ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karwar:ಅರಣ್ಯ ಇಲಾಖೆ ನಿರ್ಲಕ್ಷ ದಿಕ್ಕು ಕಳೆದುಕೊಂಡ ಕಾಂಡ್ಲಾ ನಡಿಗೆ ಪಥ!

Karwar news 27 October 2024- ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಕಾರವಾರದ ಕಾಳಿ ದ್ವೀಪದಲ್ಲಿ ಆರಂಭಿಸಿದ್ದ ಕಾಂಡ್ಲಾ ನಡಿಗೆ ಸೂಕ್ತ ನಿರ್ವಹಣೆ ಕಾಣದೆ ಪಾಳು ಬಿದ್ದಿದೆ.
08:36 PM Oct 27, 2024 IST | ಶುಭಸಾಗರ್

Karwar news 27 October 2024- ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಕಾರವಾರದ ಕಾಳಿ ದ್ವೀಪದಲ್ಲಿ ಆರಂಭಿಸಿದ್ದ ಕಾಂಡ್ಲಾ ನಡಿಗೆ ಸೂಕ್ತ ನಿರ್ವಹಣೆ ಕಾಣದೆ ಪಾಳು ಬಿದ್ದಿದೆ.

Advertisement

2020–21ನೇ ಸಾಲಿನಲ್ಲಿ ಅರಣ್ಯ ಇಲಾಖೆಯಿಂದ ಸುಮಾರು ₹20 ಲಕ್ಷ ವೆಚ್ಚದಲ್ಲಿ 240 ಮೀಟರ್ ಉದ್ದದ ಕಾಂಡ್ಲಾ ನಡಿಗೆ ಪಥ ನಿರ್ಮಿಸಲಾಗಿತ್ತು. ಕೆಲ ದಿನಗಳವರೆಗೆ ಉತ್ತಮವಾಗಿ ನಡೆದಿದ್ದ ಪಥವು ನಂತರ ನಿರ್ವಹಣೆ, ಪ್ರಚಾರ ಇಲ್ಲದೆ ಸೊರಗಿದೆ.

ಇದನ್ನೂ ಓದಿ:-Karwar 18 ವರ್ಷದಿಂದ ತಲೆಮರಸಿಕೊಂಡಿದ್ದ ಕಳ್ಳನ ಬಂಧನ! ಈತ ಮಾಡಿದ್ದೇನು ಗೊತ್ತಾ?

ನಡುಗಡ್ಡೆಯಲ್ಲಿರುವ ಕಾಳಿಕಾಮಾತಾ ದೇವಾಲಯದ ಸಮೀಪ ನದಿಯ ಅಂಚಿನಲ್ಲಿ ಕಾಂಡ್ಲಾ ನಡಿಗೆಗೆ ಅನುಕೂಲವಾಗುವಂತೆ ಮರದ ಹಲಗೆಗಳನ್ನು ಒಟ್ಟೊಟ್ಟಾಗಿ ಜೋಡಿಸಿ ಸೇತುವೆ ನಿರ್ಮಿಸಲಾಗಿದೆ.

Advertisement

ಸಿಮೆಂಟ್ ಕಂಬಗಳನ್ನು ಆಧರಿಸಿ ಇದು ನಿಂತಿದೆ. ಅಲ್ಲಲ್ಲಿ ಮರದ ಹಲಗೆಗಳು ಮುರಿದು ಬಿದ್ದಿದ್ದರೆ, ಮತ್ತೆ ಕೆಲವೆಡೆ ದುರ್ಬಲ ಸ್ಥಿತಿಯಲ್ಲಿವೆ. ಹೀಗಾಗಿ, ‘ನಿರ್ವಹಣೆ ಕಾರಣಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ’ ಎಂಬ ಎಚ್ಚರಿಕೆ ಫಲವನ್ನು ಪ್ರವೇಶದ್ವಾರದಲ್ಲಿ ಅಳವಡಿಸಲಾಗಿದೆ.

ಇದನ್ನೂ ಓದಿ:-Karwar | ಸತೀಶ್ ಶೈಲ್ ಪರಪ್ಪನ ಅಹ್ರಹಾರ ಜೈಲಿಗೆ ? ಏನಾಗಿತ್ತು ಏನು ಪ್ರಕರಣ ವಿವರ ಇಲ್ಲಿದೆ.

