ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Court case| ಅಕ್ರಮ ಅದಿರು ನಾಪತ್ತೆ ಪ್ರಕರಣ ನವಂಬರ್ 7 ರ ವರೆಗೆ ಸತೀಶ್ ಸೈಲ್ ಜಾಮೀನು ವಿಸ್ತರಣೆ

Karwar MLA Satish Sail’s bail has been extended till November 7 in the illegal iron ore export case from Belekeri port. The People’s Representative Court granted the extension citing health reasons. Sail, who was earlier convicted and under ED investigation, continues to be on bail.
09:47 PM Oct 24, 2025 IST | ಶುಭಸಾಗರ್
Karwar MLA Satish Sail’s bail has been extended till November 7 in the illegal iron ore export case from Belekeri port. The People’s Representative Court granted the extension citing health reasons. Sail, who was earlier convicted and under ED investigation, continues to be on bail.

Court case| ಅಕ್ರಮ ಅದಿರು ನಾಪತ್ತೆ ಪ್ರಕರಣ ನವಂಬರ್ 7 ರ ವರೆಗೆ ಸತೀಶ್ ಸೈಲ್ ಜಾಮೀನು ವಿಸ್ತರಣೆ.

Advertisement

ಕಾರವಾರ:- ಬೆಲೇಕೇರಿ ಬಂದರಿನಿಂದ ಆಕ್ರಮ ಅದಿರು ಸಾಗಾಟ ಪ್ರಕರಣ‌ದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ(court)  ಶಿಕ್ಷೆಗೊಳಗಾಗಿದ್ದ ಕಾರವಾರದ (karwar)ಶಾಸಕ ಸತೀಶ್ ಸೈಲ್ ಗೆ  ನವೆಂಬರ್ 7 ರ ವರೆಗೆ ಜಾಮೀನು ವಿಸ್ತರಣೆ ಮಾಡಿ ಜನಪ್ರತಿನಿಧಿಗಳ ನ್ಯಾಯಾಲಯ  ಆದೇಶ ಮಾಡಿದೆ.

Karwar: ಶಾಸಕ ಸೈಲ್ ಮನೆಯಮೇಲೆ ED ರೈಡ್ |ಸಿಕ್ಕಿದ್ದೇನು?

ಕಾರವಾರ (karwar)ವಿಧಾನ ಸಭಾ  ಕ್ಷೇತ್ರದ ಕಾಂಗ್ರೆಸ್  ಶಾಸಕರಾಗಿರು ಸತೀಶ್ ಸೈಲ್ ಆಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು. ಇದಲ್ಲದೇ ಇವರ ಮನೆಯ ಮೇಲೆ ಇಡಿ ದಾಳಿ ನಡೆಸಿ ಕೋಟ್ಯಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ವಶಕ್ಕೆ ಪಡೆದಿತ್ತು.

Advertisement

ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಚಿಕಿತ್ಸೆ ಪಡೆಯುತಿದ್ದ ಸತೀಶ್ ಸೈಲ್  ಇಡಿ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದು ಅಕ್ಟೋಬರ್ 25 ರವರೆಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.

ಆರೋಗ್ಯ ಸಮಸ್ಯೆ ಹಾಗೂ ಚಿಕಿತ್ಸೆ ಕಾರಣದಿಂದ ಜಾಮೀನು ವಿಸ್ತರಿಸುವಂತೆ  ಸೈಲ್ ಕೊರಿದ್ದ ಅರ್ಜಿಯನ್ನ ಪರಿಗಣಿಸಿದ ಜನಪ್ರತಿನಿಧಿ ನ್ಯಾಯಾಲಯ ನವೆಂಬರ್ 7 ರ ವರೆಗೆ ಜಾಮೀನು ವಿಸ್ತರಿಸಿ ಆದೇಶಿಸಿದೆ.

ಇನ್ನು ಜನಪ್ರತಿನಿಧಿ ನ್ಯಾಯಾಲಯದಲ್ಲಿ ಶಿಕ್ಷೆಗೊಳಗಾಗಿ ತಡೆಯಾಜ್ಞೆ ಸಹ ಹೈಕೋರ್ಟ ನಿಂದ ಪಡೆದುಕೊಂಡಿದ್ದು ಸದ್ಯ ಈ ಪ್ರಕರಣದಲ್ಲಿ ಸಹ ಜಾಮೀನಿನ ಮೇಲೆ ಸೈಲ್ ಇದ್ದಾರೆ‌. ಸಧ್ಯ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿರುವ ಸೈಲ್ ಇಡಿ ತನಿಖೆಗೂ ಹಾಜುರಾಗಬೇಕಿದೆ.

Advertisement
Tags :
Bail Extensionbelekeri portcongress mlacourt CaseED investigationIllegal Ore CaseKarnataka politicsKarwarSatish SailUttara Kannada news
Advertisement
Next Article
Advertisement