Karwar ಕರ್ತವ್ಯ ಲೋಪ :ಸೇವೆಯಿಂದ ಸರ್ಕಾರಿ ಗುತ್ತಿಗೆ ವೈದ್ಯ ಅಮಾನತು.
Karwar ಕರ್ತವ್ಯ ಲೋಪ :ಸೇವೆಯಿಂದ ಸರ್ಕಾರಿ ಗುತ್ತಿಗೆ ವೈದ್ಯ ಅಮಾನತು.

ಕಾರವಾರ:- ಕಾರವಾರದ (karwar) ಆಯುಷ್ಯ ಇಲಾಖೆಯ ಆಯುರ್ವೇದ ಜಿಲ್ಲಾ ಆಸ್ಪತ್ರೆಯಲ್ಲಿ ಅನುಮತಿ ಇಲ್ಲದೇ ಔಷಧವನ್ನು ತೆಗೆದುಕೊಂಡು ಹೋದ ಆರೋಪ ಎದುರಿಸುತಿದ್ದ ವೈದ್ಯ (Doctor) ಡಾ.ಸಂಗಮೇಶ್ ಪರಂಡಿ ಇವರನ್ನು ಕರ್ತವ್ಯ ಲೋಪದಿಂದಾಗಿ ಸೇವೆಯದಲೇ ಅಮಾನತು ಮಾಡಿ ಜಿಲ್ಲಾ ಆಯುಷ್ ಸೊಸೈಟಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಯಾಗಿರು ಲಕ್ಷ್ಮಿಪ್ರಿಯಾ ಆದೇಶಿಸಿದ್ದಾರೆ.
2024 ರ ಡಿಸೆಂಬರ್ ನಲ್ಲಿ ಡಾ.ಸಂಗಮೇಶ್ ಆಸ್ಪತ್ರೆಯಲ್ಲಿ ಅನುಮತಿ ಇಲ್ಲದೇ ಕೆಲವು ಔಷಧಗಳನ್ನು ತೆಗೆದುಕೊಂಡು ಹೋಗಿದ್ದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಇದನ್ನೂ ಓದಿ:-Karwar ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಔಷಧ ಕಳ್ಳತನ! ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ವೈದ್ಯನ ಔಷಧ ರಹಸ್ಯ
ಇದಲ್ಲದೇ ಆಯುಷ್ಯ ಇಲಾಖೆ ಜಿಲ್ಲಾ ವೈದ್ಯರ ಮೇಲೆ ಆರೋಪ ಮಾಡಿದ್ದರು. ಈ ಕುರಿತು ವರದಿ ಸಲ್ಲಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳ ತಂಡ ತನಿಖೆ ನಡೆಸಿ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ರವರಿಗೆ ವರದಿ ಸಹ ಸಲ್ಲಿಸಿತ್ತು.
ಇನ್ನು ಈ ಕುರಿತು ಮಾಧ್ಯಮದಲ್ಲಿ ವರದಿ ಸಹ ಭಿತ್ತರವಾಗಿತ್ತು. ಈ ಎಲ್ಲಾ ವಿಷಯವನ್ನು ಪರಿಗಣಿಸಿದ ಆಯುಷ್ ಇಲಾಖೆ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತಿದ್ದ ಇವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಮಾಡಲಾವಿದೆ.
