Karwar | ಭಾನುವಾರ ಸಂತೆ ಸ್ಥಳಾಂತರ ಎಲ್ಲಿ ವಿವರ ನೋಡಿ.
Karwar | ಭಾನುವಾರ ಸಂತೆ ಸ್ಥಳಾಂತರ ಎಲ್ಲಿ ವಿವರ ನೋಡಿ.
ಡಿ.7 ರಂದು ಸಂತೆ ಮಾರುಕಟ್ಟೆ ದೋಬಿಘಾಟ್ ಗೆ ಸ್ಥಳಾಂತರ
ಕಾರವಾರ: ಉಚ್ಛನ್ಯಾಯಾಲಯ ಬೆಂಗಳೂರಿನ ನ್ಯಾಯಮೂರ್ತಿಗಳು ಹಾಗೂ ಇನ್ನಿತರ ನ್ಯಾಯಾಮೂರ್ತಿಗಳು ಕಾರವಾರ (karwar)ನಗರ ವ್ಯಾಪ್ತಿಯಲ್ಲಿ ಡಿ.6 ಮತ್ತು 7 ರಂದು ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, ಅವರ ಪ್ರಯಾಣಕ್ಕೆ ಅಡೆತಡೆಯಾಗದಂತೆ ಎಂ.ಜಿ ರಸ್ತೆಯನ್ನು ಅನವು ಮಾಡಲು ಡಿ.7 ರಂದು ಕಾರವಾರ ಸಂತೆಯನ್ನು ದೋಭಿಘಾಟ ರಸ್ತೆಗೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿದ್ದು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಕಾರವಾರ ನಗರಸಭೆ ಪೌರಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರವಾರ ದಲ್ಲಿ ಡಿ. 6 ರಂದು ಪವರ್ ಕಟ್.
ಕಾರವಾರ (karwar) ಉಪ ವಿಭಾಗದ ವ್ಯಾಪ್ತಿಯಲ್ಲಿ ವಾಹಕ ಬದಲಾವಣೆ ಕಾಮಗಾರಿ ಇರುವುದರಿಂದ ಶಿರವಾಡ ಫೀಡರಿನ ಎಲ್ಲಾ ಪ್ರದೇಶಗಳಲ್ಲಿ ಡಿ.6 ರಂದು ಬೆಳಗ್ಗೆ 9.30 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ಕಾರವಾರ ಹೆಸ್ಕಾಂ, ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್(ವಿ) ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Karwar| ಮರದ ಎಲೆಗೆ ಹಚ್ಚಿದ ಬೆಂಕಿ ಆವರಿಸಿದ್ದು ಕಾಲೇಜು ಕಟ್ಟಡಕ್ಕೆ! ಏನಾಯ್ತು ವಿವರ ನೋಡಿ.