For the best experience, open
https://m.kannadavani.news
on your mobile browser.
Advertisement

Karwar :ಶುಲ್ಕದ ನೆಪದಲ್ಲಿ ನಿರಾಶ್ರಿತ ಪರಿಹಾರದ ಹಣ ವಂಚಿಸಿದ ವಕೀಲೆ- ಕೋರ್ಟ ನಿಂದ ಬಡ್ಡಿ ಸಮೇತ ವೃದ್ಧನಿಗೆ ಹಣ ಹಿಂದಿರುಗಿಸುವಂತೆ ಕೋರ್ಟ ತೀರ್ಪು

ಕಾರವಾರ :- ಜನರಿಗೆ ಮೋಸ ವಂಚನೆಯಾದರೇ ನ್ಯಾಯಾಲಯಕ್ಕೆ (court) ಹೋಗಿ ನ್ಯಾಯ ಪಡೆಯುತ್ತಾರೆ.ಆದ್ರೆ ನ್ಯಾಯ ಕೊಡಿಸಬೇಕಾದ ವಕೀಲರೇ ವಂಚಿಸಿದರೇ ನ್ಯಾಯ ಕೇಳಿಕೊಂಡ ಬಂದವನ ಸ್ಥಿತಿ ಹೇಗಾಗದಿರದು. ಹೌದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ 83 ವರ್ಷದ ವೃದ್ದನಿಗೇ ವಕೀಲರೊಬ್ಬರು ವಂಚಿಸಿ ಲಕ್ಷಗಟ್ಟಲೆ ಹಣ ಪೀಕಿದ್ದು ನ್ಯಾಯಾಲಯ ಬಡ್ಡಿ ಸಮೇತ ಹಣ ಹಿಂದಿರುಗಿಸಲು ವಕೀಲರಿಗೆ ಆದೇಶ ನೀಡಿದೆ.
09:19 PM Jul 01, 2025 IST | ಶುಭಸಾಗರ್
ಕಾರವಾರ :- ಜನರಿಗೆ ಮೋಸ ವಂಚನೆಯಾದರೇ ನ್ಯಾಯಾಲಯಕ್ಕೆ (court) ಹೋಗಿ ನ್ಯಾಯ ಪಡೆಯುತ್ತಾರೆ.ಆದ್ರೆ ನ್ಯಾಯ ಕೊಡಿಸಬೇಕಾದ ವಕೀಲರೇ ವಂಚಿಸಿದರೇ ನ್ಯಾಯ ಕೇಳಿಕೊಂಡ ಬಂದವನ ಸ್ಥಿತಿ ಹೇಗಾಗದಿರದು. ಹೌದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ 83 ವರ್ಷದ ವೃದ್ದನಿಗೇ ವಕೀಲರೊಬ್ಬರು ವಂಚಿಸಿ ಲಕ್ಷಗಟ್ಟಲೆ ಹಣ ಪೀಕಿದ್ದು ನ್ಯಾಯಾಲಯ ಬಡ್ಡಿ ಸಮೇತ ಹಣ ಹಿಂದಿರುಗಿಸಲು ವಕೀಲರಿಗೆ ಆದೇಶ ನೀಡಿದೆ.
karwar  ಶುಲ್ಕದ ನೆಪದಲ್ಲಿ ನಿರಾಶ್ರಿತ ಪರಿಹಾರದ ಹಣ ವಂಚಿಸಿದ ವಕೀಲೆ  ಕೋರ್ಟ ನಿಂದ ಬಡ್ಡಿ ಸಮೇತ ವೃದ್ಧನಿಗೆ ಹಣ ಹಿಂದಿರುಗಿಸುವಂತೆ ಕೋರ್ಟ ತೀರ್ಪು

Karwar :ಶುಲ್ಕದ ನೆಪದಲ್ಲಿ ನಿರಾಶ್ರಿತ ಪರಿಹಾರದ ಹಣ ವಂಚಿಸಿದ ವಕೀಲೆ- ಕೋರ್ಟ ನಿಂದ ಬಡ್ಡಿ ಸಮೇತ ವೃದ್ಧನಿಗೆ ಹಣ ಹಿಂದಿರುಗಿಸುವಂತೆ ಕೋರ್ಟ ತೀರ್ಪು

