ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karwar: ಹಡಗಿನಲ್ಲಿ ಕಾರವಾರಕ್ಕೆ ಬಂದ ಪಾಕಿಸ್ತಾನಿ ಪ್ರಜೆ !

ಕಾರವಾರ:- ಭಾರತ -ಫಾಕಿಸ್ತಾನದ (pakisthan)ಯುದ್ಧ ಬಿಕ್ಕಟ್ಟಿನ ನಡುವೆಯೇ ನಿರ್ಬಂಧವಿದ್ದರೂ ಫಾಕಿಸ್ತಾನದ ಪ್ರಜೆಗಳು ಭಾರತಕ್ಕೆ ಬರುತಿದ್ದು ಇರಾಕ್ ಮೂಲದ ಹಡಗಿನ ಮೂಲಕ ಬಂದ ಪಾಕಿಸ್ತಾನದ ಪ್ರಜೆಯನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಂದರಿನಲ್ಲಿ ತಡೆಹಿಡಿದು ತನಿಖೆ
09:54 PM May 14, 2025 IST | ಶುಭಸಾಗರ್
ಕಾರವಾರ:- ಭಾರತ -ಫಾಕಿಸ್ತಾನದ (pakisthan)ಯುದ್ಧ ಬಿಕ್ಕಟ್ಟಿನ ನಡುವೆಯೇ ನಿರ್ಬಂಧವಿದ್ದರೂ ಫಾಕಿಸ್ತಾನದ ಪ್ರಜೆಗಳು ಭಾರತಕ್ಕೆ ಬರುತಿದ್ದು ಇರಾಕ್ ಮೂಲದ ಹಡಗಿನ ಮೂಲಕ ಬಂದ ಪಾಕಿಸ್ತಾನದ ಪ್ರಜೆಯನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಂದರಿನಲ್ಲಿ ತಡೆಹಿಡಿದು ತನಿಖೆ
featuredImage featuredImage

Karwar: ಹಡಗಿನಲ್ಲಿ ಕಾರವಾರಕ್ಕೆ ಬಂದ ಪಾಕಿಸ್ತಾನಿ ಪ್ರಜೆ !

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ:- ಭಾರತ -ಫಾಕಿಸ್ತಾನದ (pakistan)ಯುದ್ಧ ಬಿಕ್ಕಟ್ಟಿನ ನಡುವೆಯೇ ನಿರ್ಬಂಧವಿದ್ದರೂ ಫಾಕಿಸ್ತಾನದ ಪ್ರಜೆಗಳು ಭಾರತಕ್ಕೆ ಬರುತಿದ್ದು ಇರಾಕ್ ಮೂಲದ  ಹಡಗಿನ ಮೂಲಕ ಬಂದ ಪಾಕಿಸ್ತಾನದ ಪ್ರಜೆಯನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಂದರಿನಲ್ಲಿ ತಡೆಹಿಡಿದು

ತನಿಖೆ ನಂತರ ಇಂದು ಹಡಗಿನ ಸಮೇತ ಭಾರತದ ಗಡಿಯಿಂದ ಕಳುಹಿಸಲಾಗಿದೆ.

ಇದನ್ನೂ ಓದಿ:-Karwar : ಮಾಕ್ ಡ್ರಿಲ್ ಪ್ರಥಮಬಾರಿಗೆ ಫೈರ್ ಬೋಟ್ ಬಳಕೆ ,ಏನಿದು ವಿಶೇಷ ಗೊತ್ತಾ?

