ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karwar|ಸುಭಾಷ್ ಚಂದ್ರಬೋಸ್ ಪ್ರತಿಮೆ ವಿರೂಪ|ಒಂದುವಾರವಾದ್ರೂ ನಿರ್ಲಕ್ಷ!

Karwar news:-Subhash Chandra Bose statue at Karwar Circle remains damaged for a week while the city municipality ignores public outcry. Locals warn of protest if the issue isn’t fixed soon.
03:39 PM Nov 06, 2025 IST | ಶುಭಸಾಗರ್
Karwar news:-Subhash Chandra Bose statue at Karwar Circle remains damaged for a week while the city municipality ignores public outcry. Locals warn of protest if the issue isn’t fixed soon.

Karwar|ಸುಭಾಷ್ ಚಂದ್ರಬೋಸ್ ಪ್ರತಿಮೆ ವಿರೂಪ|ಒಂದುವಾರವಾದ್ರೂ ನಿರ್ಲಕ್ಷ!

Advertisement

Karwar news (06 November2025) :-ಉತ್ತರ ಕನ್ನಡ ಜಿಲ್ಲೆಯ  ಕಾರವಾರ(Karwar) ನಗರದ ಹೃದಯಭಾಗದಲ್ಲಿ ಇರುವ  ಸುಭಾಷ್ ಚಂದ್ರಬೋಸ್  ವೃತ್ತದಲ್ಲಿ ಇರುವ ಸುಭಾಷ್ ಚಂದ್ರಬೋಸ್ ಪ್ರತಿಮೆ ವಿರೂಪ ವಾಗಿದ್ದು ಒಂದು ವಾರದ ಹಿಂದೆ ಯೇ ವಿರೂಪವಾಗಿದ್ದರೂ  ಸರಿಪಡಿಸದೇ ಕಾರವಾರ ನಗರಸಭೆ ನಿರ್ಲಕ್ಷ ವಿರುದ್ಧ ಜನ ಕಿಡಿ ಕಾರಿದ್ದಾರೆ.

 ಕಾರವಾರ(karwar) ನಗರಸಭೆ 1973 ರಲ್ಲಿ ಈ ಪ್ರತಿಮೆಯನ್ನು ಪ್ರತಿಷ್ಟಾಪನೆ ಮಾಡಿದ್ದು, ನಗರದ ಹೃದಯ ಭಾಗದಲ್ಲಿ ಇರುವ ಈ ಪ್ರತಿಮೆ ಇರುವ ಸ್ಥಳವನ್ನು  ಸುಭಾಷ್ ಚಂದ್ರಬೋಸ್ ಸರ್ಕಲ್ ಎಂದು ಕರೆಯುತ್ತಾರೆ. ಇದಲ್ಲದೇ ಇದು ನಗರದ ಮುಖ್ಯ ರಸ್ತೆಯೂ ಆಗಿದ್ದು ಒಂದು ವಾರದಿಂದ ಈ ಪ್ರತಿಮೆ ವಿರೂಪವಾದರೂ ನಗರಸಭೆ ಸರಿಪಡಿಸುವ ಕೆಲಸಕ್ಕೆ ಕೈಹಾಕಿಲ್ಲ. ಮೂರ್ತಿಯ ಕನ್ನಡಕ ತುಂಡಾಗುವ ಹಂತ ತಲುಪಿದ್ದು, ಪೂರ್ಣ ಬೆಂಡಾಗಿದೆ.ಹೀಗಿದ್ದರೂ ಒಂದು ವಾರದಿಂದ ವಿರೂಪವಾಗಿ ಹಾಗೆಯೇ ಇದ್ದು,ಹಲವರು ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

karwar subhash chandra bose statue damaged neglected

ಇನ್ನು ಕನ್ನಡ ರಾಜ್ಯೂತ್ಸವ ಸಂದರ್ಭದಲ್ಲಿ ಲೈಂಟಿಂಗ್ ಸಹ ಅಳವಡಿಸಿದ್ದ ನಗರಸಭೆ ವಿರೂಪವಾಗಿದ್ರೂ ಸರಿಪಡಿಸದೇ ಹಾಗೆಯೇ ಬಿಟ್ಟಿದೆ‌ .ಇನ್ನು ನಗರಸಭೆ ನಿರ್ಲಕ್ಷಕ್ಕೆ ಜನ ಕಿಡಿಕಾರಿದ್ದು , ಸರಿಪಡಿಸದಿದ್ದರೇ ನಗರಸಭೆ ಎದುರು ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.

Advertisement

ವಿರೂಪಗೊಂಡ ಪ್ರತಿಮೆ ವಿಡಿಯೋ ನೋಡಿ:-

Advertisement
Tags :
Kannada newsKarnataka newsKarwarKarwar CityKarwar MunicipalityKarwar ProtestPublic NegligenceStatue damageSubhash Chandra BoseUttara Kannada
Advertisement
Next Article
Advertisement