Karwar:ನಿಷೇಧಿತ ನಾಗರಮುಡಿ ಜಲಪಾತದಲ್ಲಿ ಗಾಂಜಾ ಸೇವಿಸಿ ಅನುಚಿತ ವರ್ತನೆ-ಮೂರು ಜನರ ಬಂಧನ
Karwar:ನಿಷೇಧಿತ ನಾಗರಮುಡಿ ಜಲಪಾತದಲ್ಲಿ ಗಾಂಜಾ ಸೇವಿಸಿ ಅನುಚಿತ ವರ್ತನೆ-ಮೂರು ಜನರ ಬಂಧನ
ಕಾರವಾರ: ನಾಗರಮಡಿ ಜಲಪಾತದ ಬಳಿ ಗಾಂಜಾ ಸೇವಿಸಿ ಪ್ರವಾಸಿಗರ ಜೊತೆ ಅಸಭ್ಯ ವರ್ತನೆ ಮಾಡಿದ್ದ ಮೂವರನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:-Karwar ಕದಂಬ ನೌಕಾನೆಲೆಗಾಗಿ ಭೂಮಿ ಕೊಟ್ಟವರಿಗೆ 30 ವರ್ಷದ ನಂತರ ಸಿಕ್ತು ಪರಿಹಾರ
ಕಾರವಾರ ತಾಲೂಕಿನ ಚೆಂಡಿಯಾದ ನಾಗರಮುಡಿ ಜಲಪಾತದ ಬಳಿ ಅಮಲು ಪದಾರ್ಥ ಸೇವಿಸುತ್ತಿದ್ದ ಸ್ಥಳೀಯ ಮೂವರು ಯುವಕರು ಬಂದ ಪ್ರವಾಸಿಗರಬಳಿ ಅಸಭ್ಯ ವರ್ತನೆ ತೋರಿದ್ದರು.ಈ ಕುರಿತು ಕಾರವಾರಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು . ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯ ಮೂವರನ್ನು ಬಂಧಿಸಿದ್ದರು.
ನಂತರ ವೈದ್ಯಕೀಯ ಪರೀಕ್ಷೆ ನಡೆಸಿದ್ದು ಇವರು ಗಾಂಜಾ ಸೇವಿಸಿರುವ ಕುರಿತು ದೃಡಪಟ್ಟ ಹಿನ್ನಲೆಯಲ್ಲಿ ಈ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:-Karwar: ನಕಲಿ ದಾಖಲೆ ನೀಡಿ ನ್ಯಾಯಾಲಯಕ್ಕೆ ವಂಚನೆ- ಮಹಿಳೆಗೆ 14 ದಿನ ನ್ಯಾಯಾಂಗ ಬಂಧನ
ಕಾರವಾರ ತಾಲೂಕಿನ ಚೆಂಡಿಯಾ ಬಳಿಯ ನಾಗರಮುಡಿ ಜಲಪಾತಕ್ಕೆ ಪ್ರವಾಸಿಗರಿಗೆ ನಿರ್ಬಂಧವಿದೆ. ಆದರೂ ಭಾನುವಾರ ಎಂದಾಕ್ಷಣ ಪ್ರವಾಸಿಗರು ಈ ಭಾಗಕ್ಕೆ ಪ್ರವಾಸ ಬಂದು ನೀರಿನಲ್ಲಿ ಈಜುವುದು ,ಮೋಜು ಮಸ್ತಿ ಮಾಡುವುದು ಸಾಮಾನ್ಯವಾಗಿದೆ. ಕಳೆದ ನಾಲ್ಕು ವರ್ಷದ ಹಿಂದೆ ಇದೇ ಸ್ಥಳದಲ್ಲಿ ಹೆಚ್ಚಿನ ನೀರು ಬಂದು ಪ್ರವಾಸಿಗರು ಅಸುನೀಗಿದ್ದರು.
ಹೀಗಾಗಿ ಈ ಭಾಗದಲ್ಲಿ ಪೊಲೀಸರು ಇದೀಗ ಕ್ರಮ ಕೈಗೊಂಡಿದ್ದು ,ಪ್ರವಾಸಿಗರಿಗೆ ಮಳೆ ಮುಗಿಯುವ ವರೆಗೆ ಇತ್ತ ಬಾರದಂತೆ ಎಚ್ಚರಿಕೆ ನೀಡಿದ್ದಾರೆ.