆಯ ಅನೇಕರಿಗೆ ರಕ್ತದ ವ್ಯವಸ್ಥೆ ಮಾಡಿಸಿ ಸ್ವತ ತಾವು ಸಹ 28 ಬಾರಿ ರಕ್ತ ದಾನ ಮಾಡಿ ಯುವಕರಿಗೆ ಮಾದರಿಯಾಗಿದ್ದಾರೆ.
ಇದನ್ನೂ ಓದಿ:-Karwar ಇನ್ನುಮುಂದೆ ಗೋ ಹತ್ಯೆ ಏನಾದ್ರೂ ನಡೆದ್ರೆ ಸರ್ಕಲ್ ನಲ್ಲಿ ನಿಲ್ಲಿಸಿ ಗುಂಡ ಹಾಕ್ತೆವಿ-ಸಚಿವ ಮಂಕಾಳು ವೈದ್ಯ
ಶಾಸಕ ಸತೀಶ್ ಸೈಲ್ ಅವರ ಕೆಲಸಕ್ಕೆ ಮೊದಲಿನಿಂದ ಅಭಿಮಾನಿಯಾದ ನೂತನ ಅವರು ಸತೀಶ್ ಸೈಲ್ ಅವರ ನಾಯಕತ್ವಕ್ಕೆ ಮೆಚ್ಚಿ ಕಾಂಗ್ರೆಸ್ ಸೇರ್ಪಡೆಯಾದರು ನಂತರದ ದಿನಗಳಲ್ಲಿ ನಾಗರಾಜ್ ಗೌಡ ಅವರ ಅಧ್ಯಕ್ಷತೆಯಲ್ಲಿ ಯುವ ಕಾಂಗ್ರೇಸ್ ಕಾರ್ಯದಕ್ಷ್ಯಾಗಿ , ಅಲಿ ಖುರೇಷಿ ಅವರ ಅಧ್ಯಕ್ಷತೆಯಲ್ಲಿ ಯುವ ಕಾಂಗ್ರೇಸ್ ಉಪಾಧ್ಯಕ್ಷ ರಾಗಿ ಕಾರ್ಯ ನಿರ್ವಹಿಸಿದ ನೂತನ ಜೈನ್ ಅವರು ಈ ಬಾರಿ ನಡೆದ ಯುವ ಕಾಂಗ್ರೆಸ ಚುನಾವಣೆಯಲ್ಲಿ ಸ್ಪರ್ಧಿಸಿ ತಮ್ಮ ನಿಕಟ ಪ್ರತಿ ಸ್ಪರ್ಧಿ ಯ ವಿರುದ್ಧ 758 ಮತಗಳ ಅಂತರದಿಂದ ಗೆದ್ದು ಅಧ್ಯಕ್ಷ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