ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karwar:ಅತ್ಯುತ್ತಮವಾದ ಹಣಕೊಡುವ ದೇವಸ್ಥಾನಗಳು ಮುಜರಾಯಿ ಸುಪರ್ಧಿಗೆ ಬರಬೇಕು-ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ !

ಕಾರವಾರ :- ಐತಿಹಾಸಿಕ ಸ್ಥಳದ ಹೆಸರನ್ನು ಯಾರು ಕೂಡ ಬದಲಿಸಬಾರದು,ಹೊಸ ಜಿಲ್ಲೆಯನ್ನು ಮಾಡುವುದಾದರೇ ಯಾವ ಹೆಸರನ್ನಾದರೂ ಇಡಲಿ, ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಎಂದೆ ಏಕೆ ಇಡಬೇಕು,
10:45 PM Jul 24, 2025 IST | ಶುಭಸಾಗರ್
ಕಾರವಾರ :- ಐತಿಹಾಸಿಕ ಸ್ಥಳದ ಹೆಸರನ್ನು ಯಾರು ಕೂಡ ಬದಲಿಸಬಾರದು,ಹೊಸ ಜಿಲ್ಲೆಯನ್ನು ಮಾಡುವುದಾದರೇ ಯಾವ ಹೆಸರನ್ನಾದರೂ ಇಡಲಿ, ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಎಂದೆ ಏಕೆ ಇಡಬೇಕು,

Karwar:ಅತ್ಯುತ್ತಮವಾದ ಹಣಕೊಡುವ ದೇವಸ್ಥಾನಗಳು ಮುಜರಾಯಿ ಸುಪರ್ಧಿಗೆ ಬರಬೇಕು-ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ !

Advertisement

ವಿಡಿಯೋ ಇಲ್ಲಿದೆ:-

ಕಾರವಾರ :- ಐತಿಹಾಸಿಕ ಸ್ಥಳದ ಹೆಸರನ್ನು ಯಾರು ಕೂಡ ಬದಲಿಸಬಾರದು,ಹೊಸ ಜಿಲ್ಲೆಯನ್ನು ಮಾಡುವುದಾದರೇ ಯಾವ ಹೆಸರನ್ನಾದರೂ ಇಡಲಿ,

Advertisement

ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಎಂದೆ ಏಕೆ  ಇಡಬೇಕು, ಬದಲಿಸುವುದಾದರೇ ತುಳುನಾಡು ಎಂದು ಬದಲಿಸಲಿ.ಕನ್ನಡ ಎಂದಿದ್ದಕ್ಕೆ ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಕಾಸರಗೋಡು ಕರ್ನಾಟಕದಿಂದ ಬೇರೆ ಆಯಿತು, ತುಳುನಾಡು ಎಂದು ಇಟ್ಟಿದ್ದರೇ ಕಾಸರಕೋಡು ಬೇರೆಯಾಗಿರುತ್ತಿರಲಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ. ಇಂದು ಕಾರವಾರದಲ್ಲಿ ಮಾತನಾಡಿದ ಅವರು ಮಂಗಳೂರು ಎಂದು ಹೆಸರಿಡುವ  ಬದಲು ತುಳುನಾಡು ಎಂದುಹೆಸರು ಇಡಬೇಕು ಎಂದರು. ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಧರ್ಮಸ್ಥಳ ಕ್ಷೇತ್ರವನ್ನು ಮುಜರಾಯಿ ಇಲಾಖೆಗೆ ಒಳಪಡಬೇಕು ಎಂಬುದು ನನ್ನ ಅಭಿಪ್ರಾಯ,ಕುಕ್ಕೆ ಸುಬ್ರಹ್ಮಣ್ಯ ಸರ್ಕಾರ ತನ್ನ ಅಧೀನಕ್ಕೆ ತೆಗೆದುಕೊಂಡಿತು, ಅದರಿಂದ ಬಂದ ಹಣವನ್ನ ಕುಕ್ಕೆ ಸುಬ್ರಹ್ಮಣ್ಯ ಅಭಿವೃದ್ಧಿ ಮಾಡಿತು .ಹಾಗಾಗಿ ಅತ್ಯುತ್ತಮವಾದ ಹಣಕೊಡುವ ದೇವಸ್ಥಾನವನ್ನು ಸರ್ಕಾರ ತನ್ನ ಕೈವಶ ಮಾಡಿಕೊಂಡು ಅದನ್ನು ಸಾಮಾಜಿಕ ಅಭಿವೃದ್ಧಿಗೆ ಬಳಸಿದರೇ ನಾನು ಅದರ ಪರ ನಿದ್ದೇನೆ ಎಂದರು‌.