Advertisement

ಕಾರವಾರ :- ಜನರಿಗೆ ಮೋಸ ವಂಚನೆಯಾದರೇ ನ್ಯಾಯಾಲಯಕ್ಕೆ (court) ಹೋಗಿ ನ್ಯಾಯ ಪಡೆಯುತ್ತಾರೆ.ಆದ್ರೆ ನ್ಯಾಯ ಕೊಡಿಸಬೇಕಾದ ವಕೀಲರೇ ವಂಚಿಸಿದರೇ ನ್ಯಾಯ ಕೇಳಿಕೊಂಡ ಬಂದವನ ಸ್ಥಿತಿ ಹೇಗಾಗದಿರದು. ಹೌದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ 83 ವರ್ಷದ ವೃದ್ದನಿಗೇ ವಕೀಲರೊಬ್ಬರು ವಂಚಿಸಿ ಲಕ್ಷಗಟ್ಟಲೆ ಹಣ ಪೀಕಿದ್ದು ನ್ಯಾಯಾಲಯ ಬಡ್ಡಿ ಸಮೇತ ಹಣ ಹಿಂದಿರುಗಿಸಲು ವಕೀಲರಿಗೆ ಆದೇಶ ನೀಡಿದೆ.

 ಕಾರವಾರ ನಗರದ ಸೋನಾರವಾಡದ 80 ರ ವೃದ್ದ ರಾಮಕೃಷ್ಣ ದುಗ್ಗ ನಾಯ್ಕ ವಕೀಲರಿಂದಲೇ ವಂಚನೆಗೊಳಗಾದವರಾಗಿದ್ದು , ಕಾರವಾರದ ವಕೀಲರಾದ ಪದ್ಮ ಕಮಲಾಕರ ತಾಂಡೇಲ್ ವಂಚನೆ ಮಾಡಿದಾಕೆ.

 ಹೌದು ಈ ಘಟನೆ ಎಂತವರ ಹೃದಯವನ್ನೂ ಒಮ್ಮೆ ಕಲಕುತ್ತದೆ. ಕದಂಬ ನೌಕಾ ನೆಲೆಗಾಗಿ ತನ್ನ ಜಾಗವನ್ನು ಬಿಟ್ಟುಕೊಟ್ಟು ಸಮರ್ಪಕ ಪರಿಹಾರ ಸಿಗದಿದ್ದಾಗ ನ್ಯಾಯಕ್ಕಾಗಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಕೋರ್ಟ ಮೆಟ್ಟಿಲೇರಿದ ಕಾರವಾರದ  ರಾಮಕೃಷ್ಣ ದುಗ್ಗ ನಾಯ್ಕ ನ್ಯಾಯಕ್ಕಾಗಿ 30 ವರ್ಷದಿಂದ ಹೋರಾಡಿದರು.

ದುರಾದೃಷ್ಟ ವಶಾತ್ ಅವರು ನೇಮಿಸಿದ್ದ ವಕೀಲರು ಹೈಕೋರ್ಟ ಗೆ ಹೋಗುವಂತೆ ಕೈಬಿಟ್ಟರು. ಆದರೇ ಇವರ ಅಸಾಹಯಕತೆಯನ್ನು ಬಳಸಿಕೊಂಡ ಕಾರವಾರದ ವಕೀಲೆ ಪದ್ಮ ಕಮಲಾಕರ್ ತಾಂಡೇಲ್ ಇವರ ಕುಟುಂಬದ ಸದಸ್ಯರನ್ನು ಸಂಪರ್ಕಿಸಿ ತಾನು ನ್ಯಾಯ ಕೊಡಿಸುವುದಾಗಿ ಹೇಳಿಕೊಂಡು ಬಂದ ಪರಿಹಾರ ಹಣದಲ್ಲಿ ಹತ್ತು ಪರ್ಸಂಟೇಜ್ ನೀಡಬೇಕು ಎಂದು ಹೇಳಿದ್ದಳು.

