Uttra kamnda| ಅಕ್ರಮ ಮರಳು ಸಾಗಾಟ ಮಾಡಿದವರಿಗೆ ದಂಡ ವಿಧಿಸಿದ್ದಕ್ಕೆ ಅಧಿಕಾರಿಗಳಿಗೆ ಶಾಸಕರ ತರಾಟೆ!
Uttra kamnda|
ಕಾರವಾರ:- ಉತ್ತರ ಕನ್ನಡ (uttra kannda) ಜಿಲ್ಲೆಯ ನದಿ ಪಾತ್ರದಲ್ಲಿ ನಡೆಯುವ ಮರಳುಗಾರಿಕೆಗೆ ನಿಷೇಧ ವನ್ನು ಹಸಿರು ಪೀಠ ನಿರ್ಬಂಧ ವಿಧಿಸಿದೆ.
ಹೀಗಿದ್ದರೂ ಅಕ್ರಮ ಮರಳುಗಾರಿಕೆ ಉತ್ತರ ಕನ್ನಡ ಜಿಲ್ಲೆಯ ಭಾಗದಲ್ಲಿ ನಿರಂತರ ನಡೆಯುತಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಠಿಣ ಕ್ರಮ ಕೈಗೊಂಡು ದಂಡ ವಿಧಿಸುತ್ತಿದೆ.
ಇದನ್ನೂ ಓದಿ :-Sirsi| ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷೆ ಉಷಾ ಹೆಗಡೆಗೆ ಬ್ರಷ್ಟಾಚಾರ ಆರೋಪದಡಿ ಶಿಕ್ಷೆ.
ಆದ್ರೆ ಹೀಗೆ ದಂಡ ವಿಧಿಸುತ್ತಿರುವುದಕ್ಕೆ ಜನಪ್ರತಿನಿಧಿಗಳು ಗರಂ ಆಗಿದ್ದಾರೆ. ಹೌದು ನಿನ್ನೆ ನಡೆದ ಕೆ.ಡಿ.ಪಿ ಸಭೆಯಲ್ಲಿ ಶಿರಸಿ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ ಅಕ್ರಮ ಮರಳುಗಾರಿಕೆ ನಡೆಸುತ್ತಿರುವವರಿಗೆ ದಂಡ ವಿಧಿಸಿದ್ದಕ್ಕೆ ಫುಲ್ ಗರಂ ಆಗಿದ್ದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಯನ್ನ ತರಾಟೆ ತೆಗೆದುಕೊಂಡು ನಿಯಮದ ಪ್ರಕಾರ ಎಷ್ಟ ದಿನ ಜಿಲ್ಲೆಯಲ್ಲಿ ಕೆಲಸ ಮಾಡ್ತಿಯಾ ನೊಡ್ತೆನಿ ಎಂದ ಆವಾಜ್ ಹಾಕಿದ್ದಾರೆ.
ಶಾಸಕರ ಮಾತಿಗೆ ತುಂಬಿದ ಸಭೆಯಲ್ಲಿ ಖಡಕ್ ತಿರುಗೇಟು ಕೊಟ್ಟ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಆಶಾ ನಿಯಮದ ಪ್ರಕಾರ ನಾನು ಕೆಲಸ ಮಾಡುತ್ತಿದೇನೆ ಎಂದರು.
ಇದಕ್ಕೆ ಕೋಪಗೊಂಡ ಶಿರಸಿ ಶಾಸಕ ಭೀಮಣ್ಣ ನಾಯ್ಕ ಆಕ್ರಮ ಮರಳು ಸಾಗಾಟ ಮಾಡುವವರು ನಮ್ಮ ಕ್ಷೇತ್ರದಲ್ಲಿ ಮಾತ್ರ ಸಿಗ್ತಾರಾ ನಿಮಗೆ? ಯಾಕೆ ಪದೇ ಪದೆ ಅಮಾಯಕರ ಮೇಲೆ ಕೇಸ್ ಹಾಕಿ ಮನೆ ಕಟ್ಟುವವರಿಗೆ ತೊಂದ್ರೆ ಕೊಡ್ತಿರಾ.?, ಜಿಲ್ಲೆಯಲ್ಲಿ ಬೇರೆ ಎಲ್ಲೂ ಆಕ್ರಮ ಮರಳು ಸಾಗಾಟ ನಡೆಯುವುದೆ ಇಲ್ವಾ..?.
ನನ್ನ ಕ್ಷೇತ್ರದಲ್ಲೆ ಹೆಚ್ಚು ಕೇಸ್ ದಾಖಲು ಮಾಡಿ ದಂಡ ವಿಧಿಸುವುದು ಯಾಕೆ? ಆಯ್ತು ನಿಯಮದ ಪ್ರಕಾರ ಎಷ್ಟ ದಿನ ಜಿಲ್ಲೆಯಲ್ಲಿ ಕೆಲಸ ಮಾಡ್ತಿಯಾ ನೊಡ್ತೆನಿ ಎಂದ ಭಿಮಣ್ಣಾ ನಾಯ್ಕ ದಮ್ಕಿ ಹಾಕಿದ್ರು.
ಇದಕ್ಕೆ ಉತ್ತರಿಸಿದ ಅವರು ಜಿಲ್ಲೆಯ ಮರಳುಗಾರಿಕೆ ಪ್ರಕರಣ ಸದ್ಯಕ್ಕೆ ಕೊರ್ಟ್ ನಲ್ಲಿದೆ,ಇನ್ನೂ ಮಾರ್ನಾಲ್ಕು ತಿಂಗಳಲ್ಲಿ ಕೊರ್ಟ್ ಆದೇಶ ಬರಬಹುದು ,ಜಿಲ್ಲೆಯಲ್ಲಿ ಮರಳು ಗಾರಿಕೆ ಸದ್ಯಕ್ಕೆ ನಿಷೇಧ ಮಾಡಲಾಗಿದೆ.ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮರಳು ಸಾಗಾಟ ಕಂಡು ಬಂದ್ರೆ ದಂಡ ವಿಧಿಸುವುದು ನಿಯಮ,ನಿಯಮದ ಪ್ರಕಾರ ದಂಡ ತೆಗೆದುಕೊಳ್ಳುವಂತೆ ನಮ್ಮ ಸಿಬ್ಬಂಧಿಗೆ ಸೂಚಿಸಿದ್ದೇನೆ.
ನಾನು ಒಬ್ಳೆ ಮಾಡುತ್ತಿಲ್ಲ ಪೊಲೀಸ್ ಇಲಾಖೆ ಕೂಡ ಮಾಡ್ತಾ ಇದಾರೆ,ಅವರಿಗೂ ಬೇಕಾದ್ರೆ ಕರೆದು ಕೇಳಿ ನಾನು ನಿಯಮದ ಪ್ರಕಾರ ಕೆಲಸ ಮಾಡುತ್ತಿದ್ದೇನೆ ಎಂದು ಕಾರವಾರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕರಿಗೆ ಅಧಿಕಾರಿ ತಿರುಗೇಟು ಕೊಟ್ಟರು.
ಈ ಮಧ್ಯೆ ಪರಿಸ್ಥಿತಿ ಕೈಮೀರುವುದನ್ನು ನೋಡಿ ಮಧ್ಯಪ್ರವೇಶಿಸಿದ ಸಚಿವ ಮಂಕಾಳು ವೈದ್ಯ ಆಮೇಲೆ ಕೂತು ಮಾತಾಡೋಣ ಸದ್ಯಕ್ಕೆ ಇಲ್ಲಿಗೆ ನಿಲ್ಲಿಸಿ ಎಂದರು.