Karwar| ಹೆದ್ದಾರಿ ನುಂಗಿದ ಬೀದಿ ಅಂಗಡಿ,ಆಟೋಗಳು! ಜನರ ಜೀವಕ್ಕೆ ಇಲ್ಲಿ ಇಲ್ಲ ಗ್ಯಾರಂಟಿ.
ಕಾರವಾರ :- ಕಾರವಾರ ನಗರದ(karwar city) ರವೀಂದ್ರನಾಥ ಕಡಲ ತೀರ ಭಾಗದ ರಾಷ್ಟ್ರೀಯ ಹೆದ್ದಾರಿ 66 ರ ಮೇಲುಸೇತುವೆ ಕೆಳಗಿನ ರಸ್ತೆಯಲ್ಲಿ ವಾಹನಗಳು ತೆರಳಲು ಅಡ್ಡಿಯಾಗುತ್ತಿದೆ.
ಒಂದೆಡೆ ಸಂಜೆಯಾಗುತಿದ್ದಂತೆ ಬೀದಿ ಬದಿ ವ್ಯಾಪಾರಿಗಳು ರಸ್ತೆಯಲ್ಲಿಯೇ ಅಂಗಡಿಗಳನ್ನು ಇಡುತಿದ್ದರೇ , ಇದೇ ಭಾಗದಲ್ಲಿ ಸಾಲು ಸಾಲು ಆಟೋಗಳ (Auto)ಅನಧಿಕೃತ ನಿಲ್ದಾಣವಾಗಿದೆ.
ಇನ್ನು ಇಲ್ಲಿ ಇರುವ ತಿನಿಸಿನ ಅಂಗಡಿಗಳಿಗೆ ಜನ ನಿಂತಾಗ ಹೆದ್ದಾರಿಯಿಂದ ವೇಗವಾಗಿ ಬರುವ ವಾಹನಗಳಿಂದ ಅಪಘಾತವಾಗುವ ಸಾಧ್ಯತೆಗಳಿವೆ. ಜೊತೆಗೆ ದೊಡ್ಡ ಬಸ್ ಗಳು ಮತ್ತೊಂದು ರಸ್ತೆಗೆ ತಿರುಗಿಸಬೇಕಾದರೇ ರಿವರ್ಸ ತೆಗೆದುಕೊಳ್ಳುವ ಸ್ಥಿತಿ ಇದೆ. ಇನ್ನು ಅಂಕೋಲ ಭಾಗದಿಂದ ನಗರಭಾಗಕ್ಕೆ ತೆರಳುವವರಿಗೆ ಎದುರು ಬರುವ ವಾಹನ ಕಾಣುವುದಿಲ್ಲ.
ಇದನ್ನೂ ಓದಿ:-Karwar ಅರಬ್ಬಿ ಸಮುದ್ರದಲ್ಲಿ ಮುಳುಗಿದ ಬೋಟ್ ಎಂಟು ಜನ ಮೀನುಗಾರರ ರಕ್ಷಣೆ.
ಇನ್ನು ಹೆದ್ದಾರಿ ಪ್ರಾಧಿಕಾರ ದಿಂದ ಈ ಭಾಗದಲ್ಲಿ ಸೂಚನಾ ಫಲಕ ಸಹ ಅಳವಡಿಸಿಲ್ಲ. ಸದ್ಯ ಈ ಭಾಗದಲ್ಲಿ ಒಂಬತ್ತಕ್ಕೂ ಹೆಚ್ಚು ಬೀದಿ ಅಂಗಡಿಗಳು ತಲೆಎತ್ತಿವೆ. ಜೊತೆಗೆ ಸಂಜೆಯಾಗುತಿದ್ದಂತೆ ಆಟೋಗಳು ಸಾಲು ಸಾಲು ನಿಲ್ಲುತಿದ್ದು ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ. ವೀಕೆಂಡ್ ನಲ್ಲಿ ಹೆಚ್ಚು ಜನ ಈ ಭಾಗದಲ್ಲಿ ನಿಲ್ಲುತಿದ್ದು ಅಪಘಾತ ಆಗುವ ಸಂಭವಗಳಿವೆ.
ಫುಡ್ ಕೋರ್ಟ ನೆಪಕ್ಕೆ!
ಇನ್ನು ನಗರಸಭೆಯಿಂದ ಅಣತಿ ದೂರದಲ್ಲಿ ಫುಟ್ ಕೋರ್ಟ ( food court) ಮಾಡಲಾಗಿದೆ. ಆದ್ರೆ ಇದು ನೆಪಕ್ಕೆ ಮಾತ್ರ ಇರುವಂತಾಗಿದ್ದು ಕಡಲ ತೀರ ಭಾಗದ ಹೆದ್ದಾರಿ ಪಕ್ಕದಲ್ಲಿ ದಿನದಿಂದ ದಿನಕ್ಕೆ ಬೀದಿ ವ್ಯಾಪಾರಿಗಳು ಹೆಚ್ಚಾಗುತಿದ್ದಾರೆ.
ಸರಿಯಾದ ವ್ಯವಸ್ಥೆ ಕಲ್ಪಿಸಲಿ.

ಬೀದಿ ಬದಿ ವ್ಯಾಪಾರಿಗಳು ಹೊಟ್ಟೆಪಾಡಿಗಾಗಿ ಇಲ್ಲಿ ಅಂಗಡಿ ಹಾಕಿಕೊಂಡಿದ್ದಾರೆ. ಆದರೇ ಈ ಅಂಗಡಿಗಳು ರಸ್ತೆ ತುದಿಯಲ್ಲಿ ಇದ್ದು ಯಾವಾಗ ಬೇಕಾದರೂ ಅಪಾಯ ತಂದೊಡ್ಡುತ್ತದೆ. ಹೀಗಾಗಿ ಅವರಿಗೆ ಸೂಕ್ತ ಜಾಗದ ವ್ಯವಸ್ಥೆ ಕಲ್ಪಿಸಬೇಕಿದೆ.
ಇನ್ನು ಕ್ರಾಸ್ ನಲ್ಲಿ ನಿಲ್ಲುವ ಆಟೋಗಳಿಗೂ ಸಹ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡದಿದ್ದರೇ ಮತ್ತಷ್ಟು ಅಪಾಯ ತರಲಿದೆ. ನಗರಸಭೆ ,ಆಡಳಿತ ವ್ಯವಸ್ಥೆ ಈ ಬಗ್ಗೆ ಗಮನಹಿರಿಸಬೇಕಿದೆ ಜೊತೆಗೆ ಹೆದ್ದಾರಿ ಪ್ರಾಧಿಕಾರವೂ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕಿದೆ.