Karwar :ಮನೆ ಕಳ್ಳತನ ಆರೋಪ ಯುವಕನನ್ನು ಕಟ್ಟಿಹಾಕಿದ ಗ್ರಾಮಸ್ಥರು!
Karwar :ಮನೆ ಕಳ್ಳತನ ಆರೋಪ ಯುವಕನನ್ನು ಕಟ್ಟಿಹಾಕಿದ ಗ್ರಾಮಸ್ಥರು!
ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಕಾರವಾರ (karwar) ತಾಲ್ಲೂಕಿನ ಅಸ್ನೋಟಿ ಗ್ರಾಮದಲ್ಲಿ ಮನೆ ಕಳ್ಳತನ ಮಾಡಿದ ಆರೋಪಿತ ಯುವಕನನ್ನು ಸಾರ್ವಜನಿಕರು ಹಿಡಿದು ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಊರಿನ ಸುರಕ್ಷಾ ಸಾಳಂಕೆ ಎಂಬುವವರ ಮನೆಯಲ್ಲಿ ಎರಡು ದಿನಗಳ ಹಿಂದೆ ಕಳ್ಳತನ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಯಿಡಾ ತಾಲೂಕಿನ ಸಮೀರ್ ದೇಸಾಯಿ ಎಂಬ ಯುವಕನ ವಿರುದ್ಧ ಶಂಕೆ ವ್ಯಕ್ತವಾಗಿತ್ತು.
ಇದನ್ನೂ ಓದಿ:-Karwar :ಕಾಳಿ ಸೇತುವೆಯ ಮೇಲೆ ಬಿದ್ದ ಹಳೆಸೇತುವೆ ತುಂಡು- ಅಲ್ಪದರಲ್ಲೇ ತಪ್ಪಿದ ಭಾರಿ ಅನಾಹುತ
ಸಮೀರ್ ಕಳ್ಳತನ ಮಾಡಿದ ನಂತರ ಊರಿನಿಂದ ಪರಾರಿಯಾಗಿದ್ದ ಎಂದು ಹೇಳಲಾಗಿದೆ. ಆದರೆ ನಿನ್ನೆ ರಾತ್ರಿ ಅಸ್ನೋಟಿಗೆ ವಾಪಸ್ ಬಂದಾಗ ಸ್ಥಳೀಯರು ಅವನನ್ನು ಹಿಡಿದು ಕಟ್ಟಿಹಾಕಿದ್ದಾರೆ.
ನಂತರ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದು, ಬಳಿಕ ಆರೋಪಿಯನ್ನು ಚಿತ್ತಾಕುಲಾ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಈ ಕುರಿತು ಚಿತ್ತಾಕುಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೋ ನೋಡಿ:-