ಕಾಳಿನದಿಯ ಮಧ್ಯಭಾಗದಲ್ಲಿ ಕಾಂಡ್ಲಾಗಿಡಗಳ ನಡುವೆ ತಂಪನೆಯ ವಾತಾವರಣದಲ್ಲಿ ಮರದ ಹಲಗೆಗಳ ಸೇತುವೆ ಮೇಲೆ ನಡೆಯುತ್ತ ಸಾಗುವದು ರೋಮಾಂಚನಕಾರಿ ಅನುಭವ ನೀಡುತ್ತದೆ.

ಇಂಥ ಸೌಲಭ್ಯ ಬಳಸಿಕೊಂಡು ಪ್ರವಾಸಿಗರನ್ನು ಸೆಳೆಯುವ ಅಪರೂಪದ ಅವಕಾಶವನ್ನೂ ಕೈಚೆಲ್ಲಲಾಗಿದೆ. ದೂರದ ಊರಿನ ಪ್ರವಾಸಿಗರಿಗೆ ಹಾಗಿರಲಿ, ಕಾರವಾರದ ಜನರಿಗೇ ಕಾಂಡ್ಲಾ ನಡಿಗೆ ಬಗ್ಗೆ ಮಾಹಿತಿ ಇಲ್ಲ’ ಎನ್ನುತ್ತಾರೆ ಕೋಡಿಬಾಗದ ಹರೀಶ ಸಾರಂಗ್.

‘ಒಂದು ವರ್ಷಕ್ಕಿಂತ ಹೆಚ್ಚು ಕಾಲದಿಂದ ಕಾಂಡ್ಲಾ ನಡಿಗೆ ಪಥ ದುಸ್ಥಿತಿಯಲ್ಲಿದೆ. ಅದನ್ನು ಸರಿಯಾಗಿ ನಿರ್ವಹಣೆಯನ್ನೇ ಮಾಡಿಲ್ಲ. ಸುತ್ತಮುತ್ತಲಿನ ರೆಸಾರ್ಟ್, ಹೋಮ್ ಸ್ಟೇಗಳಿಗೆ ಭೇಟಿ ನೀಡುತ್ತಿದ್ದ ಪ್ರವಾಸಿಗರನ್ನು ಇಲ್ಲಿಗೆ ಕರೆತರಲಾಗುತ್ತಿತ್ತು. ಸೌಕರ್ಯ ಹಾಳಾಗಿದ್ದರಿಂದ ಈಗ ಅವರು ಪ್ರವಾಸಿಗರನ್ನು ಕರೆತರುವುದನ್ನೂ ನಿಲ್ಲಿಸಿದ್ದಾರೆ ಎನ್ನುತ್ತಾರೆ ನಂದನಗದ್ದಾದ ಕಲ್ಪೇಶ್ ನಾಯ್ಕ.

ಇದನ್ನೂ ಓದಿ :-Karwar: ಕಡಲ ಕೊರತಕ್ಕೆ ರಸ್ತೆ ಕುಸಿತ| ಹಣವಿಲ್ಲದೇ ಬದಲಿ ವ್ಯವಸ್ಥೆ ಮಾಡದ ಜಿಲ್ಲಾಡಳಿತ

ಕಾಂಡ್ಲಾ ಪಥವನ್ನು ದುರಸ್ತಿಪಡಿಸುವ ಕೆಲಸ ಶೀಘ್ರದಲ್ಲಿ ನಡೆಸಲಾಗುತ್ತದೆ. ನಂತರ ಪ್ರವಾಸಿಗರ ಸಂಚಾರಕ್ಕೆ ಅವಕಾಶ ಕಲ್ಪಿಸುತ್ತೇವೆ ಎಂದು ಅರಣ್ಯ ಇಲಾಖೆಯ ಕೋಸ್ಟಲ್ ಮರೈನ್ ವಿಭಾಗದ ಆರ್.ಎಫ್.ಒ ಕಿರಣ್ ಹೇಳುತ್ತಾರೆ.

ಆದ್ರೆ ಸೂಕ್ತ ನಿರ್ವಹಣ ವೆಚ್ಚವನ್ನು ಬರಿಸಲು ಸರ್ಕಾರದ ಅನುದಾನದ ಕೊರತೆ ಹಾಗೂ ನಿರ್ಲಕ್ಷ ಪ್ರವಾಸಿಗರ ಮೆಚ್ಚಿನ ತಾಣವಾಗಬೇಕಿದ್ದ ಈ ಸ್ಥಳ ಇದೀಗ ಹಾಳು ಕೊಂಪೆಯಾಗಿದೆ.

ಸುದ್ದಿ ಮೂಲ -ಪ್ರಜಾವಾಣಿ.

Advertisement
Tags :
kandla vanaKarnatakaKarwartourist spotUttra kannda news
Advertisement
Next Article
Advertisement