Karwar Hospital | ಕುಸಿದ ಜಿಲ್ಲಾಸ್ಪತ್ರೆ ಹೊಸ ಕಟ್ಟಡದ ರೂಪಿಂಗ್ ಷೀಟ್!
Karwar Hospital | ಕುಸಿದ ಜಿಲ್ಲಾಸ್ಪತ್ರೆ ಹೊಸ ಕಟ್ಟಡದ ರೂಪಿಂಗ್ ಷೀಟ್!
ಕಾರವಾರ :-ಉತ್ತರ ಕನ್ನಡ ಜಿಲ್ಲೆಗೆ ಹೊಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಜನ ಹೋರಾಟ ಮಾಡಿದರು.ಆದರೇ 198.28 ಕೋಟಿ ವೆಚ್ಚದಲ್ಲಿ ಕಾರವಾರದ (karwar) ಕ್ರಿಮ್ಸ್ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಅದೀನದಲ್ಲಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಯಿತು.
ಇದು ನಿರ್ಮಾಣಗೊಂಡು ಎರಡು ವರ್ಷವಾದ್ರೂ ಉದ್ಘಾಟನೆ ಕಂಡಿರಲಿಲ್ಲ . ಇನ್ನು ಕಟ್ಟಡದಲ್ಲಿ ಹಲವು ಕಡೆ ಬಿರುಕು ಕಳೆಪೆ ಕಾಮಗಾರಿ ಮಾಡಲಾಗಿತ್ತು. ಹೋಗಾಗಿ ಕಟ್ಟಡ ನಿರ್ಮಾಣವಾಗಿ ಎರೆಡು ವರ್ಷಗಳು ಸಂದಿದ್ದರೂ ಕ್ರಿಮ್ಸ್ ನಿಂದ ಹಸ್ತಾಂತರವಾಗಿರಲಿಲ್ಲ.
Good News: ಕಾರವಾರದಲ್ಲಿ ನಾಳೆ ಉದ್ಘಾಟನೆಗೊಳ್ಳಲಿದೆ MedSquare Hospital | ಏನಿದರ ವಿಶೇಷ ಇಲ್ಲಿದೆ ವಿವರ
ಆದರೇ 1979 ರಲ್ಲಿ ನಿರ್ಮಾಣಗೊಂಡಿದ್ದ ಹಳೆಯ ಜಿಲ್ಲಾಸ್ಪತ್ರೆ ಶಿಥಿಲ ಗೊಂಡಿದ್ದು ಅನಿವಾರ್ಯವಾಗಿ ಹಳೆ ಕಟ್ಟಡದಿಂದ ಹೊಸ ಕಟ್ಡಡದ ಎರಡು ಮಹಡಿಗಳಿಗೆ ರೋಗಿಗಳನ್ನು ಶಿಪ್ಟ್ ಮಾಡಲಾಗಿತ್ತು.
ಆದರೇ ಇದೀಗ ಎರಡನೇ ಮಹಡಿಯಲ್ಲಿರುವ ಸರ್ಜರಿ ವಿಭಾಗ ಹಾಗೂ ಶಸ್ತ್ರಕ್ರಿಯಾ ಕೊಠಡಿಗಳಿದ್ದ ಭಾಗದ ಪಕ್ಕದ ವೈದ್ಯರ ಹಾಗೂ ಉಪನ್ಯಾಸಕರ ಕೊಠಡಿ ಇರುವ ಭಾಗದ ಸಿಮೆಂಟ್ ಪ್ಲೋರ್ ಕುಸಿದು ಬಿದ್ದಿದೆ.
ಅದೃಷ್ಟವಶಾತ್ ಇಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಹಾನಿಯಾಗಿಲ್ಲ. ಆದರೇ ಇದರ ಪಕ್ಕದಲ್ಲೇ ಸರ್ಜರಿ ವಿಭಾಗವಿದ್ದು ಅಲ್ಲಿಯೂ ಕುಸಿಯುವ ಆತಂಕ ವ್ಯಕ್ತವಾಗಿದೆ.
ಗುಣಮಟ್ಟವೇ ಇಲ್ಲದ ಕಾಮಗಾರಿಯಿಂದ ಇದೀಗ ಎರಡನೇ ಮಹಡಿ ಭಾಗದಲ್ಲಿ ಕುಸಿತ ಕಂಡಿದೆ ಇನ್ನೂ ಕುಸಿಯುವ ಆತಂಕ ಇದ್ದು ಮತ್ತೆ ಎಲ್ಲಿ ಏನು ಅನಾಹುತ ಸಂಭವಿಸಲಿದೆ ಎಂಬುವ ಪ್ರಶ್ನೆ ಏಳುವಂತೆ ಮಾಡಿದೆ.
Karnataka| ಹವಾಮಾನ ಇಲಾಖೆಯಿಂದ ಮಳೆ ಎಚ್ಚರಿಕೆ |ಎಷ್ಟು ದಿನ ಮಳೆ ಗೊತ್ತಾ?
ಕಟ್ಟಡ ನಿರ್ಮಾಣವಾಗಿ ಕೆಲವೇ ವರ್ಷದಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಿದ್ದು ಈ ಕಟ್ಟಡ ಯಾವ ರೀತಿ ಕಳಪೆ ಕಾಮಗಾರಿ ಮಾಡಲಾಗಿದೆ ಎಂಬುದಕ್ಕೆ ನಿದರ್ಶನವಾಗಿದೆ. ಇನ್ನಾದರೂ ಆಡಳಿತ ಎಚ್ಚೆತ್ತು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.