ಇದನ್ನೂ ಓದಿ:-Karwar: ಕರಾವಳಿಯ ಪತ್ರಕರ್ತರು,ಹೋರಾಟಗಾರರನ್ನು ಒಳಹಾಕಿದ JSW ಕಂಪನಿಯಿಂದ ಮೀನುಗಾರರ ಮಕ್ಕಳಿಗೂ ಆಮಿಷ! ಮುಂದೇನಾಯ್ತು ಗೊತ್ತಾ?

ಇದಕ್ಕೆ ಒಪ್ಪಿದ್ದ ಕುಟುಂಬ ಪ್ರಕರಣವನ್ನು ಈಕೆಯ ಕೈಗಿತ್ತಿದ್ದರು. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ಹೆಚ್ಚುವರಿ ಹಣ ಬಿಡುಗಡೆಯಾಗಿ ಇವರ ಖಾತೆಗೆ ಬಂದಿದೆ. ಇದನ್ನು ಅರಿತ ವಕೀಲೆ ಪದ್ಮ ತಾಂಡೇಲ್ ಕೋರ್ಟ ನಲ್ಲಿ ವಾದ ಮಂಡಿಸದಿದ್ದರೂ ರಾಮಕೃಷ್ಣ ದುಗ್ಗ ನಾಯ್ಕ ಹಾಗೂ ಕುಟುಂಬ ಸದಸ್ಯರ ಬಳಿ ಕಾಲಿ ಚಕ್ ಗೆ ಇವರಿಗೆ ಗೊತ್ತಾಗದಂತೆ ಇಲ್ಲದ ನೆವ ಹೇಳಿ ಸಹಿ ಹಾಕಿಸಿಕೊಂಡು ಇವರ ಖಾತೆಗೆ ಬಂದ ಹಣದಲ್ಲಿ ಶೇ.26 % ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ರಾಮಕೃಷ್ಣ ದುಗ್ಗ ನಾಯ್ಕ ಸೇರಿ ಆರು ಜನ ಸದಸ್ಯರ ತಲಾ 1,89,251 ರೂ ಪಡೆದಿದ್ದಾರೆ. ರಾಮಕೃಷ್ಣ ದುಗ್ಗ ನಾಯ್ಕರ ಮನೆಯ ಪ್ರತಿ ಸದಸ್ಯರಿಗೆ 7,27,734 ರೂ ಪರಿಹಾರ ಬಂದಿದ್ದು, ಪ್ರತಿಯೊಬ್ಬರಿಂದ ಒಟ್ಟು 18 ಲಕ್ಷಕ್ಕೂ ಹೆಚ್ಚು ಹಣ ಪಡೆದಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಬೆದರಿಕೆ ಒಡ್ಡಿ ಕಳುಕಳುಹಿಸಿದ್ದಾರೆ. ನಂತರ ವಕೀಲೆ ಪದ್ಮ ತಾಂಡೇಲ್ ವಂಚಿಸಿದ ಕುರಿತು ಕಾರವಾರದ ಕೋರ್ಟ ನಲ್ಲಿ ನ್ಯಾಯಕ್ಕಾಗಿ ವಕೀಲರಾದ ರೇಣುಕಾ ಪ್ರಸಾದ ಭಾರಧ್ವಜ್ ರವರ ಬಳಿ ಹೋಗಿದ್ದು ವಂಚಿಸಿದ ವಕೀಲರ ಮೇಲೆ ದಾವೆ ಹೂಡಿದ್ದರು.

ನ್ಯಾಯವಾದಿಗಳಾದ ರೇಣುಕಾ ಪ್ರಸಾದ ಭಾರಧ್ವಜ್ ರವರು ಸಮರ್ಥವಾಗಿ ವಾದ ಮಂಡಿಸಿ ಪದ್ಮ ತಾಂಡೇಲ್ ಮಾಡಿದ ಮೋಸವನ್ನು ಕೋರ್ಟ ಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ಸು ಕಂಡರು.

ಇದನ್ನೂ ಓದಿ:-Karwar : ಸುಳ್ಳೇ ಸುಳ್ಳು  ಭೀಮಣ್ಣ ನಾಯ್ಕ ಫುಲ್ ಗರಂ ! ಏನಿದು ಸುಳ್ಳು?

