Karwar |ಈ ಕೆಲಸ ಸಿ.ಎಂ ಮಾಡದಿದ್ರೆ ರಾಜಕೀಯ ನಿವೃತ್ತಿ,ಯಾವ ಪಕ್ಷ ಸೇರೋಲ್ಲ ಎಂದ ಕಾರವಾರ ಸತೀಶ್ ಸೈಲ್
Karwar |ಈ ಕೆಲಸ ಸಿ.ಎಂ ಮಾಡದಿದ್ರೆ ರಾಜಕೀಯ ನಿವೃತ್ತಿ,ಯಾವ ಪಕ್ಷ ಸೇರೋಲ್ಲ ಎಂದ ಕಾರವಾರ ಸತೀಶ್ ಸೈಲ್
ಕಾರವಾರ (october 14) :- ಕಾರವಾರದ (karwar) ಕಾಂಗ್ರೆಸ್ ಶಾಸಕ ಸತೀಶ್ ಮಾರ್ಚ ನಲ್ಲಿ ಮುಖ್ಯಮಂತ್ರಿಗಳು ಅನುದಾನ ಕೊಡದಿದ್ರೆ ರಾಜಕೀಯ ನಿವೃತ್ತಿ ಯಾಗುವುದಾಗಿ ಘೋಷಿಸಿದ್ದಾರೆ.
ಇಂದು ಕಾರವಾರದ (karwar)ಸದಾಶಿವಗಡದ ಕಾಳಿ ಸಂಗಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ,ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕು ಎಂದು ಮೂರು ವರ್ಷದಿಂದ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತಾ ಬಂದಿದ್ದೇನೆ.
Karwar|ಕದಂಬ ನೌಕಾ ನೆಲೆಯ ಬಳಿ ಚಿರತೆ ಪ್ರತ್ಯಕ್ಷ |ವಿಡಿಯೋ ನೋಡಿ
ಮೂರು ವರ್ಷದಿಂದ ಅನುದಾನ ಬಿಡುಗಡೆ ಆಗಿಲ್ಲ ,ಘೋಷಣೆಯೂ ಆಗಿಲ್ಲ.ಚಿಕಿತ್ಸೆಗಾಗಿ ಜನ ಗೋವಾಕ್ಕೆ ಹೋಗಬೇಕು, ನಾನೇ ನನ್ನ ಚಿಕಿತ್ಸೆಗಾಗಿ ದೆಹಲಿಗೆ ಹೋಗುವಂತೆ ಆಗಿದೆ.
ಹೀಗಾಗಿ ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತುಂಬಾ ಅವಷ್ಯವಿದೆ. ಜನ ತೊಂದರೆಯಲ್ಲಿ ಇದ್ದಾರೆ,ನಾನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿಯೇ ಸಿದ್ದ.
ಮಾರ್ಚ ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ ಆಗಬೇಕು ,ಆಗದೇ ಇದ್ದರೇ ನಾನು ಪಕ್ಷ ಬಿಟ್ಟು ಹೋಗಲ್ಲ ,ರಾಜಿನಾಮೆ ಕೊಟ್ಟು ಮನೆಯಲ್ಲಿ ಇರ್ತೀನಿ , ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ .
ಆಸ್ಪತ್ರೆಗೆ ಅನುದಾನ ಬಿಡುಗಡೆ ಆಗಬೇಕು ,ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿಕೊಡುವಂತೆ ಸಿಎಂ ಗೆ ಕೇಳಿಕೊಂಡಿದ್ದೆ.
ಹಿಂದೆ ಅನುದಾನ ಕೊಡಲಿಲ್ಲ, ಮೂರುವರ್ಷದಿಂದ ಈ ಬಗ್ಗೆ ಮನವಿ ಮಾಡಿದ್ದೇನೆ ,ಈ ಬಜೆಟ್ ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ ಆಗದಿದ್ರೆ ಬಜೆಟ್ ಆದ ಮಾರನೇ ದಿವಸ ಸತೀಶ್ ಬಜೆಟ್ ಮನೆಯಲ್ಲಿ .
ಯಾವ ಪಕ್ಷಕೆ ಹೋಗುವುದಿಲ್ಲ, ಯಾವ ಕೆಲಸವನ್ನೂ ಮಾಡುವುದಿಲ್ಲ , ಐ ಯಾಮ್ ಎ ನಾಟ್ ಫಿಟ್ ಫಾರ್ ಪೀಪಲ್ ಎಂದು ತಿಳಿದುಕೊಳ್ಳುತ್ತೇನೆ
ಅನುದಾನ ಬಿಡುಗಡೆಯಾಗದಿದ್ರೆ ರಾಜಕೀಯ ನಿವೃತ್ತಿ ಘೋಷಿಸಿ ರಾಜಕೀಯ ದಿಂದ ದೂರ ಇರುವುದಾಗಿ ಕಾರವಾರ ಶಾಸಕ ಸೈಲ್ ಹೇಳಿದ್ದಾರೆ.