Rain damage| ಮಳೆ ಅಬ್ಬರ ಮಾವಿನ ಮರ ಬಿದ್ದು ಏಳು ಬೈಕ್ ಜಕಂ, ಆಕಳು ಸಾವು
Rain damage| ಮಳೆ ಅಬ್ಬರ ಮಾವಿನ ಮರ ಬಿದ್ದು ಏಳು ಬೈಕ್ ಜಕಂ, ಆಕಳು ಸಾವು
ಕಾರವಾರ (october 24) :- ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಗಾಳಿ-ಮಳೆ ಹೊಡೆತ ಜೋರಾಗಿದ್ದು ,ಕಾರವಾರದ (karwar) ರಾಷ್ಟ್ರೀಯ ಹೆದ್ದಾರಿ 66 ರ ಬಿಣಗಾದ ಕದಂಬ ನೌಕಾನೆಲೆಯ ಗೇಡ್ ಬಳಿ ಬೃಹದಾಕಾರದ ಮಾವಿನ ಮರ ಉರುಳಿ ಬಿದ್ದು ಏಳು ಬೈಕ್ ಜಕುಮ್ ಆಗಿದ್ದು, ಒಂದು ಆಕಳು ಸಾವು ಕಂಡರೇ ಮತ್ತೊಂದು ಆಕಳಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ.
Karwar| ಕಾರವಾರ,ಗೋವಾ ಕರಾವಳಿಯಲ್ಲಿ ಪ್ರಧಾನಿ ಮೋದಿ | ಹೇಗಿತ್ತು ಗೊತ್ತಾ ದೀಪಾವಳಿ ಝಲಕ್ ?
ಹೆಚ್ಚಿನ ಗಾಳಿ ಬೀಸಿದ್ದರಿಂದ ಹಳೆಯ ಮಾವಿನ ಮರದ ಬೃಹದಾಕಾರದ ಕೊಂಬೆ ತುಂಡಾಗಿ ಬಿದ್ದಿದೆ. ಮರದ ಪಕ್ಕದಲ್ಲೇ ಕಾರವಾರದ (karwar)ಬಿಣಗಾ ಬಳಿ ನೌಕಾ ನೆಲೆಗೆ ಕೆಲಸಕ್ಕೆ ತೆರಳಲು ಬೈಕ್ ನಿಲ್ಲಿಸಿಟ್ಟಿದ್ದು ಇದರಿಂದ ಹಾನಿ ಸಂಭವಿಸಿದೆ. ಸ್ಥಳಕ್ಕೆ ನೌಕಾನೆಲೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದವರು ಮರವನ್ನು ತುಂಡರಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ.
ಮೀನುಗಾರಿಕೆ , ಪ್ರವಾಸೋಧ್ಯಮ ಸ್ತಬ್ದ
ಇನ್ನು ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಮೀನುಗಾರಿಕೆ ಬಂದ್ ಆಗಿದ್ದು ಕಾರವಾರ ಬಂದರು ಸೇರಿದಂತೆ ಜಿಲ್ಲೆಯ ಬಂದರಿನಲ್ಲಿ ರಾಜ್ಯ ಹೊರ ರಾಜ್ಯದ ಬೋಟುಗಳು ಲಂಗುರು ಹಾಕಿದವು.
ಇದಲ್ಲದೇ ಸಮುದ್ರ ಭಾಗದಲ್ಲಿ ಭಾರಿ ಗಾಳಿ,ಮಳೆ ಇದ್ದ ಪರಿಣಾಮ ಪ್ರವಾಸೋಧ್ಯಮ ಚಟುವಟಿಕೆ ಸಹ ಬಂದ್ ಆಗಿದ್ದು ಕರಾವಳಿ ಭಾಗದ ಜಲಸಾಹಸ ಕ್ರೀಡೆಗಳು ಬಂದ್ ಆಗಿದ್ದವು.

And for orders more than 2499 rs 15% discount ( for Deepavali)
We also take birthday parties and family get together etc also