 ವೃದ್ಧ ರಾಮಕೃಷ್ಣ ರವರ ಪರ ಕೋರ್ಟ ತೀರ್ಪು ನೀಡಿದ್ದು , ಕೋರ್ಟ ಪದ್ಮ ತಾಂಡೇಲ್ ಗೆ ಹೆಚ್ಚುವರಿ ಶುಲ್ಕವಾದ 6,98,624 ರೂ ಗೆ 6% ಬಡ್ಡಿ ಸೇರಿಸಿ ನೀಡಲು ಇದೇ ವರ್ಷ ಏಪ್ರಿಲ್ ನಲ್ಲಿ ತೀರ್ಪು ನೀಡಿದೆ.

 ಇನ್ನು ವಂಚಿಸಿದ ವಕೀಲೆ ಪದ್ಮ ತಾಂಡೇಲ್ ವಿರುದ್ಧ ಕೋರ್ಟ ತೀರ್ಪು ನೀಡಿ ಎರಡು ತಿಂಗಳು ಕಳೆದಿದೆ. ಹಣಕ್ಕಾಗಿ  80 ರ ವೃದ್ಧ ರಾಮಕೃಷ್ಣ ನಾಯ್ಕ ರವರು ಅಲೆದಾಡುತಿದ್ದು ,ಹಣ ಮಾತ್ರ ಈವರೆಗೂ ವಕೀಲೆ ಪದ್ಮ ತಾಂಡೇಲ್ ನೀಡದೇ ನುಣಚಿಕೊಂಡಿದ್ದಾರೆ. ತೀರ್ಪು ನೀಡಿದ 30 ದಿನದಲ್ಲಿ ಅಪೀಲ್ ಮಾಡಲು ಆರೋಪಿಗಳಿಗೆ ಅವಕಾಶವಿದೆ.ಆದರೇ ಈಗಾಗಲೇ ಅರವತ್ತು ದಿನ ಕಳೆದುಹೋಗಿದೆ. ಹಣಕ್ಕಾಗಿ ವೃದ್ದ ರಾಮಕೃಷ್ಣ ಅಲೆದು ಬಸವಳಿದಿದ್ದಾರೆ. ಈ ವಯೋ ವೃದ್ದತೆಯಲ್ಲಿ ಕುಟುಂಬ ಸಲಹುವುದೂ ಕಷ್ಟವಾಗಿದ್ದು ತಮ್ಮ ಹಣ ಕೊಡಿಸುವಂತೆ ಅಂಗಾಲಾಚುತಿದ್ದಾರೆ.

ಆದರೇ ಅನ್ಯಾಯವಾಗಿದೆ ಎಂದು ನ್ಯಾಯಕ್ಕಾಗಿ ಹೋರಾಡಲು ನಿಯುಕ್ತಿ ಮಾಡಿದ ವಕೀಲರೇ ವಂಚಿಸಿದ್ದಲ್ಲದೇ ,ಕೋರ್ಟ ತೀರ್ಪು ನೀಡಿದರೂ ನ್ಯಾಯಾಲಯದ ಘನತೆಗೆ ಗೌರವವನ್ನು ನೀಡದೇ ವಕೀಲೆ ಪದ್ಮ ತಾಂಡೇಲ್ ನಡೆದುಕೊಳ್ಳುತಿದ್ದಾರೆ. ಹೀಗಾಗಿ ಮತ್ತೆ ವೃದ್ಧ ರಾಮಕೃಷ್ಣರವರು 80 ರ ವಯಸ್ಸಿನಲ್ಲಿ ಮತ್ತೆ ಕಾನೂನು ಹೋರಾಟಕ್ಕೆ ಮುಂದಾಗುವಂತೆ ಮಾಡಿದ್ದು ಇವರ ಪರ ಇರುವ ನ್ಯಾಯಾವಾದಿಗಳಾದ ರೇಣುಕಾ ಪ್ರಸಾದ ಭಾರಧ್ವಜ್ ಮತ್ತೆ ಕೋರ್ಟ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