ಇದನ್ನೂ ಓದಿ:-Karnataka:ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ವೃದ್ಧ.

ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಗಡಿ ನಾಡು ಉತ್ಸವ ಮಾಡಲಾಗುವುದು,ಕನ್ನಡ ಹೊರತು ಪಡಿಸಿ ಅನ್ಯ ಭಾಷಿಕರ ಸಂಖ್ಯೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿದೆ.ಬೇರೆ ರಾಜ್ಯಗಳಿಂದ ಉತ್ತರ ಕನ್ನಡ ಜಿಲ್ಲೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ.

36 ಗಂಟೆಯಲ್ಲಿ ಕನ್ನಡ ಕಲಿಯುವ ಯೋಜನೆ ರೂಪಿಸಿದ್ದೇವೆ. ಈಗಾಗಲೇ ಬೆಂಗಳೂರಿನಲ್ಲಿ 22 ಕಡೆ ಕನ್ನಡ ಕಲಿಕಾ ಕೇಂದ್ರ ಆರಂಭಿಸಿದ್ದೇವೆ.ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಕನ್ನಡದ ಐತಿಹಾಸಿಕ ಕುರುಹು ಇವೆ

 ಐತಿಹಾಸಿಕ ಸ್ಥಳಗಳ ಕುರಿತು ಸಾರ್ವಜನಿಕರಿಗೆ ತಿಳಿಯುವಂತೆ ಮಾಡುವ ನಿರ್ಧಾರ ಮಾಡಿದ್ದೇವೆ.

ಉತ್ತರ ಕನ್ನಡ  ಜಿಲ್ಲೆಯಲ್ಲಿ ಅಖಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವಾಗಿ  ಬಹಳ ವರ್ಷ ಕಳೆದಿದೆ,ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲೆಯಲ್ಲಿ ಮಾಡಲು ನಾವು ಆಗ್ರಹ ಮಾಡುತ್ತೇವೆ.

10 ನೇ ತರಗತಿಯ ಕನ್ನಡ ಭಾಷಾ ಪರೀಕ್ಷೆಯಲ್ಲಿ ಫೇಲಾದವರು ಮಂಡ್ಯ, ಮೈಸೂರು ಭಾಗದವರೆ ಹೆಚ್ಚು,ಉತ್ತರ ಕನ್ನಡ ಜಿಲ್ಲೆಯಲ್ಲಿ ಮನೆ ಮಾತು ಕನ್ನಡ ಇರದೆ ಇದ್ರು ಕನ್ನಡ ಭಾಷೆಯಲ್ಲಿ ಮಕ್ಕಳ ಪಾಸ್ ಆಗಿರುವ ಸಂಖ್ಯೆ ಹೆಚ್ಚಿದೆ. ರಾಜ್ಯದಲ್ಲಿ ಕನ್ನಡ ಲಿಪಿಯ ಫಾಂಟ್ ಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ‌ .ಎ.ಐ ತಂತ್ರಜ್ಞಾನದ ಅನ್ಯ ಭಾಷೆಯಿಂದ ಕನ್ನಡಕ್ಕೆ ಭಾಷಾಂತರದ ಆಪ್ ಸಹ ಅಭಿವೃದ್ಧಿಮಾಡಲಾಗುತಿದ್ದು ನವಂಬರ್ ತಿಂಗಳಲ್ಲಿ  ಬಿಡುಗಡೆ ಮಾಡುತ್ತೇವೆ.

ಬ್ಯಾಂಕ್ ಸಿಬ್ಬಂದಿಗಳು ಕನ್ನಡ ಮಾತನಾಡದಿರುವುದರಿಂದ ರಾಜ್ಯದಲ್ಲಿ 6 FIR ದಾಖಲುಮಾಡಲಾಗಿದೆ ಎಂದು ಅವರು ಹೇಳಿದರು.

Advertisement
Tags :
DarmasthalaKarnatakaKarwarMangalurmuzrai boardpurushotham belimaleRevenue templesThulunadu history
Advertisement
Next Article
Advertisement