ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karwar: ಕರಾವಳಿಯ ಪತ್ರಕರ್ತರು,ಹೋರಾಟಗಾರರನ್ನು ಒಳಹಾಕಿದ JSW ಕಂಪನಿಯಿಂದ ಮೀನುಗಾರರ ಮಕ್ಕಳಿಗೂ ಆಮಿಷ! ಮುಂದೇನಾಯ್ತು ಗೊತ್ತಾ?

ಕಾರವಾರ: ಉತ್ತರ ಕನ್ನಡ (uttara kannada) ಜಿಲ್ಲೆಯ ಅಂಕೋಲ ತಾಲೂಕಿನ ಕೇಣಿಯಲ್ಲಿ ಜೆ.ಎಸ್.ಡಬ್ಲು ಕಂಪನಿಯ ಖಾಸಗಿ ಬಂದರು ನಿರ್ಮಾಣಕ್ಕೆ ಸ್ಥಳೀಯ ಮೀನುಗಾರರು ವಿರೋಧ ವ್ಯಕ್ತಪಡಿಸಿ ದೊಡ್ಡ ಮಟ್ಟದ ಹೋರಾಟ ನಡೆಸುತಿದ್ದಾರೆ. ಇದರ ಜೊತೆಗೆ ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಏರಿದೆ.
06:10 PM Jun 30, 2025 IST | ಶುಭಸಾಗರ್
ಕಾರವಾರ: ಉತ್ತರ ಕನ್ನಡ (uttara kannada) ಜಿಲ್ಲೆಯ ಅಂಕೋಲ ತಾಲೂಕಿನ ಕೇಣಿಯಲ್ಲಿ ಜೆ.ಎಸ್.ಡಬ್ಲು ಕಂಪನಿಯ ಖಾಸಗಿ ಬಂದರು ನಿರ್ಮಾಣಕ್ಕೆ ಸ್ಥಳೀಯ ಮೀನುಗಾರರು ವಿರೋಧ ವ್ಯಕ್ತಪಡಿಸಿ ದೊಡ್ಡ ಮಟ್ಟದ ಹೋರಾಟ ನಡೆಸುತಿದ್ದಾರೆ. ಇದರ ಜೊತೆಗೆ ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಏರಿದೆ.
JSW ಕಂಪನಿಯಿಂದ ಕೇಣಿಯಲ್ಲಿ ಹಂಚಲು ತಂದ ಕಿಟ್

Karwar: ಕರಾವಳಿಯ ಪತ್ರಕರ್ತರು,ಹೋರಾಟಗಾರರನ್ನು ಒಳಹಾಕಿದ JSW ಕಂಪನಿಯಿಂದ ಮೀನುಗಾರರ ಮಕ್ಕಳಿಗೂ ಆಮಿಷ! ಮುಂದೇನಾಯ್ತು ಗೊತ್ತಾ?

Advertisement

ಕಾರವಾರ: ಉತ್ತರ ಕನ್ನಡ (uttara kannada)  ಜಿಲ್ಲೆಯ ಅಂಕೋಲ ತಾಲೂಕಿನ ಕೇಣಿಯಲ್ಲಿ ಜೆ.ಎಸ್.ಡಬ್ಲು ಕಂಪನಿಯ ಖಾಸಗಿ ಬಂದರು ನಿರ್ಮಾಣಕ್ಕೆ ಸ್ಥಳೀಯ ಮೀನುಗಾರರು ವಿರೋಧ ವ್ಯಕ್ತಪಡಿಸಿ ದೊಡ್ಡ ಮಟ್ಟದ ಹೋರಾಟ ನಡೆಸುತಿದ್ದಾರೆ. ಇದರ ಜೊತೆಗೆ ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಏರಿದೆ.

ಆದರೇ ಈ ಕಂಪನಿ ಬಂದರನ್ನು ಮಾಡಲೇ ಬೇಕು ಎನ್ನುವ ನಿಟ್ಟಿನಲ್ಲಿ ಹಠಕ್ಕೆ ಬಿದ್ದಿದ್ದು "ರಂಗೋಲಿ ಕೆಳಗೆ ನುಗ್ಗಿದೆ" ಇದಕ್ಕೆ ಸಾಕ್ಷಿ ಎನ್ನುವಂತೆ ಈ ಹಿಂದೆ ಮೀನುಗಾರ ಮುಖಂಡರ ಹಾಗೂ ಅಧಿಕಾರಿಗಳು ,ಜನಪ್ರತಿನಿಧಿಗಳ ಸಭೆಯನ್ನು ಅಂಕೋಲದ ಎಸಿ ಕಚೇರಿಯಲ್ಲಿ ಕರೆದಿದ್ದು ಈ ಸಂದರ್ಭದಲ್ಲಿ ಕುದ್ದು ಕಾರವಾರದ ಶಾಸಕ ಸತೀಶ್ ಸೈಲ್ ಬಂದರು ಮಾಡಲು ಬೆಂಬಲಿಸಲು ಮುಖಂಡರುಗಳೇ ಹಣ ಪಡೆದಿರುವ ಆರೋಪ ಮಾಡಿದ್ದಲ್ಲದೇ ಅವರು ಯ್ಯಾರು ಎಂದು ಹೇಳಬೇಕಾ ಎಂಬ ಪ್ರಶ್ನೆ ಮಾಡಿದ್ದರು. ಇದಾದ ನಂತರ ನಾನು ಹೋರಾಟಗಾರರ ಪರ ಇದ್ದೇನೆ ಎಂದು ಹೇಳಿದ್ದರು.