Advertisement

ಇರಾಕ್ ನ ಅಲ್ ಜುಬೇರ್ ನಿಂದ ಮೇ .12 ಕ್ಕೆ ಕಾರವಾರ ಬಂದರಿಗೆ ಬಿಟುಮಿನ್ ತುಂಬಿಕೊಂಡು ಕಾರವಾರದ  ಬಂದರಿಗೆ ಬಂದಿದ್ದ ಸರಕು ಸಾಗಾಣಿಕೆ ಹಡಗಿನಲ್ಲಿ ಪಾಕಿಸ್ತಾನದ ಓರ್ವ , ಭಾರತ ಮೂಲದ 15 , ಸಿರಿಯಾ -2 ಪ್ರಜೆಗಳು ಶಿಪ್ ನಲ್ಲಿ ಇದ್ದರು.

 ಕಾರವಾರ ಬಂದರಿಗೆ (katwar port) ಆಗಮಿಸುತಿದ್ದಂತೆ  ಈವೇಳೆ ಮಾಹಿತಿ ಪಡೆದ ಬಂದರು ಇಲಾಖೆ ಅಧಿಕಾರಿಗಳು ಕರಾವಳಿ ಕಾವಲುಪಡೆಗೆ ಮಾಹಿತಿ ನೀಡಿದ್ದಾರೆ.

 ಶಿಪ್ ನಲ್ಲಿ ಇದ್ದ ಪಾಕಿಸ್ತಾನಿ ಪ್ರಜೆಯಿಂದ ಮೊಬೈಲ್ ಇತರೆ ಉಪಕರಣಗಳನ್ನು ಷಿಪ್ ಕ್ಯಾಪಟನ್ ಗೆ  ವಶಕ್ಕೆ ಪಡೆಯಲು ಸೂಚನೆ ನೀಡಿದ್ದು ನಂತರ ನಿಬಂಧನೆ ಮೂಲಕ ಶಿಫ್ ಸಮೇತ ಇಂದು ಗಡಿ ದಾಟಿಸಲಾಗಿದೆ.

ಪಹಲ್ಗಾವ್ ದಾಳಿಯ ನಂತರ ಭಾರತದ ಬಂದರುಗಳಿಗೆ ಪಾಕಿಸ್ತಾನ ಹಾಗೂ ಚೀನಾದ ಹಡಗುಗಳಿಗೆ ನಿರ್ಬಂಧ ವಿಧಿಸಲಾಗಿದೆ.ಆದರೇ ಇತರೆ ದೇಶದ ಹಡಗುಗಳು ಭಾರತಕ್ಕೆ ಬಂದಾಗ ಆ ಹಡಗಿನಲ್ಲಿ ಪಾಕಿಸ್ತಾನದ  ಸಿಬ್ಬಂದಿಗಳು ಸಹ ಇರುತ್ತಾರೆ. ಹೀಗಾಗಿ ಮಾಹಿತಿ ಪಡೆದು ನಂತರ ಕಳುಹಿಸಲಾಗುತ್ತಿದೆ.

ಶಿಪ್ ಮೂಲಕ ಭಾರತಕ್ಕೆ ಬರಬಹುದೇ ?

ಇನ್ನು ಇತರೆ ದೇಶದ ಶಿಪ್ ಗಳಲ್ಲಿ ಪಾಕಿಸ್ತಾನದ ಪ್ರಜೆಗಳು ಸಹ ಕರ್ತವ್ಯ ನಿರ್ವಹಿಸುತಿದ್ದಾರೆ.ಸರಕು ಸಾಗಾಟದ ಹಡಗುಗಳು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗುವುದು ಸಾಮಾನ್ಯ.

ಈ ರೀತಿಯ ಸಂದರ್ಭದಲ್ಲಿ ಕೆಲವು ವಿನಾಯಿತುಗಳು ಸಹ ಇರುತ್ತದೆ. ಈ ವಿನಾಯಿತಿಯಲ್ಲಿ ಅವರನ್ನು ಬಂಧಿಸದೇ ತನಿಖೆ ನಡೆಸಿ ಮರಳಿ ಕಳುಹಿಸಲಾಗುತ್ತದೆ.

Advertisement
Tags :
IndiaKannda newsKarnatakaKarwarpakistanPortship
Advertisement
Advertisement