ಕೊನೆಗೆ ಪೊಲೀಸರ ಸರ್ಪಗಾವಲಿನಲ್ಲಿ ಬಂದರಿಗಾಗಿ ಸರ್ವೆಕಾರ್ಯ ನಡೆಸಲಾಯುತು. ನಿಷೇಧಾಜ್ಞೆ ಸಹ ಹಾಕಲಾಯಿತು.

Advertisement

ಇದರ ನಂತರ ಕಂಪನಿ ಕೆಲವರನ್ನು ಚೂ ಬಿಟ್ಟು ಬಂದರು ಪರ ಜನರ ಮನಪರಿವರ್ತನೆಗೆ ಪ್ರಯತ್ನಿಸಿತ್ತು. ಇದಕ್ಕೆ ಕೆಲವು ಹೋರಾಟಗಾರರು, ಕೆಲವು ಪತ್ರಕರ್ತರು ಬೆಂಬಲಿಸಿ ಅಭಿರುದ್ಧಿ ಹೆಸರಿನಲ್ಲಿ ಕಂಪನಿಯ ದಳ್ಳಾಳಿಗಳಂತೆ ಕಾರ್ಯ ನಿರ್ವಹಿಸುತಿದ್ದಾರೆ.

ಇದೀಗ ಒಂದು ಹೆಜ್ಜೆ ಮುಂದೆಹೋಗಿರುವ JSW ಕಂಪನಿ ಕೇಣಿ,ಬೇಲಿಕೇರಿ ಭಾಗದಲ್ಲಿ ಮೀನುಗಾರರ ಹಾಗೂ ಸ್ಥಳೀಯ ಶಾಲೆ ಮಕ್ಕಳಿಗೆ ಗಿಫ್ಟ್ ನ ಆಮೇಷ ವೊಡ್ಡಿ ಮುಖಭಂಗ ಅನುಭವಿಸಿದೆ.

ಹೌದು ,ಕೇಣಿ, ಬೆಲಿಕೇರಿ, ಬಡಿಗೇರಿ ಮತ್ತು ಬಾವಿಕೇರಿ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಶಾಲಾ ಬ್ಯಾಗ್, ಕೊಡೆ, ಪುಸ್ತಕಗಳು ಹಾಗೂ ವಾಟರ್ ಬಾಟಲ್‌ ಒಳಗೊಂಡ ಸುಮಾರು 1100 ಕಿಟ್‌ಗಳನ್ನು ವಿತರಿಸಲು ವಾಹನ ಸಮೇತ ಬಂದಿದ್ದ JSW ಸಿಬ್ಬಂದಿಗಳು ಮಕ್ಕಳಿಗೆ ಕೊಡಲು ಮುಂದಾದಾಗ ಸ್ಥಳೀಯ ಜನರು ವಿರೋಧ ವ್ಯಕ್ತಪಡಿಸಿದರು.

JSW ಕಂಪನಿಯಿಂದ ಹಂಚಲು ತಂದ ಕಿಟ್

ಬಂದರು ಬೇಡ, ನಿಮ್ಮ ಗಿಫ್ಟ್ ಕೂಡ ಬೇಡ" ಎಂಬ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಕಂಪನಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.

 ಸ್ಥಳೀಯರ ಪ್ರತಿಭಟನೆ ಯನ್ನು ನಿರೀಕ್ಷಿಸದ JSW ಕಂಪನಿ ಅಧಿಕಾರಿಗಳು ಕೊನೆಗೆ ಬಂದದಾರಿಗೆ ಸುಂಕವಿಲ್ಲ ಎನ್ನುವಂತೆ ಮಕ್ಕಳಿಗೆ ಕಿಟ್‌ಗಳನ್ನು ವಿತರಿಸದೆ ಹಿಂತಿರುಗಿದ್ದಾರೆ.

ಇದನ್ನೂ ಓದಿ:-Ankola: ಗೊಬ್ಬರ ಗುಂಡಿಗೆ ಬಿದ್ದು ಮಗು ಸಾ**

ನಮಗೆ ಬಂದರು ಬೇಡ ,ಮೀನುಗಾರರನ್ನು ಇಲ್ಲಿಯೇ ಬದುಕಲು ಬಿಡಿ, ಬಂದರು ಮಾಡದಂತೆ ನಮ್ಮ ವಿರೋಧವಿದ್ದು ,ಯಾವುದೇ ಕಾರಣಕ್ಕೆ ಇಂತಹ ಆಮೇಷಕ್ಕೆ ನಾವು ಒಳಗಾಗುವುದಿಲ್ಲ, ಎಂದೂ ಬಾರದ ಇವರು ಇದೀಗ ದಿಢೀರ್ ಎಂದು ಬಂದು ಸ್ಥಳೀಯರಿಗೆ ಗಿಫ್ಟ್ ಕೊಡುವುದು ಏಕೆ ಎಂಬ ಪ್ರಶ್ನೆಯನ್ನು ಸ್ಥಳೀಯರು ಮಾಡಿದ್ದಾರೆ.

Advertisement
Tags :
ActivistSuppressionAnkolaCoastalKarnatakaCorporateInfluenceFishermenRightsJournalistBriberyJSWCompanyKarwarkeniMediaEthics
Advertisement
Next Article
Advertisement